
ಟೀಂ ಇಂಡಿಯಾ ಕಂಡ ಅದ್ಭುತ ಎಡಗೈ ವೇಗಿ ಜಹೀರ್ ಖಾನ್ ನಿವೃತ್ತಿ ಘೋಶಿಸಿದ್ದೇ ಬಂತು. ಅವರ ನಂತರ ಯಾವೊಬ್ಬ ಉತ್ತಮ ಲೆಫ್ಟ್ ಆರ್ಮ್ ಬೌಲರ್ ಕೂಡ ಟೀಂ ಇಂಡಿಯಾಗೆ ಎಂಟ್ರಿ ಕೊಡಲೇ ಇಲ್ಲ. ಆಶೀಶ್ ನೆಹ್ರಾ ಇದ್ರೂ ಅವರು ಟಿ20 ಫಾರ್ಮೆಟ್ಗೆ ಸೀಮಿತವಾಗಿಬಿಟ್ರು. ಆದ್ರೆ ಟೆಸ್ಟ್ ಮತ್ತು ಏಕದಿನ ಫಾರ್ಮೆಟ್'ಗೆ ಯಾವೊಬ್ಬ ಲೆಫ್ಟಿ ಕೂಡ ಟೀಂ ಇಂಡಿಯಾಗೆ ಭರವಸೆ ಮೂಡಿಸಲೇ ಇಲ್ಲ. ಬುಮ್ರಾ, ಭುವಿ, ಶಮಿಯಂಥಹ ಅದ್ಭುತ ಬೌಲರ್ಗಳಿದ್ರೂ ಒಬ್ಬ ಲೆಫ್ಟಿ ಇಲ್ಲದಿರೋದು ಟೀಂ ಇಂಡಿಯಾ ಮ್ಯಾನೇಜ್'ಮೆಂಟ್'ಗೆ ಇನ್ನಲ್ಲದಂತೆ ಕಾಡಿದೆ. ಒಬ್ಬ ಎಡಗೈ ವೇಗಿ ತಂಡಕ್ಕೆ ಬೇಕೆ ಬೇಕು ಅಂತ ಬೌಲಿಂಗ್ ಕೋಚ್ ಭರತ್ ಅರೂಣ್ ಒಪ್ಪಿಕೊಳ್ತಾರೆ.
ಎಡಗೈ ವೇಗಿಗಳಲ್ಲಿಲ್ಲದೆ ಬ್ಯಾಟ್ಸ್'ಮನ್'ಗಳೂ ತತ್ತರ..!
ಕೇವಲ ಬೌಲಿಂಗ್ ದೃಷ್ಠಿಯಿಂದ ಮಾತ್ರ ಬ್ಲೂ ಬಾಯ್ಸ್ ಎಡಗೈ ವೇಗಿಗಾಗಿ ಆತೊರೆಯುತ್ತಿಲ್ಲ. ಬದಲಿಗೆ ಬ್ಯಾಟ್ಸ್ಮನ್ಗಳ ಪರದಾಟಕ್ಕೆ ಬ್ರೇಕ್ ಹಾಕಲು ಎಡಗೈ ವೇಗಿಗಳೇ ಎಲ್ಲಿದ್ದೀರಿ ಎಂದು ಹುಡುಕಾಡುತ್ತಿದ್ದಾರೆ. ಲೆಫ್ಟಿಯೊಬ್ಬ ತಂಡದಲ್ಲಿ ಇಲ್ಲದೆ ಎಡಗೈ ವೇಗಿಯ ಎದುರು ಬ್ಯಾಟಿಂಗ್ ಅಭ್ಯಾಸವಿಲ್ಲದೆ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಎಲ್ಲಾ ಟೀಂ ಇಂಡಿಯಾ ಬ್ಯಾಟ್ಸ್ಮನ್ಗಳು ಎಡಗೈ ವೇಗಿಗಳ ಎದುರು ಮಂಡಿ ಊರುತ್ತಿದ್ದಾರೆ. ಅವರನ್ನ ದಿಟ್ಟವಾಗಿ ಎದುರಿಸಲಾಗದೇ ಪಂದ್ಯಗಳನ್ನ ಕೈ ಚೆಲ್ಲುತ್ತಿದ್ದಾರೆ. ಅದಕ್ಕೆ ಬೆಸ್ಟ್ ಎಕ್ಸಾಂಪಲ್ ಆಸ್ಟ್ರೇಲಿಯಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಜಾಸನ್ ಬೆರ್ಹಂಡೋಫ್ ವಿರುದ್ಧ ಕೊಹ್ಲಿ ಹುಡುಗರು ಪರದಾಡಿದ್ದು.
ಭಾರತದಲ್ಲಿದ್ದಾನೆ ಅದ್ಭುತ ಲೆಫ್ಟ್ ಆರ್ಮ್ ಪೇಸ್ ಬೌಲರ್
ಕಳೆದ ಕೆಲ ವರ್ಷಗಳಿಂದ ಟೀಂ ಇಂಡಿಯಾ ಎದುರಿಸುತ್ತಿರುವ ಬರವನ್ನ ನೀಗಿಸಲು ಒಬ್ಬ ಅದ್ಭುತ ಎಡಗೈ ವೇಗಿಯೊಬ್ಬ ರೆಡಿಯಾಗಿದ್ದಾನೆ. ಟೀಂ ಇಂಡಿಯ ಪರ ಅಬ್ಬರಿಸಲು ಮಹಾತ್ಮ ಗಾಂಧಿಯ ಹುಟ್ಟೂರಿನಿಂದ ವೇಗಿಯೊಬ್ಬ ಆತೊರೆಯುತ್ತಿದ್ದಾನೆ. ಆತ ಬೇಱರು ಅಲ್ಲ ಈಗಾಗಲೇ ಟೀಂ ಇಂಡಿಯಾಗೆ ಒಮ್ಮ ಎಂಟ್ರಿ ಕೊಟ್ಟು ಹೋಗಿದ್ದ, ಈ ಬಾರಿಯ IPL ನಲ್ಲಿ ಕಮಾಲ್ ಮಾಡಿದ್ದ ಮತ್ತು ಸದ್ಯ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಕೀವಿಸ್'ಗಳನ್ನ ಇನ್ನಿಲ್ಲದಂತೆ ಕಾಡುತ್ತಿರುವ ಜಯದೇವ್ ಉನಾದ್ಕತ್.
ಸದ್ಯ ಉನಾದ್ಕತ್ ಟೀಂ ಇಂಡಿಯಾದ ಎಡಗೈ ವೇಗಿಯ ಬರ ನೀಗಿಸಲು ಎಲ್ಲಾ ತಯಾರಿಯನ್ನೂ ನಡೆಸುತ್ತಿದ್ದಾನೆ. ಸದ್ಯ ಮುಕ್ತಾಯವಾದ ನ್ಯೂಜಿಲೆಂಡ್ ವಿರುದ್ಧದ 2 ಅಭ್ಯಾಸ ಪಂದ್ಯಗಳಲ್ಲಿ ಉನಾದ್ಕತ್ 7 ವಿಕೆಟ್ ಪಡೆದಿರೋದಲ್ಲದೇ 45 ರನ್ಗಳಿಸಿ ರಾಷ್ಟ್ರೀಯ ತಂಡದ ಬಾಗಿಲು ತಟ್ಟುತ್ತಿದ್ದಾನೆ. ಕೇವಲ ಇದಿಷ್ಟೇ ಅಲ್ಲ, ಜಯದೇವ್ ಉನಾದ್ಕತ್ ಆಡಿರುವ ಕಳೆದ 10 ಇನ್ನಿಂಗ್ಸ್ಗಳಲ್ಲಿ ವಿಕೆಟ್ ಇಲ್ಲದೆ ವಾಪಸ್ ಹೋಗೇ ಇಲ್ಲ. ಈ ಬಾರಿಯ ರಣಜಿಯಲ್ಲಿ ಸೌರಾಷ್ಟ್ರದ ಪರ ಅಬ್ಬರಿಸುತ್ತಿದ್ದಾನೆ.
IPL ನಲ್ಲೂ ಇವನದ್ದೇ ಹವಾ..!
ಇನ್ನೂ ಈ ಬಾರಿ ನಡೆದ IPL ನಲ್ಲೂ ಉನಾದ್ಕತ್ನದ್ದೇ ಹವಾ. ಟೂರ್ನಿಯಲ್ಲಿ ಹ್ಯಾಟ್ರಿಕ್ ಸಹಿತ 24 ವಿಕೆಟ್ ಕಬಳಿಸಿ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಎನ್ನಿಸಿಕೊಂಡಿದ್ರು. ಇವನ ವೈಭವವನ್ನ ನೋಡ್ತಿದ್ರೆ, ಜಹೀರ್ ಖಾನ್ ನಂತರ ಟೀಂ ಇಂಡಿಯಾದಲ್ಲಿ ಅಬ್ಬರಿಸೋದು ಗ್ಯಾರೆಂಟಿ ಅನಿಸ್ತಿದೆ. ಇದರೊಂದಿಗೆ ಮ್ಯಾನೇಜ್ಮೆಂಟ್ಗೆ ಕಾಡ್ತಿದ್ದ ಎಡಗೈ ವೇಗಿಯ ಬರ ನೀಗಲಿದೆ ಅನಿಸ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.