ಭಾರತ ವಿರುದ್ಧದ ಟಿ20 ಸರಣಿಯ ಮೊದಲೆರಡು ಪಂದ್ಯಗಳಿಗೆ ವೆಸ್ಟ್ ಇಂಡೀಸ್ ತಂಡವನ್ನು ಪ್ರಕಟಿಸಲಾಗಿದೆ. ಅನುಭವಿ ಜತೆಗೆ ಯುವ ಕ್ರಿಕೆಟಿಗರು ತಂಡದಲ್ಲಿ ಸ್ಥಾನ ಪಡೆದಿದ್ದು ಭಾರತಕ್ಕೆ ಸವಾಲೊಡ್ಡಲು ಕೆರಿಬಿಯನ್ನರ ಪಡೆ ಸಜ್ಜಾಗಿದೆ.
ಬಾರ್ಬಡಸ್[ಜು.23]: ಭಾರತ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಮೊದಲೆರಡು ಪಂದ್ಯಗಳಿಗೆ 14 ಆಟಗಾರರನ್ನೊಳಗೊಂಡ ವೆಸ್ಟ್ ಇಂಡೀಸ್ ತಂಡವನ್ನು ಪ್ರಕಟಿಸಲಾಗಿದ್ದು, ಅನುಭವಿ ಕ್ರಿಕೆಟಿಗರಾದ ಸುನಿಲ್ ನರೈನ್, ಕಿರಾನ್ ಪೊಲ್ಲಾರ್ಡ್ ತಂಡ ಕೂಡಿಕೊಂಡಿದ್ದಾರೆ. ಫ್ಲೋರಿಡಾದಲ್ಲಿ ಆಗಸ್ಟ್ 3 ರಿಂದ ಆರಂಭವಾಗಲಿರುವ ಮೊದಲೆರಡು ಪಂದ್ಯಕ್ಕೂ ಮುನ್ನ ಆಂಡ್ರೆ ರಸೆಲ್ ಫಿಟ್ನೆಸ್ ಟೆಸ್ಟ್ ಪಾಸಾದರೆ ಮಾತ್ರ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಕೆನಡಾ ಗ್ಲೋಬಲ್ ಟಿ20 ಲೀಗ್ ಆಡಲಿರುವ ಕ್ರಿಸ್ ಗೇಲ್ ತಾವಾಗಿಯೇ ವೆಸ್ಟ್ ಇಂಡೀಸ್ ತಂಡದಿಂದ ಹೊರಗುಳಿದಿದ್ದಾರೆ.
ವಿಂಡೀಸ್ ಪ್ರವಾಸಕ್ಕೆ ಟೀಂ ಇಂಡಿಯಾ ಪ್ರಕಟ; ಮೂರು ಕನ್ನಡಿಗರಿಗೆ ಸ್ಥಾನ
undefined
ನರೈನ್ ವಿಂಡೀಸ್ ಪರ ಸೆಪ್ಟೆಂಬರ್ 2017ರಲ್ಲಿ ಇಂಗ್ಲೆಂಡ್ ವಿರುದ್ಧ ಕೊನೆಯ ಪಂದ್ಯವನ್ನಾಡಿದ್ದರು. ಇನ್ನುಳಿದಂತೆ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಆ್ಯಂಥೋನಿ ಬ್ರಾಂಬಲೆ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವನ್ನಾಡಲು ಎದುರು ನೋಡುತ್ತಿದ್ದಾರೆ. ಇನ್ನುಳಿದಂತೆ ಖಾರೆ ಪಿರ್ರೆ, ಜಾನ್ ಕ್ಯಾಂಬೆಲ್’ಗೂ ತಂಡದಿಂದ ಬುಲಾವ್ ಬಂದಿದೆ.
ಇನ್ನುಳಿದಂತೆ ಕಾರ್ಲೋಸ್ ಬ್ರಾಥ್’ವೈಟ್ ತಂಡವನ್ನು ಮುನ್ನಡೆಸಲಿದ್ದು, ಎವಿನ್ ಲೆವಿಸ್, ಶಿಮ್ರೋನ್ ಹೆಟ್ಮೇಯರ್, ಕೀಮೋ ಪೌಲ್, ಶೆಲ್ಡಾನ್ ಕಾಟ್ರೆಲ್ ತಂಡದಲ್ಲಿ ಸ್ಥಾನ ಪಡೆಯಲು ಸಫಲರಾಗಿದ್ದಾರೆ.
BREAKING: WEST INDIES SQUAD RELEASED FOR 1ST AND 2ND T20I vs INDIA IN FLORIDA. pic.twitter.com/gGU5Gde77E
— Windies Cricket (@windiescricket)ಭಾರತ-ವೆಸ್ಟ್ ಇಂಡೀಸ್ ನಡುವಿನ ಟಿ20 ಸರಣಿಯ ಮೊದಲೆರಡು ಪಂದ್ಯಗಳು ಫ್ಲೋರಿಡಾ[ಆಗಸ್ಟ್ 3 ಮತ್ತು4]ದಲ್ಲಿ ನಡೆಯಲಿದ್ದು, ಮೂರನೇ ಹಾಗೂ ಅಂತಿಮ ಟಿ20 ಪಂದ್ಯಕ್ಕೆ ಗಯಾನ ಮೈದಾನ[ಆಗಸ್ಟ್ 6] ಸಾಕ್ಷಿಯಾಗಲಿದೆ.
ವೆಸ್ಟ್ ಇಂಡೀಸ್ ತಂಡ ಹೀಗಿದೆ:
ಜಾನ್ ಕ್ಯಾಂಬೆಲ್, ಎವಿನ್ ಲೆವಿಸ್, ಶಿಮ್ರೋನ್ ಹೆಟ್ಮೇಯರ್, ನಿಕೋಲಸ್ ಪೂರನ್, ಕಿರಾನ್ ಪೊಲ್ಲಾರ್ಡ್, ರೋಮನ್ ಪೊವೆಲ್, ಕಾರ್ಲೋಸ್ ಬ್ರಾಥ್’ವೈಟ್[ನಾಯಕ], ಕೀಮೋ ಪೌಲ್, ಸುನಿಲ್ ನರೈನ್, ಶೆಲ್ಡಾನ್ ಕಾಟ್ರೆಲ್, ಓಶಾನೆ ಥಾಮಸ್, ಆ್ಯಂಥೋನಿ ಬ್ರಾಂಬಲೆ, ಆ್ಯಂಡ್ರೆ ರಸೆಲ್, ಖಾರೆ ಪಿರ್ರೆ