
ಬೆಂಗಳೂರು(ಡಿ.22): ಹಲವು ತಿಂಗಳುಗಳಿಂದ ಭಾರತ ತಂಡದಿಂದ ಹೊರಗಿರುವ ಸುರೇಶ್ ರೈನಾ ಕೊನೆಗೂ ‘ಯೋ-ಯೋ’ ಫಿಟ್ನೆಸ್ ಟೆಸ್ಟ್'ನಲ್ಲಿ ಉರ್ತ್ತೀಣರಾಗಿದ್ದಾರೆ.
ಇಲ್ಲಿನ ಎನ್'ಸಿಎನಲ್ಲಿ ಕಳೆದ 10 ದಿನಗಳಿಂದ ಅಭ್ಯಾಸ ನಡೆಸುತ್ತಿದ್ದ ರೈನಾ, ಗುರುವಾರ ತಾವು ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸಾಗಿರುವುದಾಗಿ ಟ್ವೀಟರ್'ನಲ್ಲಿ ಘೋಷಿಸಿಕೊಂಡಿದ್ದಾರೆ. ಯೋ-ಯೋ ಟೆಸ್ಟ್ ಪಾಸ್ ಮಾಡಲು ಸಹಕರಿಸಿದ ತರಬೇತಿದಾರರಿಗೆ, ಕೋಚ್'ಗಳಿಗೆ ಹಾಗೂ ಎನ್'ಸಿಎ ಅಧಿಕಾರಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಭಾರತ ತಂಡದಲ್ಲಿ ಸ್ಥಾನ ಪಡೆಯಬೇಕಿದ್ದರೆ, ಯೋ-ಯೋ ಟೆಸ್ಟ್'ನಲ್ಲಿ ಪಾಸಾಗಬೇಕು ಎಂದು ಬಿಸಿಸಿಐ ಕೆಲ ತಿಂಗಳುಗಳ ಹಿಂದೆ ನಿಯಮ ಜಾರಿ ಮಾಡಿತ್ತು. ಇದೀಗ, ರೈನಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದು ದಕ್ಷಿಣ ಆಫ್ರಿಕಾ ವಿರುದ್ಧದ ಸೀಮಿತ ಓವರ್ ಸರಣಿಯಲ್ಲಿ ಸ್ಥಾನ ಪಡೆಯುವ ವಿಶ್ವಾಸದಲ್ಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.