3ನೇ ಸ್ಥಾನಕ್ಕೆ ಆನಂದ್ ತೃಪ್ತ

By Web DeskFirst Published Oct 7, 2016, 4:59 PM IST
Highlights

ಮಾಸ್ಕೋ(ಅ.07): ಐದು ಬಾರಿಯ ವಿಶ್ವಚಾಂಪಿಯನ್‌ ಭಾರತದ ಚೆಸ್‌ ಸ್ಟಾರ್‌ ವಿಶ್ವನಾಥನ್‌ ಆನಂದ್‌, ತಾಲ್‌ ಸ್ಮಾರಕ ಚೆಸ್‌ ಟೂರ್ನಿಯಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ಟೂರ್ನಿಯ ಕೊನೆಯ ಸುತ್ತಿನ ಪಂದ್ಯದಲ್ಲಿ ಆರ್ಮೇನಿಯಾದ ಲೆವೆನ್‌ ಆರೋನಿಯನ್‌ ಎದುರು ಡ್ರಾ ಸಾಧಿಸಿದ ಆನಂದ್‌ ಒಟ್ಟಾರೆ 5 ಅಂಕ ಗಳಿಸಿ ಅರೋನಿಯನ್‌ ಅವರೊಂದಿಗೆ ಸ್ಥಾನ ಹಂಚಿಕೊಂಡರು.

ಆದರೆ, ಟೂರ್ನಿಯುದ್ದಕ್ಕೂ ಚಾಣಾಕ್ಷ ಪ್ರದರ್ಶನ ನೀಡಿದ ರಷ್ಯಾದ ಇಯಾನ್‌ ನೆಪೊಮ್ನಿಚ್ಟಾಚಿ 6 ಅಂಕ ಗಳಿಸಿ ಚಾಂಪಿಯನ್‌ ಎನಿಸಿದರೆ, ತೀವ್ರ ಪ್ರತಿಸ್ಪರ್ಧೆ ಒಡ್ಡಿದ ಹಾಲೆಂಡ್‌ನ ಅನೀಶ್‌ ಗಿರಿ 5.5 ಅಂಕ ಗಳಿಸಿ ಎರಡನೇ ಸ್ಥಾನ ಪಡೆದರು.

click me!