ರಾಂಚಿ ಫೈಟ್: ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ

By Web Desk  |  First Published Mar 8, 2019, 1:12 PM IST

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತವರು ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಕೊಹ್ಲಿ ಬಾಯ್ಸ್ ಮಾಜಿ ನಾಯಕನಿಗೆ ಗೆಲುವಿನ ಉಡುಗೊರೆ ನೀಡಲು ಸಜ್ಜಾಗಿದೆ. ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.


ರಾಂಚಿ[ಮಾ.08]: ಭಾರತ-ಆಸ್ಟ್ರೇಲಿಯಾ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ದುಕೊಂಡಿದೆ. ಈಗಾಗಲೇ ಮೊದಲೆರಡು ಪಂದ್ಯ ಗೆದ್ದು ಬೀಗುತ್ತಿರುವ ಆತಿಥೇಯ ಟೀಂ ಇಂಡಿಯಾ ಹ್ಯಾಟ್ರಿಕ್ ಗೆಲುವಿನೊಂದಿಗೆ ಸರಣಿ ಕೈವಶ ಮಾಡಿಕೊಳ್ಳುವ ಕನವರಿಕೆಯಲ್ಲಿದೆ.

Tap to resize

Latest Videos

undefined

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತವರು ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಕೊಹ್ಲಿ ಬಾಯ್ಸ್ ಮಾಜಿ ನಾಯಕನಿಗೆ ಗೆಲುವಿನ ಉಡುಗೊರೆ ನೀಡಲು ಸಜ್ಜಾಗಿದೆ. ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಆಸ್ಟ್ರೇಲಿಯಾ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು ನೇಥನ್ ಕೌಲ್ಟರ್ ನೀಲ್ ಬದಲಿಗೆ ಜೇ ರಿಚರ್ಡ್’ಸನ್ ಕಣಕ್ಕಿಳಿಯುತ್ತಿದ್ದಾರೆ.

ಈಗಾಗಲೇ ಹೈದರಾಬಾದ್ ಹಾಗೂ ನಾಗ್ಪುರ ಪಂದ್ಯಗಳನ್ನು ರೋಚಕವಾಗಿ ಜಯಿಸಿರುವ ಭಾರತ ಇದೀಗ ಅಂತಹದ್ದೇ ಪ್ರದರ್ಶನದ ವಿಶ್ವಾಸದಲ್ಲಿದೆ. ಇನ್ನು ಮೊದಲೆರಡು ಪಂದ್ಯಗಳಲ್ಲಿ ಸೋಲುಕಂಡಿರುವ ಪ್ರವಾಸಿ ಆಸ್ಟ್ರೇಲಿಯಾ ಸರಣಿಯಲ್ಲಿ ಉಳಿದುಕೊಳ್ಳಬೇಕಾದರೆ ಗೆಲ್ಲಲೇ ಬೇಕಾದ ಒತ್ತಡದಲ್ಲಿ ಸಿಲುಕಿದೆ. ಹೀಗಾಗಿ ಮೂರನೇ ಪಂದ್ಯ ಸಾಕಷ್ಟು ರೋಚಕತೆ ಹುಟ್ಟುಹಾಕಿದೆ.

ತಂಡಗಳು ಹೀಗಿವೆ:

ಭಾರತ:

3rd ODI. India XI: R Sharma, S Dhawan, V Kohli, A Rayudu, V Shankar, K Jadhav, MS Dhoni, R Jadeja, K Yadav, M Shami, J Bumrah https://t.co/DQCJoMdrym

— BCCI (@BCCI)

ಆಸ್ಟ್ರೇಲಿಯಾ:

3rd ODI. India XI: R Sharma, S Dhawan, V Kohli, A Rayudu, V Shankar, K Jadhav, MS Dhoni, R Jadeja, K Yadav, M Shami, J Bumrah https://t.co/DQCJoMdrym

— BCCI (@BCCI)
click me!