ಭಾರತ-ಇಂಗ್ಲೆಂಡ್ ಏಕದಿನ: ಟೀಂ ಇಂಡಿಯಾ ಗೆಲುವಿಗೆ ಎಷ್ಟು ರನ್ ಬೇಕು?

First Published Jul 17, 2018, 7:46 PM IST
Highlights

ಇಂಗ್ಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿಗೆ ಕಠಿಣ ಹಾದಿ ಸವೆಸಬೇಕಿದೆ. ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿರುವ ಭಾರತ, ಸಂಕಷ್ಟಕ್ಕೆ ಸಿಲುಕಿದೆ. ಹಾಗಾದರೆ ಭಾರತದ ಗೆಲುವಿಗೆ ಎಷ್ಟು ರನ್ ಸೂಕ್ತ? ಇಲ್ಲಿದೆ ವಿವರ.

ಲೀಡ್ಸ್(ಜು.17): ಇಂಗ್ಲೆಂಡ್ ವಿರುದ್ಧದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ. ನಾಯಕ ವಿರಾಟ್ ಕೊಹ್ಲಿ ಸಿಡಿಸಿದ ಅರ್ಧಶತಕ ಹೊರತು ಪಡಿಸಿದರೆ, ಉಳಿದ ಬ್ಯಾಟ್ಸ್‌ಮನ್‌ಗಳಿಂದ ರನ್ ಹರಿದು ಬರಲಿಲ್ಲ.

ಲೀಡ್ಸ್ ಪಂದ್ಯದಲ್ಲಿ ಟೀಂ ಇಂಡಿಯಾ ಅಲ್ಪಮೊತ್ತಕ್ಕೆ ಕುಸಿಯೋ ಭೀತಿ ಎದುರಾಗಿದೆ. ಈ ನಡುವೆ ಟೀಂ ಇಂಡಿಯಾ ಗೆಲುವಿಗೆ ಎಷ್ಟು ರನ್ ಸೂಕ್ತ ಅನ್ನೋ ಚರ್ಚೆ ಶುರುವಾಗಿದೆ. ಟೀಂ ಇಂಡಿಯಾ ಮಾಜಿ ನಾಯಕ ಸುನಿಲ್ ಗವಾಸ್ಕರ್ ಪ್ರಕಾರ ಗೆಲುವಿಗೆ 260 ರಿಂದ 280 ರನ್‌ಗಳಿಸಿದರೆ ಭಾರತದ ಗೆಲುವು ಸುಲಭವಾಗಲಿದೆ ಎಂದಿದ್ದಾರೆ.

ಟಾಸ್ ಸೋತು ಬ್ಯಾಟಿಂಗ್ ಇಳಿದಿರುವ ಟೀಂ ಇಂಡಿಯಾ ಈಗಾಗಲೇ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ. ರೋಹಿತ್ ಶರ್ಮಾ 2, ಶಿಖರ್ ಧವನ್ 44, ದಿನೇಶ್ ಕಾರ್ತಿಕ್ 21, ವಿರಾಟ್ ಕೊಹ್ಲಿ 71, ಸರೇಶ್ ರೈನಾ 1 ಹಾಗೂ ಹಾರ್ದಿಕ್ ಪಾಂಡ್ಯ 21 ರನ್ ಸಿಡಿಸಿ ಪೆವಿಲಿಯನ್ ಸೇರಿದ್ದಾರೆ.
 

click me!