ಆರ್‌ಸಿಬಿ ಬೌಲಿಂಗ್ ಕೋಚ್ ಆಗಿ ಟೀಂ ಇಂಡಿಯಾ ಮಾಜಿ ವೇಗಿ ಆಯ್ಕೆ

By Web DeskFirst Published Sep 5, 2018, 3:40 PM IST
Highlights

ಐಪಿಲ್ ಟೂರ್ನಿಯ ಪ್ರತಿ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬಲಿಷ್ಠ ತಂಡವನ್ನೇ ಕಣಕ್ಕಿಳಿದೆ. ಆದರೆ ಟ್ರೋಫಿ ಮಾತ್ರ ಗೆದ್ದಿಲ್ಲ. ಇದೀಗ 12ನೇ ಆವೃತ್ತಿಗಾಗಿ ಆರ್‌ಸಿಬಿ ಹಲವು ಬದಾಲಾವಣೆ ಮಾಡಿದೆ. ಹೆಡ್ ಕೋಚ್ ಬಳಿಕ ಇದೀಗ ಬೌಲಿಂಗ್ ಕೋಚ್ ಆಯ್ಕೆ ನಡೆದಿದೆ.
 

ಬೆಂಗಳೂರು(ಸೆ.05): 12ನೇ ಆವೃತ್ತಿ ಐಪಿಎಲ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈಗಾಗಲೇ ತಂಡದಲ್ಲಿ ಮಹತ್ತರ ಬದಲಾವಣೆ ಮಾಡಿದೆ. ಆರ್‌ಸಿಬಿ ತಂಡದ ಕೋಚ್ ಆಗಿದ್ದ ಡೇನಿಯಲ್ ವೆಟ್ಟೋರಿ ಹಾಗೂ ತಂಡದ ಸ್ಪೋರ್ಟ್ ಸ್ಟಾಫ್ ಕೈ ಬಿಟ್ಟು, ಟೀಂ ಇಂಡಿಯಾ ಮಾಜಿ ಕೋಚ್ ಗ್ಯಾರಿ ಕಸ್ಟರ್ನ್‌ ಆಯ್ಕೆ ಮಾಡಲಾಗಿದೆ.

ಹೆಡ್ ಕೋಚ್ ಹಾಗೂ ಸಪೋರ್ಟ್ ಸ್ಟಾಫ್ ಬದಲಾಯಿಸಿ ತಂಡಕ್ಕೆ ಹೊಸ ಚೈತನ್ಯ ನೀಡಿದ್ದಾರೆ. ಇದೀಗ ತಂಡಕ್ಕೆ ನೂತನ ಬೌಲಿಂಗ್ ಕೋಚ್ ಆಯ್ಕೆ ಮಾಡಿದೆ. 2018ರ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ತಂಡದ ಬೌಲಿಂಗ್ ಮೆಂಟರ್ ಆಗಿದ್ದ ಮಾಜಿ ವೇಗಿ ಆಶಿಶ್ ನೆಹ್ರಾ,  ಇದೀಗ ಬೌಲಿಂಗ್ ಕೋಚ್ ಆಗಿ ಆಯ್ಕೆಯಾಗಿದ್ದಾರೆ.

 

Ashish Nehra confirmed as coach and will join in the coaching leadership team of RCB for the coming IPL. Click 👉 https://t.co/T213VBwCkv to read more. pic.twitter.com/SjTMbXuYTF

— Royal Challengers (@RCBTweets)

 

2017ರ ನವೆಂಬರ್‌ನಲ್ಲಿ ನ್ಯೂಜಿಲೆಂಡ್ ವಿರುದ್ದ ಅಂತಿಮ ಟಿ20 ಪಂದ್ಯ ಆಡೋ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಟೆಸ್ಟ್, ಏಕದಿನ ಹಾಗೂ ಟಿ20 ಮೂರು ಮಾದರಿಯಿಂದ ಅಶಿಶ್ ನೆಹ್ರಾ ಒಟ್ಟು 235 ವಿಕೆಟ್ ಉರುಳಿಸಿದ್ದಾರೆ.

click me!