ಇದು ಧೋನಿಯ ಕೊನೆ ಐಪಿಎಲ್‌?: ಕುತೂಹಲ ಕೆರಳಿಸಿದ ಹೇಳಿಕೆ!

Published : May 03, 2019, 11:55 AM IST
ಇದು ಧೋನಿಯ ಕೊನೆ ಐಪಿಎಲ್‌?: ಕುತೂಹಲ ಕೆರಳಿಸಿದ ಹೇಳಿಕೆ!

ಸಾರಾಂಶ

ಇದು ಧೋನಿಯ ಕೊನೆ ಐಪಿಎಲ್‌? ಮುಂದಿನ ವರ್ಷ ತಂಡ ಮುನ್ನಡೆಸುವ ಕುರಿತಾಗಿ ತಂಡದ ಓರ್ವ ಆಟಗಾರ ನೀಡಿದ ಹೇಳಿಕೆ ಬಹಳಷ್ಟು ಕುತೂಹಲ ಮೂಡಿಸಿದೆ. ನಿಜಕ್ಕೂ ಧೋನಿ IPLಗೆ ಗುಡ್ ಬೈ ಹೇಳ್ತಾರಾ? ನಿವೃತ್ತಿ ಘೋಷಿಸಿದರೆ ತಮಡ ಮುನ್ನಡೆಸುವವರಾರು? ಇಲ್ಲಿದೆ ನೋಡಿ ವಿವರ

ಚೆನ್ನೈ[ಮೇ.03]: ಎಂ.ಎಸ್‌.ಧೋನಿ ಈ ಆವೃತ್ತಿ ಬಳಿಕ ಐಪಿಎಲ್‌ಗೆ ವಿದಾಯ ಘೋಷಿಸುತ್ತಾರಾ?. ಈ ರೀತಿ ಕುತೂಹಲ ಶುರುವಾಗಿದೆ. ಡೆಲ್ಲಿ ವಿರುದ್ಧ ಬುಧವಾರ ಗೆಲುವು ಸಾಧಿಸಿದ ಬಳಿಕ ತಂಡದ ಬ್ಯಾಟಿಂಗ್‌ ಆಧಾರಸ್ತಂಭ ಹಾಗೂ ಉಪನಾಯಕ ಸುರೇಶ್‌ ರೈನಾ ನೀಡಿದ ಹೇಳಿಕೆ, ಕುತೂಹಲಕ್ಕೆ ಕಾರಣವಾಗಿದೆ.

ಅನಾರೋಗ್ಯದ ಕಾರಣ ಈ ವರ್ಷ ಧೋನಿ 2 ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರು. ಧೋನಿ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುವುದು ಎಷ್ಟುಕಷ್ಟಎನ್ನುವ ಪ್ರಶ್ನೆಗೆ ಉತ್ತರಿಸಿದ ರೈನಾ, ‘ನಾಯಕನಾಗಿ ಅವರ ಅನುಪಸ್ಥಿತಿ ಕಾಡುವುದಕ್ಕಿಂತ ಒಬ್ಬ ಬ್ಯಾಟ್ಸ್‌ಮನ್‌ ಕೊರತೆ ಎದುರಾಗಲಿದೆ. ಬ್ಯಾಟ್ಸ್‌ಮನ್‌ ಹಾಗೂ ಮಾರ್ಗದರ್ಶಕನಾಗಿ ಧೋನಿ ಕಳೆದ ಕೆಲ ವರ್ಷಗಳಿಂದ ಅತ್ಯುತ್ತಮ ಕೆಲಸ ನಿರ್ವಹಿಸಿದ್ದಾರೆ. ಅವರು ತೆರೆ ಮರೆಗೆ ಸರಿದ ಬಳಿಕ ಮುಂದಿನ ವರ್ಷ ನನ್ನನ್ನು ನಾಯಕನಾಗಿ ನೋಡಲಿದ್ದೀರಿ. ಅವರಷ್ಟುಸಾಮರ್ಥ್ಯ ನನಗೆ ಬೇಕಿದೆ. ಅವರು ಇಚ್ಛಿಸುವಷ್ಟುದಿನ ಚೆನ್ನೈ ಪರ ಆಡಲಿದ್ದಾರೆ’ ಎಂದು ಹೇಳಿದ್ದಾರೆ.

2019ರ ಏಕದಿನ ವಿಶ್ವಕಪ್‌ ಬಳಿಕ ಧೋನಿ ಕ್ರಿಕೆಟ್‌ ವೃತ್ತಿಬದುಕಿಗೆ ನಿವೃತ್ತಿ ಘೋಷಿಸುವ ನಿರೀಕ್ಷೆ ಇದೆ. ರೈನಾ ಅದರ ಸುಳಿವು ನೀಡಿದ್ದಾರೆ ಎಂದು ಹಲವರು ವಿಶ್ಲೇಷಿಸಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?