ಆಸ್ಪ್ರೇಲಿಯಾದಲ್ಲಿ ಮೊದಲ ಜಯಕ್ಕೆ ಕೊಹ್ಲಿ ಕಾತರ

By Web DeskFirst Published Dec 4, 2018, 9:01 AM IST
Highlights

ಕಳೆದ ಪ್ರವಾಸ(2014)ದಲ್ಲಿ ಎಂ.ಎಸ್‌.ಧೋನಿ ಅನುಪಸ್ಥಿತಿಯಲ್ಲಿ ಅಡಿಲೇಡ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ನಾಯಕತ್ವ ವಹಿಸಿದ್ದ ವಿರಾಟ್‌, ತಂಡವನ್ನು ಗೆಲುವಿನ ಹೊಸ್ತಿಲಿಗೆ ತಂದಿದ್ದರು.

ಅಡಿಲೇಡ್[ಡಿ.04]: ಒಬ್ಬ ಬ್ಯಾಟ್ಸ್‌ಮನ್‌ ಆಗಿ ವಿರಾಟ್‌ ಕೊಹ್ಲಿ ಆಸ್ಪ್ರೇಲಿಯಾದಲ್ಲಿ ಭಾರೀ ಯಶಸ್ಸು ಸಾಧಿಸಿದ್ದಾರೆ, ಆದರೆ ಈ ಬಾರಿ ಅವರ ಬ್ಯಾಟಿಂಗ್‌ಗಿಂತ ಹೆಚ್ಚಾಗಿ ನಾಯಕತ್ವಕ್ಕೆ ಸವಾಲು ಎದುರಾಗಲಿದೆ. 

ಆಸ್ಪ್ರೇಲಿಯಾ ನೆಲದಲ್ಲಿ ಕೊಹ್ಲಿ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಕಳೆದ ಪ್ರವಾಸ(2014)ದಲ್ಲಿ ಎಂ.ಎಸ್‌.ಧೋನಿ ಅನುಪಸ್ಥಿತಿಯಲ್ಲಿ ಅಡಿಲೇಡ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ನಾಯಕತ್ವ ವಹಿಸಿದ್ದ ವಿರಾಟ್‌, ತಂಡವನ್ನು ಗೆಲುವಿನ ಹೊಸ್ತಿಲಿಗೆ ತಂದಿದ್ದರು. 364 ರನ್‌ಗಳ ಬೃಹತ್‌ ಗುರಿ ಬೆನ್ನಟ್ಟಿದ್ದ ಭಾರತ ಕೇವಲ 48 ರನ್‌ಗಳಿಂದ ಸೋಲುಂಡಿತ್ತು. ಕೊಹ್ಲಿ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ್ದರು. 

ಮೆಲ್ಬರ್ನ್‌ ಪಂದ್ಯದ ಬಳಿಕ ಧೋನಿ ದಿಢೀರ್‌ ನಿವೃತ್ತಿ ಘೋಷಿಸಿದ ಬಳಿಕ, ಸಿಡ್ನಿಯಲ್ಲಿ ನಡೆದಿದ್ದ 4ನೇ ಟೆಸ್ಟ್‌ನಲ್ಲಿ ವಿರಾಟ್‌ ಕಾಯಂ ನಾಯಕರಾಗಿ ನೇಮಕಗೊಂಡಿದ್ದರು. ಆ ಪಂದ್ಯವನ್ನು ಭಾರತ ಡ್ರಾ ಮಾಡಿಕೊಂಡಿತ್ತು. ಅದಾದ ನಂತರ ಇದೇ ಮೊದಲ ಬಾರಿಗೆ ಆಸ್ಪ್ರೇಲಿಯಾದಲ್ಲಿ ಟೆಸ್ಟ್‌ ಸರಣಿ ಆಡಲು ತೆರಳಿರುವ ಭಾರತ ತಂಡಕ್ಕೆ ಸರಣಿ ಗೆಲ್ಲಿಸಿಕೊಡುವ ಉತ್ಸಾಹದಲ್ಲಿ ವಿರಾಟ್‌ ಇದ್ದಾರೆ.

ಧೋನಿಯನ್ನು ಹಿಂದಿಕ್ಕಲಿದ್ದಾರಾ ಕೊಹ್ಲಿ?

ವಿರಾಟ್‌ 42 ಟೆಸ್ಟ್‌ಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದು, 24ರಲ್ಲಿ ಗೆಲುವು ಕಂಡಿದ್ದಾರೆ. ಭಾರತದ ಯಶಸ್ವಿ ನಾಯಕರ ಪಟ್ಟಿಯಲ್ಲಿ ಕೊಹ್ಲಿ 2ನೇ ಸ್ಥಾನದಲ್ಲಿದ್ದಾರೆ.

60 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದ ಧೋನಿ 27 ಗೆಲುವುಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ಒಂದೊಮ್ಮೆ ಭಾರತ 4-0 ಅಂತರದಲ್ಲಿ ಸರಣಿ ಜಯಿಸಿದರೆ, ವಿರಾಟ್‌ ಭಾರತದ ಅತ್ಯಂತ ಯಶಸ್ವಿ ನಾಯಕನಾಗಲಿದ್ದಾರೆ.

click me!