ಏಪ್ರಿಲ್ 28ಕ್ಕೆ ಬೆಂಗಳೂರು 10ಕೆ ಮ್ಯಾರಥಾನ್; ಇಂದಿನಿಂದಲೇ ನೋಂದಣಿ ಆರಂಭ

Published : Feb 15, 2024, 11:02 AM IST
ಏಪ್ರಿಲ್ 28ಕ್ಕೆ ಬೆಂಗಳೂರು 10ಕೆ ಮ್ಯಾರಥಾನ್; ಇಂದಿನಿಂದಲೇ ನೋಂದಣಿ ಆರಂಭ

ಸಾರಾಂಶ

ಫೆಬ್ರವರಿ 15ರಿಂದ ಮಾರ್ಚ್ 29ರ ವರೆಗೆ ನೋಂದಣಿಗೆ ಅವಕಾಶವಿದೆ. ಆಸಕ್ತರು https://tcsworld10k.procam.in ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಬಹುದು ಎಂದು ಆಯೋಜಕರು ತಿಳಿಸಿದ್ದಾರೆ. ಪ್ರತಿ ವರ್ಷವೂ ಟಿಸಿಎಸ್‌ ವರ್ಲ್ಡ್ 10ಕೆ ಅತ್ಯುತ್ತಮ ರೇಸ್ ಡೇ ಅನುಭವನ್ನು ನೀಡುತ್ತಾ ಬಂದಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಬೆಂಗಳೂರು(ಫೆ.15): 16ನೇ ಆವೃತ್ತಿಯ ಬೆಂಗಳೂರು 10ಕೆ ಮ್ಯಾರಥಾನ್‌ ಮುಂಬರುವ ಏಪ್ರಿಲ್ 28ರಂದು ಭಾನುವಾರ ನಡೆಯಲಿದೆ ಎಂದು ಆಯೋಜಕರು ಬುಧವಾರ ಘೋಷಿಸಿದ್ದಾರೆ. 10ಕೆ ಓಟದ ಜೊತೆಗೆ ಮಜಾ ರನ್‌(5.1 ಕಿ.ಮೀ), ಸಿಲ್ವರ್ಸ್‌ ರನ್‌ ಮತ್ತು ಚಾಂಪಿಯನ್ಸ್ ವಿತ್‌ ಡಿಸೆಬಿಲಿಟ(4.2 ಕಿ.ಮೀ.) ಓಟದ ಸ್ಪರ್ಧೆ ಕೂಡಾ ಇರಲಿದೆ. 

ಫೆಬ್ರವರಿ 15ರಿಂದ ಮಾರ್ಚ್ 29ರ ವರೆಗೆ ನೋಂದಣಿಗೆ ಅವಕಾಶವಿದೆ. ಆಸಕ್ತರು https://tcsworld10k.procam.in ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಬಹುದು ಎಂದು ಆಯೋಜಕರು ತಿಳಿಸಿದ್ದಾರೆ. ಪ್ರತಿ ವರ್ಷವೂ ಟಿಸಿಎಸ್‌ ವರ್ಲ್ಡ್ 10ಕೆ ಅತ್ಯುತ್ತಮ ರೇಸ್ ಡೇ ಅನುಭವನ್ನು ನೀಡುತ್ತಾ ಬಂದಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಮಾಣಿಕ್ ಷಾ ಪೆರೇಡ್‌ ಮೈದಾನದಿಂದ ಆರಂಭ: 16ನೇ ಆವೃತ್ತಿಯ ಬೆಂಗಳೂರು 10ಕೆ ಮ್ಯಾರಥಾನ್‌ ಕೂಟವು ಭಾರತೀಯ ಸೇನೆ, ಕರ್ನಾಟಕ ಹಾಗೂ ಕೇರಳ ಉಪ ಪ್ರದೇಶದ ಬೆಂಬಲದೊಂದಿಗೆ ಈ ಬಾರಿ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್ ಷಾ ಪೆರೇಡ್ ಮೈದಾನದಿಂದ ಮ್ಯಾರಥಾನ್‌ಗೆ ಚಾಲನೆ ಸಿಗಲಿದೆ. 

ಗುಡ್ ನ್ಯೂಸ್ ಕೊಟ್ಟ ಬಿಸಿಸಿಐ: 2024ರ ಐಪಿಎಲ್‌ ಬಗ್ಗೆ ಮಹತ್ವದ ಅಪ್‌ಡೇಟ್‌ ಕೊಟ್ಟ ಅರುಣ್ ಧುಮಾಲ್‌..!

ಒಟ್ಟು 2,10,000 ಯುಎಸ್ ಡಾಲರ್ ಬಹುಮಾನ ಮೊತ್ತವನ್ನು ಹೊಂದಿರುವ ವಿಶ್ವದ ಪ್ರೀಮಿಯರ್ 10ಕೆ ಸ್ಪರ್ಧೆಯಲ್ಲಿ ವಿಶ್ವದಾದ್ಯಂತ ಇರುವ ಹವ್ಯಾಸಿ ಓಟಗಾರರೊಂದಿಗೆ ಕೆಲವು ಪ್ರಮುಖ ಭಾರತೀಯ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ. 

ವಿಶ್ವದ ಯಾವುದೇ ಭಾಗದಿಂದ ಬೇಕಿದ್ದರೂ ವರ್ಚುವಲ್ ಆಗಿ ಓಡಬಹುದು: ವಿಶ್ವದ ಯಾವುದೇ ಭಾಗದ ಓಟಗಾರರು ಟಿಸಿಎಸ್ ವರ್ಲ್ಡ್ ಬೆಂಗಳೂರು 10ಕೆ ಅಪ್ಲಿಕೇಷನ್‌ನಲ್ಲಿ ನೋಂದಣಿ ಮಾಡಿಕೊಳ್ಳುವ ಮೂಲಕ ವರ್ಚುವಲ್ ಆಗಿ 5ಕೆ ಹಾಗೂ 10ಕೆ ಮ್ಯಾರಥಾನ್‌ನಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?