ಬಿಸಿಸಿಐ-ಆದಿತ್ಯ ವರ್ಮಾ ಜಟಾಪಟಿ- ಮಗನಿಗೆ ಅಮಾನತು ಶಿಕ್ಷೆ!

By Web DeskFirst Published Sep 5, 2018, 8:49 PM IST
Highlights

ಬಿಸಿಸಿಐ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಬಿಹಾರ್ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ಆದಿತ್ಯ ವರ್ಮಾಗೆ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ವರ್ಮಾ ಹಾಗೂ ಬಿಸಿಸಿಐ ನಡುವಿನ ಜಗಳದಲ್ಲಿ ವರ್ಮಾ ಪುತ್ರ ಅಮಾನತ್ತಾಗಿದ್ದಾರೆ. ಇಲ್ಲಿದೆ ಜಟಾಪಟಿ ವಿವರ.

ಬಿಹಾರ್(ಸೆ.05): ಬಿಸಿಸಿಐ ಹಾಗೂ ಬಿಹಾರ್ ಕ್ರಿಕೆಟ್ ಸಂಸ್ಥೆಯ ಸೆಕ್ರೆಟರಿ ಅದಿತ್ಯ ವರ್ಮಾ ಜಗಳ ಇಂದು ನಿನ್ನೆಯದಲ್ಲ. ಐಪಿಎಲ್ ಟೂರ್ನಿಯ ಅವ್ಯವಹಾರ, ಫಿಕ್ಸಿಂಗ್ ಹಾಗೂ ಬಿಸಿಸಿಐ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಅದಿತ್ಯ ವರ್ಮಾ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಶ್ರೀನಿವಾಸನ್ ಸೇರಿದಂತೆ ಭಾರತೀಯ ಕ್ರಿಕೆಟ್ ಸಂಸ್ಥೆಯನ್ನ ಎದುರುಹಾಕಿಕೊಂಡು ಹೋರಾಟ ನಡೆಸಿದ್ದ ಅದಿತ್ಯ ವರ್ಮಾಗೆ ಬಿಸಿಸಿಐ ಶಾಕ್ ನೀಡಿದೆ. ಎನ್ಒಸಿ ಇಲ್ಲದೆ ಇತರ ರಾಜ್ಯದ ಅನಧೀಕೃತ ಲೀಗ್ ಆಡಿದ ಕಾರಣಕ್ಕೆ ಅದಿತ್ಯ ವರ್ಮಾ ಪುತ್ರ ಲಖನ್ ರಾಜಾಗೆ 2 ವರ್ಷಗಳ ಅಮಾನತು ಶಿಕ್ಷೆ ವಿಧಿಸಿದೆ.

ಆದಿತ್ಯ ವರ್ಮಾ ಪುತ್ರ ಲಖನ್ ರಾಜ ಬಿಸಿಸಿಐ ನಿಯಮ ಉಲ್ಲಂಘಿಸಿದ್ದಾರೆ. ಬಿಹಾರ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಗೋಪಾಲ್ ಬೊಹ್ರಾ ಎಚ್ಚರಿಕೆಯನ್ನೂ ನೀಡದೇ ಬರೋಬ್ಬರಿ 2 ವರ್ಷಗಳ ಅಮಾನತು ಶಿಕ್ಷೆ ವಿಧಿಸಿದ್ದಾರೆ.

ಅಮಾನತು ವಿರುದ್ಧ ಅದಿತ್ಯ ವರ್ಮಾ ಮತ್ತೆ ಕೋರ್ಟ್ ಮೆಟ್ಟಿಲೇರಿದ್ದಾರೆ. ಶೋಕಾಸ್ ನೊಟೀಸ್ ನೀಡದೇ ನೇರವಾಗಿ ಅಮಾನತು ಶಿಕ್ಷೆ ನೀಡಿದ್ದು ಸರಿಯಲ್ಲ. ಉದ್ದೇಶ ಪೂರ್ವಕವಾಗಿ ನನ್ನ ಮಗನ ಭವಿಷ್ಯ ಹಾಳು ಮಾಡುತ್ತಿದ್ದಾರೆ ಎಂದು ವರ್ಮಾ ದೂರು ದಾಖಲಿಸಿದ್ದಾರೆ.
 

click me!