ಆಫ್ರಿಕಾ ಟಿ20 ಸರಣಿಗೆ ಟೀಂ ಇಂಡಿಯಾ ಪ್ರಕಟ: ವರ್ಷದ ಬಳಿಕ ಕಮ್'ಬ್ಯಾಕ್ ಮಾಡಿದ ಸ್ಟಾರ್ ಆಟಗಾರ

By Suvarna Web DeskFirst Published Jan 28, 2018, 5:35 PM IST
Highlights

3 ಪಂದ್ಯಗಳ ಟಿ20 ಸರಣಿಯು ಫೆಬ್ರವರಿ 18 ರಿಂದ ಆರಂಭವಾಗಲಿದ್ದು, ಮೊದಲ ಪಂದ್ಯ ಜೊಹಾನ್ಸ್'ಬರ್ಗ್, ಎರಡನೇ ಪಂದ್ಯ(ಫೆ. 21) ಸೆಂಚುರಿಯನ್ ಹಾಗೂ ಕೊನೆಯ ಪಂದ್ಯ(ಫೆ.24) ಕೇಪ್'ಟೌನ್'ನಲ್ಲಿ ನಡೆಯಲಿದೆ.

ನವದೆಹಲಿ(ಜ.28): ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿಗೆ 16 ಆಟಗಾರರನ್ನೊಳಗೊಂಡ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದ್ದು, ಒಂದು ವರ್ಷದ ಬಳಿಕ ಸುರೇಶ್ ರೈನಾ ತಂಡ ಕೂಡಿಕೊಂಡಿದ್ದಾರೆ.

ಕಳೆದ ಡಿಸೆಂಬರ್'ನಲ್ಲಿ ಯೋ ಯೋ ಪರೀಕ್ಷೆ ಪಾಸ್ ಮಾಡಿದ್ದ ರೈನಾ, ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯಲ್ಲಿ ಕೇವಲ 49 ಎಸೆತಗಳಲ್ಲಿ ಶತಕ ಸಿಡಿಸಿ ಗಮನ ಸೆಳೆದಿದ್ದರು. ರೈನಾ ಕಡೆಯದಾಗಿ ಕಳೆದ ವರ್ಷದ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಬ್ಲೂ ಜೆರ್ಸಿ ತೊಟ್ಟು ಕಣಕ್ಕಿಳಿದಿದ್ದರು.

ಇನ್ನು ಐಪಿಎಲ್ ಆಟಗಾರರ ಹರಾಜಿನಲ್ಲಿ 11.50 ಕೋಟಿಗೆ ರಾಜಸ್ಥಾನ ಪಾಲಾಗಿರುವ ವೇಗಿ ಜಯದೇವ್ ಉನಾದ್ಕಟ್ ಕೂಡಾ ಟೀಂ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

3 ಪಂದ್ಯಗಳ ಟಿ20 ಸರಣಿಯು ಫೆಬ್ರವರಿ 18 ರಿಂದ ಆರಂಭವಾಗಲಿದ್ದು, ಮೊದಲ ಪಂದ್ಯ ಜೊಹಾನ್ಸ್'ಬರ್ಗ್, ಎರಡನೇ ಪಂದ್ಯ(ಫೆ. 21) ಸೆಂಚುರಿಯನ್ ಹಾಗೂ ಕೊನೆಯ ಪಂದ್ಯ(ಫೆ.24) ಕೇಪ್'ಟೌನ್'ನಲ್ಲಿ ನಡೆಯಲಿದೆ.

ತಂಡ ಹೀಗಿದೆ:

ಕೊಹ್ಲಿ, ರೋಹಿತ್, ಧವನ್, ರಾಹುಲ್, ರೈನಾ, ಧೋನಿ, ಕಾರ್ತಿಕ್, ಪಾಂಡ್ಯ, ಪಾಂಡೆ, ಅಕ್ಷರ್, ಚಾಹಲ್, ಕುಲ್ದೀಪ್, ಭುವಿ, ಬುಮ್ರಾ, ಉನಾದ್ಕಟ್, ಶಾರ್ದೂಲ್ ಠಾಕೂರ್

click me!