
ನವದೆಹಲಿ(ಅ.08): ಬೆಟ್ಟಿಂಗ್ ಆರೋಪದಡಿ ನ್ಯಾ. ಲೋಧಾ ಸಮಿತಿಯಿಂದ ಎರಡು ವರ್ಷಗಳವರೆಗೆ ಐಪಿಎಲ್ ಕೂಟದಿಂದ ಅಮಾನತುಗೊಂಡಿರುವ ಚೆನ್ನೈ ಸೂಪರ್ ಕಿಂಗ್ (ಸಿಎಸ್‌ಕೆ) ಮೇಲಿನ ಅಮಾನತನ್ನು ತೆರವುಗೊಳಿಸಬೇಕೆಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾಗೊಂಡಿದೆ.
‘‘ಫ್ರಾಂಚೈಸಿಯ ಪ್ರಾಂಶುಪಾಲರಾಗಿದ್ದ ಗುರುನಾಥ್ ಮೇಯಪ್ಪನ್ ಅವರೇ ಬೆಟ್ಟಿಂಗ್‌ನಲ್ಲಿ ಸಿಲುಕಿದ್ದು ತನಿಖೆಯಿಂದ ಋುಜುವಾಗಿದೆ. ಹೀಗಾಗಿ ಐಪಿಎಲ್‌ನ ನಿಯಮದಂತೆ ಅದರ ಮೇಲಿನ 2 ವರ್ಷಗಳ ನಿಷೇಧ ಇಲ್ಲವೇ ಅಮಾನತು ಕ್ರಮ ಸರಿಯಾಗಿಯೇ ಇದೆ ಎಂಬ ಮದ್ರಾಸ್ ಉಚ್ಚ ನ್ಯಾಯಾಲಯದ ನಿರ್ಣಯದಲ್ಲಿ ತಪ್ಪೇನೂ ಇಲ್ಲ’’ ಎಂದು ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ನೇತೃತ್ವದ ಪೀಠ ತಿಳಿಸಿತು.
ಈ ಹಿಂದೆ ತಂಡದ ಮಾಲೀಕ ಎನ್. ಶ್ರೀನಿವಾಸನ್ ಇಲ್ಲವೇ ಆಟಗಾರರ ಮೇಲೆ ಯಾವುದೇ ಆರೋಪಗಳಿಲ್ಲದಿದ್ದರೂ ಸಿಎಸ್ಕೆಯನ್ನು ನಿಷೇಧಿಸಿದ್ದೇಕೆ ಎಂದು ಸುಬ್ರಹ್ಮಣಿಯನ್ ಸ್ವಾಮಿ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.