ರಣಜಿ ಟ್ರೋಫಿಯ ನೂತನ ಸಾಮ್ರಾಟ ಗುಜರಾತ್

By Suvarna Web DeskFirst Published Jan 13, 2017, 12:15 PM IST
Highlights

2017ರ ದೇಶಿ ಟೂರ್ನಿಯ ನೂತನ ಸಾಮ್ರಾಟನಾಗಿ ಮೆರೆದ ಗುಜರಾತ್.

ಇಂದೋರ್(ಜ.14): ನಾಯಕ ಪಾರ್ಥೀವ್ ಪಟೇಲ್ ಅವರ ಕೆಚ್ಚೆದೆಯ ಹೋರಾಟದ ನೆರವಿನಿಂದ ಗುಜರಾತ್ ತಂಡ ಚೊಚ್ಚಲ ರಣಜಿ ಟ್ರೋಫಿ ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ 2017ರ ದೇಶಿ ಟೂರ್ನಿಯ ನೂತನ ಸಾಮ್ರಾಟನಾಗಿ ಮೆರೆಯಿತು.

66 ವರ್ಷಗಳ ಬಳಿಕ ಫೈನಲ್ ತಲುಪಿದ್ದ ಪಾರ್ಥೀವ್ ಪಟೇಲ್ ನೇತೃತ್ವದ ಗುಜರಾತ್ ತಂಡ ಬಲಿಷ್ಠ ಮುಂಬೈ ತಂಡವನ್ನು ಬಗ್ಗುಬಡಿಯುವಲ್ಲಿ ಯಶಸ್ವಿಯಾಯಿತು. ಸುಮಾರು 26 ವರ್ಷಗಳ ನಂತರ ಮುಂಬೈ ತಂಡ ಫೈನಲ್'ನಲ್ಲಿ ನಿರಾಸೆ ಅನುಭವಿಸಿತು. ಗೆಲ್ಲಲು 312 ರನ್'ಗಳ ಬೃಹತ್ ಗುರಿ ಬೆನ್ನತ್ತಿದ ಗುಜರಾತ್ ಇಂದು ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸ್ವಲ್ಪ ವಿಚಲಿತವಾಯಿತು. ಆದರೆ ನಾಯಕ ಪಾರ್ಥೀವ್ ಪಟೇಲ್(143) ಹಾಗೂ ಮನ್ಪ್ರೀತ್ ಜುನೇಜಾ(54) ಜೊತೆಯಾಟದ ಮುಂದೆ ಹಾಲಿ ಚಾಂಪಿಯನ್ ನೀಡಿದ್ದ ಮುಂಬೈ ಪೇರಿಸಿದ್ದ ಮೊತ್ತ ಸವಾಲು ಎನಿಸಲೇ ಇಲ್ಲ.

ಗುಜರಾತ್ ಪರ ಗರಿಷ್ಟ ರನ್ ಪೇರಿಸಿದ್ದ ಪ್ರಿಯಾಂಕ್ ಪಾಂಚಾಲ್(1310), ಸಮಿತ್ ಗೋಯಲ್ ಹಾಗೂ ಬಾರ್ಗವ್ ಮೆರೈ ಅಂತಿಮ ದಿನ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಬೃಹತ್ ಮೊತ್ತ ಬನ್ನತ್ತಿದ್ದ ಗುಜರಾತ್ ಒಂದು ಹಂತದಲ್ಲಿ 89 ರನ್'ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕ್ಕಿತ್ತು. ಆದರೆ ನಾಲ್ಕನೇ ವಿಕೆಟ್'ಗೆ ಜೊತೆಯಾದ ಜುನೇಜಾ ಹಾಗೂ ಪಟೇಲ್ ಜೋಡಿ ಶತಕದ ಜೊತೆಯಾಟ(116)ವಾಡಿ ತಂಡಕ್ಕೆ ನೆರವಾಯಿತು. ಅರ್ಧಶತಕ ಗಳಿಸಿ ಮುನ್ನುಗ್ಗುತ್ತಿದ್ದ ಜುನೇಜಾ ಕೆಟ್ಟ ಹೊಡೆತಕ್ಕೆ ಕೈಹಾಕಿ ಅಕಿಲ್ ಹೆರ್ವಾಡ್'ಕರ್'ಗೆ ವಿಕೆಟ್ ಒಪ್ಪಿಸಿದರು. ಆಗ ಗುಜರಾತ್ ತಂಡದ ಮೊತ್ತ 205/4. ಟ್ರೋಫಿ ಗೆಲ್ಲಲು ಇನ್ನೂ 107 ರನ್'ಗಳ ಅವಶ್ಯಕತೆಯಿತ್ತು. ತಾಳ್ಮೆ ಕಳೆದುಕೊಳ್ಳದ ನಾಯಕ ಪಾರ್ಥೀವ್ ಪಟೇಲ್ ಭರ್ಜರಿ ಶತಕ ಬಾರಿಸಿ ತಂಡವನ್ನು ಗೆಲುವಿನ ಸಮೀಪ ತಂದರು. ಆದರೆ ತಂಡ ವಿಜಯಿಯಾಗಲು ಕೆಲವೇ ರನ್'ಗಳ ಅವಶ್ಯಕತೆಯಿದ್ದಾಗ ಕೈ ಸುಟ್ಟುಕೊಂಡರು. ಆದರೆ ಗಾಂಧಿ ಸತತ ಎರಡು ಬೌಂಡರಿ ಬಾರಿಸುವ ಮೂಲಕ ಗುಜರಾತ್ ತಂಡವನ್ನು ಗೆಲುವಿನ ದಡ ಸೇರಿಸಿದರು.  

ಅಂತಿಮವಾಗಿ ಅರ್ಹವಾಗಿಯೇ ಪಾರ್ಥೀವ್ ಪಟೇಲ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾ

 

click me!