
ಮಂಬೈ(ಸೆ.05): ಖ್ಯಾತ ಹಿಂದಿ ರಿಯಾಲಿಟಿ ಶೋ ಬಿಗ್ ಬಾಸ್ ತೆರೆಗೆ ಅಪ್ಪಳಿಸಲು ಇನ್ನು ಕೆಲದಿನಗಳು ಮಾತ್ರ. 12ನೇ ಆವೃತ್ತಿ ಹಿಂದಿ ಬಿಗ್ ಬಾಸ್ ಕಾರ್ಯಕ್ರಮ ಸೆಪ್ಟೆಂಬರ್ 16 ರಿಂದ ಆರಂಭಗೊಳ್ಳಲಿದೆ. ಬಾಲಿವುಡ್ ನಟ ಸಲ್ಮಾನ್ ಖಾನ್ ನಡೆಸಿಕೊಡುವು ಈ ರಿಯಾಲಿಟಿ ಶೋಗೆ ಈ ಬಾರಿ ಹಲವು ಸೆಲೆಬ್ರೆಟಿಗಳು ಎಂಟ್ರಿ ಕೊಡಲಿದ್ದಾರೆ.
12ನೇ ಆವೃತ್ತಿ ಬಿಗ್ ಬಾಸ್ ರಿಯಾಲಿಟಿ ಶೋಗೆ ಟೀಂ ಇಂಡಿಯಾ ಕ್ರಿಕೆಟಿಗ, ವೇಗಿ ಎಸ್ ಶ್ರೀಶಾಂತ್ ಎಂಟ್ರಿ ಕೊಡಲಿದ್ದಾರೆ ಅನ್ನೋ ಮಾಹಿತಿ ಬಹಿರಂಗವಾಗಿದೆ. 2005ರಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ ಶ್ರೀಶಾಂತ್, 2013ರ ಐಪಿಎಲ್ ಸ್ಫಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಜೈಲು ಸೇರಿದ್ದರು.
ಶ್ರೀಶಾಂತ್‌ಗೆ ಕೋರ್ಟ್ ಕ್ಲೀನ್ ಚಿಟ್ ನೀಡಿದ್ದರೂ, ಬಿಸಿಸಿಐ ಅಜೀವ ನಿಷೇಧ ಮಾತ್ರ ತೆರುವುಗೊಳಿಸಿಲ್ಲ. ಜೈಲಿನಿಂದ ಬಿಡುಗಡೆಯಾದ ಬಳಿಕ ಶ್ರೀಶಾಂತ್, ಸಿನಿಮಾ, ಡ್ಯಾನ್ಸ್, ರಾಜಕೀಯ ಸೇರಿದಂತೆ ಬಹುತೇಕ ಎಲ್ಲಾ ಕ್ಷೇತ್ರದಲ್ಲೂ ಅಗ್ನಿಪರೀಕ್ಷೆ ನಡೆಸಿದ್ದಾರೆ.
ಇದೀಗ ಹಿಂದಿ ಬಿಗ್ ಬಾಸ್ ರಿಯಾಲಿಟಿ ಶೋಗೆ ಶ್ರೀಶಾಂತ್ ಕರೆ ತರಲು ಎಲ್ಲಾ ಸಿದ್ದತೆ ನಡೆದಿದೆ. 2017ರಲ್ಲಿ ಶ್ರೀಶಾಂತ್ ಜರೀನ್ ಖಾನ್ ಜೊತೆಗೆ ಅಕ್ಸರ್ 2 ಚಿತ್ರದ ಮೂಲಕ ಬಾಲಿವುಡ್‌ಗೂ ಪಾದಾರ್ಪಣೆ ಮಾಡಿದ್ದರು. ಕೆಲ ದಿನಗಳಲ್ಲೇ ಆರಂಭಗೊಳ್ಳಲಿರುವ ಬಿಗ್ ಬಾಸ್ ರಿಯಾಲಿಟಿ ಶೋಗಾಗಿ 21 ಸ್ಪರ್ಧಿಗಳನ್ನ ಆಯ್ಕೆ ಮಾಡಲಾಗಿದೆ. ಇದರಲ್ಲಿ ಶ್ರೀಶಾಂತ್ ಕೂಡ ಸೇರಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.