ಟಸ್ಕಿನ್ ಬೌಲಿಂಗ್'ಗೆ ಐಸಿಸಿ ಅನುಮತಿ

By Internet DeskFirst Published Sep 24, 2016, 3:19 PM IST
Highlights

ಢಾಕಾ(ಸೆ.24): ಬಾಂಗ್ಲಾದೇಶದ ವೇಗದ ಬೌಲರ್‌ ಟಸ್ಕಿನ್‌ ಅಹಮದ್‌ ಮತ್ತು ಎಡಗೈ ಸ್ಪಿನ್ನರ್‌ ಅರಾಫತ್‌ ಸನ್ನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮತ್ತೆ ಬೌಲಿಂಗ್‌ ಮಾಡಲು ಐಸಿಸಿ ಅನುಮತಿ ನೀಡಿದೆ.

ಐಸಿಸಿ ವಿಶ್ವ ಟಿ20 ಪಂದ್ಯಾವಳಿಯಲ್ಲಿ ನಿಯಮ ಬಾಹಿರ ಬೌಲಿಂಗ್‌ ವ್ಯಕ್ತವಾಗಿದ್ದರಿಂದ ಆರು ತಿಂಗಳ ಹಿಂದೆ ಈ ಇಬ್ಬರು ಆಟಗಾರರನ್ನೂ ಐಸಿಸಿ ಅಂತಾರಾಷ್ಟ್ರೀಯ ಬೌಲಿಂಗ್‌ನಿಂದ ನಿಷೇಧಿಸಿತ್ತು.

Latest Videos

 ‘‘ಇತ್ತೀಚಿನ ಪರೀಕ್ಷೆಯಲ್ಲಿ ಈ ಇಬ್ಬರು ಬೌಲರ್‌ಗಳು ನಿಯಮಬದ್ಧವಾಗಿಯೇ ಬೌಲ್‌ ಮಾಡುತ್ತಿರುವುದು ದೃಢಪಟ್ಟಿದ್ದು, ಈ ಹಿನ್ನೆಲೆಯಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಅವರಿಬ್ಬರಿಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮತ್ತೆ ಬೌಲಿಂಗ್‌ ಮಾಡಲು ಅನುಮತಿ ನೀಡಲಾಗಿದೆ’’ ಎಂದು ಐಸಿಸಿ ಪ್ರಕಟಣೆಯು ತಿಳಿಸಿದೆ.

click me!