ಐಪಿಎಲ್ ಪಂದ್ಯಗಳಿಂದ ಹೈದರಾಬಾದ್ ಮಿಸ್?

By Suvarna Web DeskFirst Published Mar 21, 2017, 3:58 PM IST
Highlights

2010ರಲ್ಲೂ ಕೂಡ ತೆಲಂಗಾಣ ಹೋರಾಟದಿಂದಾಗಿ ಹೈದರಾಬಾದ್'ನಲ್ಲಿ ನಡೆಯಬೇಕಿದ್ದ ಪಂದ್ಯಗಳು ಮುಂಬೈ ಹಾಗೂ ನಾಗ್ಪುರಕ್ಕೆ ಸ್ಥಳಾಂತರಗೊಂಡಿದ್ದವು.

ಹೈದರಾಬಾದ್(ಮಾ.21): ಕಳೆದೆರಡು ತಿಂಗಳಿನಿಂದ ಸಂಬಳ ಸಿಗದ ಹಿನ್ನೆಲೆಯಲ್ಲಿ ಕ್ರೀಡಾಂಗಣದ ಸಿಬ್ಬಂದಿಯನ್ನೂ ಒಳಗೊಂಡು ನೂರಿಪ್ಪತ್ತು ಮಂದಿ ಮಾರ್ಚ್ ಮೊದಲ ವಾರದಿಂದಲೇ ಮುಷ್ಕರ ಹೂಡಿದ್ದು, ಈ ಸಂಬಂಧ ಬಿಸಿಸಿಐಗೆ ಪತ್ರ ಬರೆದಿದ್ದರೂ, ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಈ ಋತುವಿನ ಐಪಿಎಲ್ ಪಂದ್ಯಗಳು ಹೈದರಾಬಾದ್‌ನಿಂದ ರಾಯ್‌ಪುರಕ್ಕೆ ಸ್ಥಳಾಂತರಗೊಳ್ಳುವ ಸಂಭವವಿದೆ ಎಂದು ಹೈದರಾಬಾದ್ ಕ್ರಿಕೆಟ್ ಸಂಸ್ಥೆ (ಎಚ್‌ಸಿಎ) ಕಾರ್ಯದರ್ಶಿ ಜಾನ್ ಮನೋಜ್ ತಿಳಿಸಿದ್ದಾರೆ.

ಬಿಸಿಸಿಐ ವೀಕ್ಷಕರಾದ ರತ್ನಾಕರ್ ಶೆಟ್ಟಿಯವರ ಪ್ರಕಾರ ಭಾರತ-ಬಾಂಗ್ಲಾದೇಶ ನಡುವಿನ ಏಕೈಕ ಟೆಸ್ಟ್ ಪಂದ್ಯದಿಂದಾಗಿ ಹೈದರಾಬಾದ್ ಕ್ರಿಕೆಟ್ ಸಂಸ್ಥೆಗೆ ಸುಮಾರು 44 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ

ಏಪ್ರಿಲ್ 5ರಂದು ನಡೆಯಲಿರುವ ಉದ್ಘಾಟನಾ ಪಂದ್ಯವಲ್ಲದೆ, ಮೇ 21ರ ಫೈನಲ್ ಸೇರಿದಂತೆ ಒಟ್ಟು 8 ಪಂದ್ಯಗಳಿಗೆ ಹೈದರಾಬಾದ್ ಆತಿಥ್ಯ ಹೊತ್ತಿದೆ.

2010ರಲ್ಲೂ ಕೂಡ ತೆಲಂಗಾಣ ಹೋರಾಟದಿಂದಾಗಿ ಹೈದರಾಬಾದ್'ನಲ್ಲಿ ನಡೆಯಬೇಕಿದ್ದ ಪಂದ್ಯಗಳು ಮುಂಬೈ ಹಾಗೂ ನಾಗ್ಪುರಕ್ಕೆ ಸ್ಥಳಾಂತರಗೊಂಡಿದ್ದವು.

click me!