ಏನಿದು ದೇವಧರ್ ಟೂರ್ನಿ?

By Suvarna Web DeskFirst Published Mar 21, 2017, 3:18 PM IST
Highlights

ಕಳೆದ ವರ್ಷ ಇಂಡಿಯಾ ಎ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಉತ್ತರ ವಲಯ ಅತಿ ಹೆಚ್ಚುಬಾರಿ ಅಂದರೆ 13 ಬಾರಿ ದೇವಧರ್ ಟ್ರೋಫಿಯ ಚಾಂಪಿಯನ್ ಆಗಿ ದಾಖಲೆ ಬರೆದಿದೆ.

ಬೆಂಗಳೂರು(ಮಾ.21): ಭಾರತೀಯ ಕ್ರಿಕೆಟ್‌ನ ‘ಗ್ರ್ಯಾಂಡ್ ಓಲ್ಡ್‌ಮ್ಯಾನ್’ ಅಂತಲೇ ಕರೆಯಲ್ಪಡುವ ಮಾಜಿ ಕ್ರಿಕೆಟಿಗ, ಪ್ರೊ. ದಿನಕರ್ ಬಲ್ವಂತ್ ದೇವಧರ್ ಅವರ ಹೆಸರಿನಲ್ಲಿ 1973-74ರಲ್ಲಿ ಟೂರ್ನಿ ಆರಂಭಗೊಂಡಿತು.

50 ಓವರ್‌'ಗಳ ಟೂರ್ನಿಯಾಗಿರುವ ಇದು ಕಳೆದ ವರ್ಷದವರೆಗೂ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಹಾಗೂ ಕೇಂದ್ರ ವಲಯಗಳ ತಂಡಗಳ ನಡುವಣ ನಡೆಯುತ್ತಿತ್ತು.

ಆದರೆ 2015-16ರ ಋತುವಿನಲ್ಲಿ ಬಿಸಿಸಿಐ ದೇಸೀ ಟೂರ್ನಿಯಲ್ಲಿ ಬದಲಾವಣೆ ಮಾಡಿದ್ದರ ಫಲವಾಗಿ ವಿಜಯ್ ಹಜಾರೆ ಟ್ರೋಫಿಯಲ್ಲಿ ವಿಜೇತವಾಗುವ ತಂಡದ ವಿರುದ್ಧ ಇಂಡಿಯಾ ಬ್ಲೂ ಮತ್ತು ಇಂಡಿಯಾ ರೆಡ್ ಎಂಬ ಎರಡು ತಂಡಗಳು ಪ್ರಶಸ್ತಿಗಾಗಿ ಸೆಣಸಾಡುತ್ತದೆ. ಟೂರ್ನಿಯಲ್ಲಿ ಫೈನಲ್ ಸೇರಿ ಒಟ್ಟು 4 ಪಂದ್ಯಗಳು ನಡೆಯಲಿವೆ.

ಕಳೆದ ವರ್ಷ ಇಂಡಿಯಾ ಎ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಉತ್ತರ ವಲಯ ಅತಿ ಹೆಚ್ಚುಬಾರಿ ಅಂದರೆ 13 ಬಾರಿ ದೇವಧರ್ ಟ್ರೋಫಿಯ ಚಾಂಪಿಯನ್ ಆಗಿ ದಾಖಲೆ ಬರೆದಿದೆ.

ಪ್ರಸಕ್ತ ವರ್ಷ ವಿಜಯ್ ಹಜಾರೆ ಟ್ರೋಫಿ ವಿಜೇತ ತಂಡವಾದ ತಮಿಳುನಾಡು, ಇಂಡಿಯಾ ಬ್ಲೂ ಮತ್ತು ಇಂಡಿಯಾ ರೆಡ್ ತಂಡಗಳು ಪ್ರಶಸ್ತಿಗಾಗಿ ಕಾದಾಡಲಿದ್ದು ಮಾರ್ಚ್ 25ರಿಂದ 29ರವರೆಗೆ ಪಂದ್ಯಗಳು ನಡೆಯಲಿವೆ.

click me!