
ಮುಂಬೈ(ಅ.31): ಐಪಿಎಲ್ ಟೂರ್ನಿಯಿಂದ ಬೆಳಕಿಗೆ ಬಂದ ಹಿರಿಯ ಕ್ರಿಕೆಟಿಗ ಪ್ರವೀಣ್ ತಾಂಬೆ ಮಾಡಿದ ಮೋಡಿ ಎಲ್ಲರಿಗೂ ಗೊತ್ತೆ ಇದೆ. 2013ರ ಐಪಿಎಲ್ ಟೂರ್ನಿಯಲ್ಲಿ ಪ್ರವೀಣ್ ತಾಂಬೆ ಸ್ಪಿನ್ ಮ್ಯಾಜಿಕ್ ಮೂಲಕ 28 ವಿಕೆಟ್ ಕಬಳಿಸಿದ್ದರು.
41ನೇ ವಯಸ್ಸಿಗೆ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಮಿಂಚಿದ ಪ್ರವೀಣ್ ತಾಂಬೆ ಬಳಿಕ ಅವಕಾಶ ಗಿಟ್ಟಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದೀಗ 47ರ ಹರೆಯದಲ್ಲಿ ಪ್ರವೀಣ್ ತಾಂಬೆ ಟಿ10 ಲೀಗ್ ಟೂರ್ನಿ ಆಡಲು ಸಜ್ಜಾಗಿದ್ದಾರೆ.
ನವೆಂಬರ್ 23 ರಿಂದ ಆರಂಭಗೊಳ್ಳಲಿರುವ 2ನೇ ಆವೃತ್ತಿಯ ಟಿ10 ಕ್ರಿಕೆಟ್ ಲೀಗ್ ಟೂರ್ನಿಯಲ್ಲಿ ಪ್ರವೀಣ್ ತಾಂಬೆ ಕರಾಚಿಯನ್ಸ್ ತಂಡ ಸೇರಿಕೊಂಡಿದ್ದಾರೆ. ಶೇನ್ ವಾರ್ನ್ ಸೇರಿದಂತೆ ಹಲವು ದಿಗ್ಗಜ ಕ್ರಿಕೆಟಿಗರನ್ನೊಳಗೊಂಡ ತಂಡದಲ್ಲಿ ಇದೀಗ ಪ್ರವೀಣ್ ತಾಂಬೆ ಕೂಡ ಕಣಕ್ಕಿಳಿಯುತ್ತಿದ್ದಾರೆ. ಪ್ರವೀಣ್ ತಾಂಬೆ ಆಯ್ಕೆಯನ್ನ ಕರಾಚಿಯನ್ ತಂಡ ಟ್ವೀಟ್ ಮೂಲಕ ಬಹಿರಂಗ ಪಡಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.