
ಸಿಂಗಾಪುರ(ಅ.25): ಆಡುವಾಗ ಗೆಲುವಿನ ಮೇಲಷ್ಟೇ ನಿಗಾ ಇರುತ್ತದೆ ಎಂಬುದು ಸಾಮಾನ್ಯ ನಂಬುಗೆ. ಇದರ ಮಧ್ಯೆ ಹೇರ್ ಕಟಿಂಗ್ ಮಾಡಿಕೊಂಡು ಗೆಲುವು ಸಾಧಿಸುವುದು ಮತ್ತೊಂದು ಕಲೆಗಾರಿಕೆ ಎಂಬುದನ್ನು ಹಿರಿಯ ಆಟಗಾರ್ತಿ ಸ್ವೆಟ್ಲಾನ ಕುಜ್ನೆಟ್ಸೋವಾ ನಿರೂಪಿಸಿದ್ದಾರೆ.
ಸಿಂಗಪುರದಲ್ಲಿ ನಡೆಯುತ್ತಿರುವ ಡಬ್ಲ್ಯೂಓಪನ್ ಟೆನಿಸ್ ಟೂರ್ನಿಯಲ್ಲಿ ಪೋಲೆಂಡ್ ಆಟಗಾರ್ತಿ ಆಗ್ನೀಸ್ಕಾ ರಾಡ್ವಾಂಸ್ಕಾ ವಿರುದ್ಧ ಆಡುವಾಗ ಪೋನಿಟೇಲ್ ಮಾದರಿಯ ಹೇರ್‌ಸ್ಟೈಲ್ ಕಣ್ಣಿಗೆ ತಾಕುತ್ತಿದ್ದರಿಂದ ಬೇಸರಗೊಂಡ ಆಕೆ, ಪಂದ್ಯದ ನಡುವೆಯೇ ತಲೆಗೂದಲು ಕತ್ತರಿಸಿ ನೆರೆದಿದ್ದವರನ್ನು ಚಕಿತಗೊಳಿಸಿದರು.
ಅಗ್ನೀಸ್ಕಾ ರಾಡ್ವಾಂಸ್ಕಾ ವಿರುದ್ಧ ಆಡಿದ ಅವರು, ಮೊದಲ ಸೆಟ್ ಗೆದ್ದು ಎರಡನೇ ಸೆಟ್ ಸೋತು ಸಾಕಷ್ಟು ಕಿರಿಕಿರಿ ಅನುಭವಿಸಿದರು. ನಂತರ ಕೂದಲು ಕತ್ತರಿಸಿಕೊಂಡರು. ದುಃಖದಲ್ಲೇ 3ನೇ ಸೆಟ್ ಆಡಿದ ಅವರು 7-5 ಅಂತರದಲ್ಲಿ ಗೆದ್ದು ಚಾಂಪಿಯನ್ ಪಟ್ಟ ಗಳಿಸಿದರು.
ಹೇರ್'ಕಟ್ ಮಾಡುತ್ತಿರುವ ದೃಶ್ಯ ನಿಮಗಾಗಿ:
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.