ವಿದಾಯದ ಬಳಿಕ ಭಾರತೀಯ ಸೇನೆಗೆ ಧೋನಿ; ಮ್ಯಾನೇಜರ್ ಬಿಚ್ಚಿಟ್ಟ ಸೀಕ್ರೆಟ್!

By Web Desk  |  First Published Jul 16, 2019, 8:46 PM IST

ಎಂ.ಎಸ್.ಧೋನಿ ವಿದಾಯ ಕುರಿತು ಇನ್ನೂ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ. ಆದರೆ  ವಿದಾಯದ ಬಳಿಕ ಧೋನಿ ಪ್ಲಾನ್ ಬಹಿರಂಗವಾಗಿದೆ. ಧೋನಿ ರಿಟೈರ್‌ಮೆಂಟ್ ಪ್ಲಾನ್ ಏನು? ಇಲ್ಲಿದೆ ವಿವರ.


ಮುಂಬೈ(ಜು.16): ವಿಶ್ವಕಪ್ ಸೆಮಿಫೈನಲ್ ಸೋಲಿನ ಬೆನ್ನಲ್ಲೇ ಟೀಂ ಇಂಡಿಯಾ ಕ್ರಿಕೆಟಿಗ ಎಂ.ಎಸ್.ಧೋನಿ ನಿವೃತ್ತಿ ಮಾತುಗಳು ಕೇಳಿ ಬರುತ್ತಿದೆ. ಧೋನಿ ವಿದಾಯದ ಕುರಿತು ಊಹಾಪೋಹ ಹೆಚ್ಚಾಗುತ್ತಿದೆ. ಧೋನಿ ವಿದಾಯದ ಬಳಿಕ ಬಿಜೆಪಿ ಸೇರಿಕೊಳ್ಳುತ್ತಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ಧೋನಿ ವಿದಾಯದ ಬಳಿಕ ಏನು ಮಾಡಲಿದ್ದಾರೆ ಅನ್ನೋದನ್ನು ಧೋನಿ ಮ್ಯಾನೇಜರ್ ಅರುಣ್ ಪಾಂಡೆ ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: ವಿದಾಯದ ಬಳಿಕ ಧೋನಿ ಬಿಜೆಪಿಗೆ; ತಲ್ಲಣ ಸೃಷ್ಟಿಸಿದೆ ಕೇಂದ್ರ ಮಾಜಿ ಸಚಿವನ ಹೇಳಿಕೆ!

Tap to resize

Latest Videos

undefined

ಎಂ.ಎಸ್.ಧೋನಿ ವಿದಾಯದ ಕುರಿತು ಈಗಲೇ ಸ್ಪಷ್ಟಪಡಿಸಲು ಸಾಧ್ಯವಿಲ್ಲ. ಆದರೆ ವಿದಾಯದ ಬಳಿಕ ಏನುಮಾಡಲಿದ್ದಾರೆ ಅನ್ನೋದನ್ನು ಬಹಿರಂಗ ಪಡಿಸುತ್ತೇನೆ. ಧೋನಿ ವಿದಾಯದ ಬಳಿಕ ಭಾರತೀಯ ಸೇನೆಗೆ ಸೇರಲಿದ್ದಾರೆ. ಈ ಮೂಲಕ ದೇಶ ಸೇವೆ ಮಾಡಲು ಧೋನಿ ಸಜ್ಜಾಗಿದ್ದಾರೆ ಎಂದು ಅರುಣ್ ಪಾಂಡೆ ಹೇಳಿದ್ದಾರೆ. ಧೋನಿಗೆ ಸೈನಿಕನಾಗಬೇಕು ಅನ್ನೋ ಹಂಬಲವನ್ನು ಸಾಕಾರಗೊಳಿಸಲಿದ್ದಾರೆ ಎಂದು ಪಾಂಡೆ ಹೇಳಿದ್ದಾರೆ.

ಇದನ್ನೂ ಓದಿ: ವಿಂಡೀಸ್‌ ಪ್ರವಾಸಕ್ಕೆ ಧೋನಿಗಿಲ್ಲ ಸ್ಥಾನ?

ಸೇನೆಯಲ್ಲಿ ಲಿಫ್ಟೆನೆಂಟ್ ಕೊಲೋನೆಲ್ ಗೌರವ ಸ್ಥಾನ ಹೊಂದಿರುವ ಧೋನಿ, ಪ್ಯಾರಾ ರಿಜೆಮೆಂಟ್ ವಿಭಾಗದಲ್ಲಿ ಗುರುತಿಸಿಕೊಂಡಿದ್ದಾರೆ.  ಈಗಾಗಲೇ ಪ್ಯಾರಾರೆಜಿಮೆಂಟ್ ಟ್ರೈನಿಂಗ್ ಕೂಡ ಪೂರ್ತಿಗೊಳಿಸಿದ್ದಾರೆ. ಇಷ್ಟೇ ಅಲ್ಲ 5 ಬಾರಿ ಪ್ಯಾರಾಚ್ಯೂಟ್ ಮೂಲಕ ಹಾರಿ ಸಾಹಸ ಪ್ರದರ್ಶಿಸಿದ್ದಾರೆ. ಭಾರತೀಯ ಸೇನೆ ಕುರಿತು ಅಪಾರ ಗೌರವ ಹೊಂದಿರುವ ಧೋನಿ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ತಮ್ಮ ಕೀಪಿಂಗ್ ಗ್ಲೌಸ್ ಮೇಲೆ ಬಲಿದಾನ್ ಬ್ಯಾಡ್ಜ್ ಬಳಸಿದ್ದರು. ಇದಕ್ಕೆ ಐಸಿಸಿ ವಿರೋಧ ವ್ಯಕ್ತಪಡಿಸಿತ್ತು.
 

click me!