ಭಾರತ-ಇಂಗ್ಲೆಂಡ್ ಏಕದಿನ: 48ನೇ ಅರ್ಧಶತಕ ಸಿಡಿಸಿದ ನಾಯಕ ವಿರಾಟ್

First Published Jul 17, 2018, 6:47 PM IST
Highlights

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಏಕದಿನ ಸರಣಿಯ ಅಂತಿಮ ಪಂದ್ಯ ಆರಂಭದಲ್ಲೇ ಕುತೂಹಲ ಮೂಡಿಸಿದೆ. ಟಾಸ್ ಸೋತು ಬ್ಯಾಟಿಂಗ್ ಇಳಿದಿರುವ ಟೀಂ ಇಂಡಿಯಾ ಪ್ರದರ್ಶನ ಹೇಗಿದೆ? ಇಲ್ಲಿದೆ ವಿವರ.

ಲೀಡ್ಸ್(ಜು.17): ಇಂಗ್ಲೆಂಡ್ ವಿರುದ್ಧದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ವಿಕೆಟ್ ಪತನದ ನಡುವೆಯೂ ನಾಯಕ ವಿರಾಟ್ ಕೊಹ್ಲಿ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು.ಏಕದಿನ ಕ್ರಿಕೆಟ್‌ನಲ್ಲಿ ಕೊಹ್ಲಿ 48ನೇ ಅರ್ಧಶತಕ ಸಿಡಿಸಿದ್ದಾರೆ. 

ಟಾಸ್ ಸೋತು ಬ್ಯಾಟಿಂಗ್ ಇಳಿದ ಟೀಂ ಇಂಡಿಯಾ ಆರಂಭದಲ್ಲೇ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡಿತು. ರೋಹಿತ್ ನಿರ್ಗಮನದ ಬಳಿಕ ಶಿಖರ್ ಧವನ್ ಹಾಗೂ ನಾಯಕ ವಿರಾಟ್ ಕೊಹ್ಲಿ ಜೊತೆಯಾಟದಿಂದ ಟೀಂ ಇಂಡಿಯಾ ಚೇತರಿಸಿಕೊಂಡಿತು. ಆದರೆ ಧವನ್ ಅರ್ಧಶತಕದ ಸನಿಹದಲ್ಲಿ ಎಡವಿದರು. 44 ರನ್ ಸಿಡಿಸಿದ ಧವನ್ ರನೌಟ್‌ಗೆ ಬಲಿಯಾದರು. ಈ ಮೂಲಕ ಭಾರತ 84ರನ್‌ಗೆ 2ನೇ ವಿಕೆಟ್ ಕಳೆದುಕೊಂಡಿತು.

 ಕಳೆದ ಪಂದ್ಯದಲ್ಲಿ ನಿರಾಸೆ ಅನುಭವಿಸಿದ ವಿರಾಟ್ ಕೊಹ್ಲಿ ಇದೀಗ ಅರ್ಧಶತಕ ಸಿಡಿಸಿ, ತಂಡಕ್ಕೆ ಆಸರೆಯಾಗಿದ್ದಾರೆ. ಕೊಹ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದರೆ, ಇತರರಿಂದ ಯಾವುದೇ ಸಾಥ್ ಸಿಗಲಿಲ್ಲ. 

ಅಂತಿಮ ಪಂದ್ಯದಲ್ಲಿ ಅವಕಾಶ ಪಡೆದಿರುವ ದಿನೇಶ್ ಕಾರ್ತಿಕ್ 21 ರನ್ ಸಿಡಿಸಿ ಔಟಾದರು. ಈ ಮೂಲಕ ಕಾರ್ತಿಕ್ ಸಿಕ್ಕ ಅವಕಾಶವನ್ನ ಉಪಯೋಗಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.  ಇಂಗ್ಲೆಂಡ್  ವಿರುದ್ಧದ  3 ಏಕದಿನ ಪಂದ್ಯದ ಸರಣಿಯ 1-1 ಅಂತರದಲ್ಲಿ ಸಮಭಲಗೊಂಡಿದೆ. ಹೀಗಾಗಿ ಇಂದಿನ ಪಂದ್ಯ ಸರಣಿಯನ್ನ ನಿರ್ಧರಿಸಲಿದೆ. 

click me!