ಮುಷ್ತಾಕ್‌ ಅಲಿ ಟ್ರೋಫಿ: ಕರ್ನಾಟಕಕ್ಕೆ ಸತತ 7ನೇ ಜಯದ ಗುರಿ

By Web DeskFirst Published Mar 2, 2019, 9:13 AM IST
Highlights

ಸಯ್ಯದ್ ಮುಷ್ತಾಕ್ ಆಲಿ ಟ್ರೋಫಿಯಲ್ಲಿ ಸತತ 6 ಗೆಲುವು ಸಾಧಿಸಿ ಇತಿಹಾಸ ರಚಿಸಿರುವ ಕರ್ನಾಟಕ ಇಂದು ಹರ್ಯಾಣ ವಿರುದ್ಧ ಪಂದ್ಯ ಆಡಲಿದೆ. ಇದು ಲೀಗ್ ಹಂತದ ಅಂತಿಮ ಪಂದ್ಯವಾಗಿದ್ದು ಸೋಲಿಲ್ಲದೆ ಸರದಾರನಾಗಿ ಸೂಪರ್ ಲೀಗ್ ಪ್ರವೇಶಿಸಲು ಸಜ್ಜಾಗಿದೆ.
 

ಕಟಕ್‌(ಮಾ.02): ಸಯ್ಯದ್‌ ಮುಷ್ತಾಕ್‌ ಅಲಿ ರಾಷ್ಟ್ರೀಯ ಟಿ20 ಟೂರ್ನಿಯ ಸೂಪರ್‌ ಲೀಗ್‌ಗೆ ಈಗಾಗಲೇ ಪ್ರವೇಶ ಪಡೆದಿರುವ ಕರ್ನಾಟಕ, ‘ಡಿ’ ಗುಂಪಿನಲ್ಲಿ ಅಜೇಯವಾಗಿ ಉಳಿಯುವ ಭರವಸೆಯಲ್ಲಿದೆ. ಶನಿವಾರ ನಡೆಯಲಿರುವ ಗುಂಪು ಹಂತದ 7ನೇ ಹಾಗೂ ಅಂತಿಮ ಪಂದ್ಯದಲ್ಲಿ, ರಾಜ್ಯ ತಂಡ ಹರ್ಯಾಣ ವಿರುದ್ಧ ಸೆಣಸಲಿದ್ದು, ಗೆಲುವಿನೊಂದಿಗೆ ಸೂಪರ್‌ ಲೀಗ್‌ ಪ್ರವೇಶಿಸಲು ಎದುರು ನೋಡುತ್ತಿದೆ. ತಂಡ ಈಗಾಗಲೇ ಆಡಿರುವ 6 ಪಂದ್ಯಗಳಲ್ಲಿ 6ರಲ್ಲೂ ಗೆಲುವು ಪಡೆದಿದೆ.

ಇದನ್ನೂ ಓದಿ: ವಿಶ್ವಕಪ್ ಟೂರ್ನಿಗಾಗಿ ಟೀಂ ಇಂಡಿಯಾ ಹೊಸ ಜರ್ಸಿ ಅನಾವರಣ!

ಟೂರ್ನಿಯಲ್ಲಿ 3 ಅರ್ಧಶತಕ ಬಾರಿಸಿರುವ ರೋಹನ್‌ ಕದಂ, ಲಯ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ. ಕರುಣ್‌ ನಾಯರ್‌, ಮನೀಶ್‌ ಪಾಂಡೆ ಬಲ ತಂಡಕ್ಕಿದೆ. ಸೂಪರ್‌ ಲೀಗ್‌ಗೂ ಮುನ್ನ ಮಯಾಂಕ್‌ ಅಗರ್‌ವಾಲ್‌ ಲಯಕ್ಕೆ ಮರಳಲು ಕಾತರಿಸುತ್ತಿದ್ದಾರೆ.

ಇದನ್ನೂ ಓದಿ: ಸುಪ್ರೀಂ ತೀರ್ಪಿನ ಮೇಲೆ ಶ್ರೀಶಾಂತ್ ಭವಿಷ್ಯ- BCCIಗೆ ಶುರುವಾಯ್ತು ಆತಂಕ!

ಹರ್ಯಾಣ ಆಡಿರುವ 6 ಪಂದ್ಯಗಳಲ್ಲಿ 4ರಲ್ಲಿ ಗೆಲುವು ಸಾಧಿಸಿದ್ದು, 3ನೇ ಸ್ಥಾನದಲ್ಲಿದೆ. ಗುಂಪಿನಿಂದ ಅಗ್ರ 2 ತಂಡಗಳು ಮಾತ್ರ ಸೂಪರ್‌ ಲೀಗ್‌ ಪ್ರವೇಶಿಸಲಿವೆ. ಹೀಗಾಗಿ 2ನೇ ಸ್ಥಾನದಲ್ಲಿರುವ ಬಂಗಾಳ ಹಾಗೂ ಹರ್ಯಾಣ ನಡುವೆ ಪೈಪೋಟಿ ಇದೆ. ಶನಿವಾರ ಬಂಗಾಳ, ಒಡಿಶಾ ವಿರುದ್ಧ ಆಡಲಿದ್ದು ಗೆಲುವಿನ ವಿಶ್ವಾಸದಲ್ಲಿದೆ.

ಪಂದ್ಯ ಆರಂಭ: ಮಧ್ಯಾಹ್ನ 1ಕ್ಕೆ.

click me!