ಟೆಸ್ಟ್, ಒನ್ ಡೇ ಕ್ರಿಕೆಟ್’ನಲ್ಲಿ ಸಚಿನ್ ಬಾಸ್, ಟಿ20 ರನ್ ಬೇಟೆಯಲ್ಲಿ ರೋಹಿತ್ ಕಿಂಗ್..!

By Web DeskFirst Published Feb 8, 2019, 2:14 PM IST
Highlights

2018ರ ಫೆಬ್ರವರಿಯಲ್ಲಿ ಆಂಕ್ಲೆಂಡ್’ನ ಈಡನ್’ಪಾರ್ಕ್’ನಲ್ಲಿ ಮಾರ್ಟಿನ್ ಗಪ್ಟಿಲ್ ಟಿ20 ಕ್ರಿಕೆಟ್’ನಲ್ಲಿ ಗರಿಷ್ಠ ಸಿಡಿಸಿದ ಆಟಗಾರರಾಗಿ ಹೊರಹೊಮ್ಮಿದ್ದರು. ಇದೀಗ ಒಂದು ವರ್ಷದ ಬಳಿಕ ಅದೇ ಮೈದಾನದಲ್ಲಿ ರೋಹಿತ್ ಶರ್ಮಾ ಟಿ20 ಕ್ರಿಕೆಟ್’ನಲ್ಲಿ ಗರಿಷ್ಠ ರನ್ ಬಾರಿಸಿದ ಆಟಗಾರ ಎನ್ನುವ ದಾಖಲೆ ನಿರ್ಮಿಸಿದ್ದಾರೆ.

ಆಕ್ಲೆಂಡ್[ಫೆ.08]: ’ಹಿಟ್’ಮ್ಯಾನ್’ ಖ್ಯಾತಿಯ ರೋಹಿತ್ ಶರ್ಮಾ ಟಿ20 ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರರಾಗಿ ಹೊರಹೊಮ್ಮಿದ್ದಾರೆ. ಈ ಮೂಲಕ ನ್ಯೂಜಿಲೆಂಡ್ ಬ್ಯಾಟ್ಸ್’ಮನ್ ಮಾರ್ಟಿನ್ ಗಪ್ಟಿಲ್[2272] ಅವರನ್ನು ಹಿಂದಿಕ್ಕಿ ರೋಹಿತ್ ಅಗ್ರಸ್ಥಾನಕ್ಕೇರಿದ್ದಾರೆ.

ಸಿಕ್ಸರ್‌ನಲ್ಲಿ ಶತಕ ಸಿಡಿಸಿದ ರೋಹಿತ್ ಶರ್ಮಾ

ಪಂದ್ಯ ಆರಂಭಕ್ಕೂ ಮುನ್ನ ಗಪ್ಟಿಲ್ ದಾಖಲೆ ಹಿಂದಿಕ್ಕಲು ರೋಹಿತ್’ಗೆ ಕೇವಲ 35 ರನ್’ಗಳ ಅವಶ್ಯಕತೆಯಿತ್ತು. ಇಶ್ ಸೋಧಿ ಬೌಲಿಂಗ್’ನಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಕಿವೀಸ್ ಬ್ಯಾಟ್ಸ್’ಮನ್ ದಾಖಲೆ ಹಿಂದಿಕ್ಕುವಲ್ಲಿ ಯಶಸ್ವಿಯಾಗಿದ್ದಾರೆ. ಮಾರ್ಟಿನ್ ಗಪ್ಟಿಲ್ 74 ಇನ್ನಿಂಗ್ಸ್’ಗಳಲ್ಲಿ 14 ಅರ್ಧಶತಕ ಹಾಗೂ 2 ಶತಕಗಳ ನೆರವಿನಿಂದ 2272 ರನ್ ಬಾರಿಸಿದ್ದಾರೆ. ಇನ್ನು ರೋಹಿತ್ ಶರ್ಮಾ 84 ಇನ್ನಿಂಗ್ಸ್’ಗಳಲ್ಲಿ 16* ಅರ್ಧಶತಕ ಹಾಗೂ 4 ಶತಕ ಸಿಡಿಸಿದ್ದಾರೆ.

ಸಚಿನ್ ತೆಂಡೂಲ್ಕರ್ ಹೇಳಿದ ಭವಿಷ್ಯ ಸುಳ್ಳಾಗಲ್ಲ!

ಕಾಕತಾಳೀಯವೆಂದರೆ 2018ರ ಫೆಬ್ರವರಿಯಲ್ಲಿ ಆಂಕ್ಲೆಂಡ್’ನ ಈಡನ್’ಪಾರ್ಕ್’ನಲ್ಲಿ ಮಾರ್ಟಿನ್ ಗಪ್ಟಿಲ್ ಟಿ20 ಕ್ರಿಕೆಟ್’ನಲ್ಲಿ ಗರಿಷ್ಠ ಸಿಡಿಸಿದ ಆಟಗಾರರಾಗಿ ಹೊರಹೊಮ್ಮಿದ್ದರು. ಇದೀಗ ಒಂದು ವರ್ಷದ ಬಳಿಕ ಅದೇ ಮೈದಾನದಲ್ಲಿ ರೋಹಿತ್ ಶರ್ಮಾ ಟಿ20 ಕ್ರಿಕೆಟ್’ನಲ್ಲಿ ಗರಿಷ್ಠ ರನ್ ಬಾರಿಸಿದ ಆಟಗಾರ ಎನ್ನುವ ದಾಖಲೆ ನಿರ್ಮಿಸಿದ್ದಾರೆ.

ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಮೂರು ಮಾದರಿಯಲ್ಲೂ ರನ್ ಗರಿಷ್ಠ ಸಿಡಿಸಿದ ಆಟಗಾರರು ಎನ್ನುವ ಕೀರ್ತಿಗೆ ಭಾರತೀಯರು ಪಾತ್ರರಾಗಿದ್ದಾರೆ. ಸಚಿನ್ ತೆಂಡುಲ್ಕರ್ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್’ನಲ್ಲಿ 15,921, 18426 ರನ್ ಬಾರಿಸಿ ಅಗ್ರಸ್ಥಾನದಲ್ಲಿದ್ದರೆ, ಟಿ20 ಕ್ರಿಕೆಟ್’ನಲ್ಲಿ ರೋಹಿತ್ ಶರ್ಮಾ 2288* ರನ್ ಸಿಡಿಸಿ ಅಗ್ರಸ್ಥಾನಕ್ಕೇರಿದ್ದಾರೆ. 

click me!