ಉದ್ದ ಕೂದಲಿನ ಇಶಾಂತ್ ಶರ್ಮಾ ಹೊಸ ಲುಕ್ ಹೇಗಿದೆ?

Published : Jul 23, 2018, 07:05 PM ISTUpdated : Jul 23, 2018, 07:35 PM IST
ಉದ್ದ ಕೂದಲಿನ ಇಶಾಂತ್ ಶರ್ಮಾ ಹೊಸ ಲುಕ್ ಹೇಗಿದೆ?

ಸಾರಾಂಶ

ಟೀಂ ಇಂಡಿಯಾ ವೇಗಿ ಇಶಾಂತ್ ಶರ್ಮಾ ಎಂದ ತಕ್ಷಣ ಲಾಂಗ್ ಹೇರ್ ಸ್ಟೈಲ್ ನಮ್ಮ ಕಣ್ಣ ಮುಂದೆ ಹಾಸುಹೋಗುತ್ತೆ. ಆದರೆ ಇದೀಗ ಇಶಾಂತ್ ಶರ್ಮಾ ಹೊಸ ಲುಕ್ ಮಾಡಿಸಿಕೊಂಡಿದ್ದಾರೆ. ಇಶಾಂತ್ ಹೊಸ ಸ್ಟೈಲ್ ಹೇಗಿದೆ? ಇಲ್ಲಿದೆ ವಿವರ.

ಲಂಡನ್(ಜು.23): ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿರೋ ಟೀಂ ಇಂಡಿಯಾ ವೇಗಿ ಇಶಾಂತ್ ಶರ್ಮಾ ಇದೀಗ ಟೀಂ ಇಂಡಿಯಾ ಸೇರಿಕೊಂಡಿದ್ದಾರೆ. ಇಶಾಂತ್ ಶರ್ಮಾ ಹೆಚ್ಚಾಗಿ ಉದ್ದ ಕೂದಲಿನಿಂದಲೇ ಗುರುತಿಸಿಕೊಂಡಿದ್ದಾರೆ. ಆದರೆ ಇದೀಗ ಇಶಾಂತ್ ತಮ್ಮ ಕೂದಲಿಗೆ ಕತ್ತರಿ ಹಾಕಿ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

 

 

ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಕೆಲವೇ ವರ್ಷಗಳಲ್ಲಿ ಇಶಾಂತ್ ಶರ್ಮಾ ತಮ್ಮ ಲಾಂಗ್ ಹೇರ್‌ನಿಂದ ಗಮನಸೆಳೆದಿದ್ದರು. ಬಳಿಕ ಯಾರೇ ಹೇಳಿದರೂ ಉದ್ದ ಕೂದಲಿಗೆ ಮಾತ್ರ ಕತ್ತರಿ ಹಾಕಿರಲಿಲ್ಲ. ಇಶಾಂತ್ ತಮ್ಮ ಮದುವೆಯಲ್ಲೂ ಉದ್ದ ಕೂದಲಿನಿಂದಲೇ ಮಿಂಚಿದ್ದರು.

 

 

ಲಾಂಗ್ ಹೇರ್ ಮೂಲಕ ಗಮನಸೆಳೆದಿದ್ದ ಇಶಾಂತ್ ಇದೀಗ ಶಾರ್ಟ್ ಮಾಡಿಸಿಕೊಂಡಿದ್ದಾರೆ. ಇಶಾಂತ್ ಶರ್ಮಾ ನೂತನ ಹೇರ್ ಸ್ಟೈಲ್ ಇದೀಗ ಟ್ರೆಂಡ್ ಆಗಿದೆ. ಶಾರ್ಟ್ ಹೇರ್ ಜೊತೆಗೆ ಬಿಯರ್ಡ್ ಕೂಡ ಬಿಟ್ಟಿರುವ ಇಶಾಂತ್ ಹೊಸ ಲುಕ್ ಆಕರ್ಷಕವಾಗಿದೆ.

 

 

ಇದನ್ನು ಓದಿ: ಟೀಂ ಇಂಡಿಯಾ ಕ್ರಿಕೆಟಿಗರಿಗೆ ಬಿಸಿಸಿಐ ನೀಡಿತು ಬಿಗ್ ಶಾಕ್!

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IPL 2026 Qualifier 2: ಗುಜರಾತ್ ಟೈಟಾನ್ಸ್ - ರಾಜಸ್ಥಾನ ರಾಯಲ್ಸ್ ಮ್ಯಾಚ್ ನಡಿಯೋದೇ ಡೌಟ್..! ಟೈಟಾನ್ಸ್ ಫೈನಲ್‌ಗೆ, ರಾಯಲ್ಸ್‌ಗೆ ನಿರಾಸೆ?
'ಅದೊಂದು ಕಾರಣಕ್ಕಾಗಿ ರಾಜಸ್ಥಾನ ರಾಯಲ್ಸ್‌ ಬಿಟ್ಟು ಈ ತಂಡಕ್ಕೆ ಹೋಗು': ಯಶಸ್ವಿ ಜೈಸ್ವಾಲ್‌ಗೆ ಅಂಬಟಿ ರಾಯುಡು ಖಡಕ್ ಸಲಹೆ!