ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ; ಟೀಂ ಇಂಡಿಯಾ 1 & ಆಫ್ರಿಕಾ 2 ಬದಲಾವಣೆ..!

By Suvarna Web DeskFirst Published Feb 10, 2018, 4:18 PM IST
Highlights

ಇನ್ನು ತವರಿನಲ್ಲಿ ಸತತ ಮೂರು ಪಂದ್ಯಗಳನ್ನು ಸೋತು ಕಂಗೆಟ್ಟಿರುವ ಆಫ್ರಿಕಾ ತಂಡಕ್ಕೆ ಎಬಿ ಡಿವಿಲಿಯರ್ಸ್ ಆಗಮನ ಸಾಕಷ್ಟು ಆತ್ಮವಿಶ್ವಾಸ ನೀಡಿದೆ.

ಜೊಹಾನ್ಸ್'ಬರ್ಗ್(ಫೆ.10): ಭಾರತ-ದಕ್ಷಿಣ ಆಫ್ರಿಕಾ ನಡುವಿನ ನಾಲ್ಕನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ದುಕೊಂಡಿದೆ.

ಈಗಾಗಲೇ ಸರಣಿಯಲ್ಲಿ 3-0 ಮುನ್ನಡೆ ಕಾಯ್ದುಕೊಂಡಿರು ಭಾರತ ಈ ಪಂದ್ಯವನ್ನು ಗೆದ್ದು ಸರಣಿ ಕೈವಶ ಮಾಡಿಕೊಳ್ಳುವ ಇರಾದೆಯಲ್ಲಿದೆ. ಬಾರತ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಗಾಯಾಳು ಕೇದಾರ್ ಜಾದವ್ ಬದಲಿಗೆ ಶ್ರೇಯಸ್ ಅಯ್ಯರ್ ತಂಡ ಸೇರಿಕೊಂಡಿದ್ದಾರೆ. ಇನ್ನು ದಕ್ಷಿಣ ಆಫ್ರಿಕಾ ತಂಡದಲ್ಲಿ 2 ಬದಲಾವಣೆ ಮಾಡಲಾಗಿದ್ದು, ಎಬಿ ಡಿವಿಲಿಯರ್ಸ್ ತಂಡ ಕೂಡಿಕೊಂಡಿದ್ದಾರೆ. ಜತೆಗೆ ಇಮ್ರಾನ್ ತಾಹಿರ್ ಬದಲಿಗೆ ಮಾರ್ನೆ ಮಾರ್ಕೆಲ್ ತಂಡಕ್ಕೆ ಕಮ್'ಬ್ಯಾಕ್ ಮಾಡಿದ್ದಾರೆ.

ಇನ್ನು ತವರಿನಲ್ಲಿ ಸತತ ಮೂರು ಪಂದ್ಯಗಳನ್ನು ಸೋತು ಕಂಗೆಟ್ಟಿರುವ ಆಫ್ರಿಕಾ ತಂಡಕ್ಕೆ ಎಬಿ ಡಿವಿಲಿಯರ್ಸ್ ಆಗಮನ ಸಾಕಷ್ಟು ಆತ್ಮವಿಶ್ವಾಸ ನೀಡಿದೆ. ತವರಿನಲ್ಲಿ ಸತತ 17 ಪಂದ್ಯಗಳನ್ನು ಗೆದ್ದು ಮುನ್ನುಗ್ಗುತ್ತಿದ್ದ ಹರಿಣಗಳ ಪಡೆಯ ಜಯದ ನಾಗಲೋಟಕ್ಕೆ ವಿರಾಟ್ ಪಡೆ ಬ್ರೇಕ್ ಹಾಕಿತ್ತು. ಈ ಪಂದ್ಯವನ್ನು ಟೀಂ ಇಂಡಿಯಾ ಗೆದ್ದರೆ ಆಫ್ರಿಕಾ ನೆಲದಲ್ಲಿ ಚೊಚ್ಚಲ ಏಕದಿನ ಸರಣಿ ಗೆದ್ದು ಇತಿಹಾಸ ನಿರ್ಮಿಸಲಿದೆ.

ತಂಡ ಹೀಗಿದೆ:

ಭಾರತ:

Playing XI for the 4th ODI pic.twitter.com/ubEUVCfSXa

— BCCI (@BCCI)

ಧವನ್, ರೋಹಿತ್, ಕೊಹ್ಲಿ, ರಹಾನೆ, ಧೋನಿ, ಶ್ರೇಯಸ್, ಹಾರ್ದಿಕ್, ಚಾಹಲ್, ಕುಲ್ದೀಪ್, ಭುವಿ, ಬುಮ್ರಾ.

ದ. ಆಫ್ರಿಕಾ:

ಮಾರ್ಕ್'ರಮ್, ಆಮ್ಲಾ, ಡುಮಿನಿ, ಎಬಿ ಡಿವಿಲಿಯರ್ಸ್, ಹೆನ್ರಿಚ್, ಮಿಲ್ಲರ್, ಮೋರಿಸ್, ಮಾರ್ಕೆಲ್, ರಬಾಡ, ಫೆಲುಕ್ವೆನೋ, ಎನ್ಜಿಡಿ.

  

click me!