
ಬೆಂಗಳೂರು (ನ.12): ಸತತ ಎರಡು ದಶಕಗಳಿಂದ ಯಶಸ್ವಿಯಾಗಿ ನಡೆಸುತ್ತಿರುವ ಸ್ಟಾರ್ ಕಿಂಗ್ ಫಿಶರ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಸುವರ್ಣ ನ್ಯೂಸ್ ತಂಡ ಕೊನೆ ಕ್ಷಣದವರೆಗೆ ರೋಚಕ ಕಾದಾಟ ನಡೆಸಿ ಪರಾಭವಗೊಂಡಿದೆ.
ನಗರದ ಹೊರವಲಯದಲ್ಲಿರುವ ಆದಿತ್ಯ ಗ್ಲೋಬಲ್ ಗ್ರೌಂಡ್ ನಲ್ಲಿ ನಡೆದ ನಡೆದ ಟಿ 20 ಪಂದ್ಯದಲ್ಲಿ ಕಾರ್ಪೋರೇಟ್ ತಂಡ ಎ ಎನ್ ಝಡ್ ವಿರುದ್ಧ ಅಭೂತಪೂರ್ವ ಪ್ರದರ್ಶನದ ನೀಡಿ ಸೋಲುಂಡಿತು. ಇದೇ ಟೂರ್ನಿಯಲ್ಲಿ ಲೀಗ್ ಹಂತದಲ್ಲಿ ಸುವರ್ಣ ನ್ಯೂಸ್ ತಂಡ ಇನ್ನೆರಡು ಪಂದ್ಯ ಆಡಲಿದ್ದು, ಅದ್ಬುತ ಪ್ರದರ್ಶಕ್ಕೆ ಈಗಿನಿಂದಲೇ ಭರ್ಜರಿ ಸಿದ್ಧತೆ ಆರಂಭಿಸಿದೆ.
ಟೂರ್ನಿಯಲ್ಲಿ ಸುವರ್ಣ ನ್ಯೂಸ್ ತಂಡದ ಪರ ಜೈಯೇಶ್ ಹಾಗೂ ಅಜೇಯ್ ಉತ್ತಮ ಪ್ರದರ್ಶನ ನೀಡಿ ಪಂದ್ಯಕ್ಕೆ ರೋಚಕತೆ ನೀಡಿದರು. ಸ್ಟಾರ್ ಕಿಂಗ್ ಫಿಶರ್ ಟೂರ್ನಿಯನ್ನು ಎಸ್.ಕೆ ವೆಂಕಟೇಶ್ ಆಯೋಜಿಸಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.