ಸ್ಟೋಕ್ಸ್​ ಶತಕಕ್ಕೆ ಭಾರತೀಯರೇ ಕಾರಣ: ಕೊಟ್ಟರು 7 ಜೀವದಾನ

Published : Nov 11, 2016, 05:38 AM ISTUpdated : Apr 11, 2018, 12:41 PM IST
ಸ್ಟೋಕ್ಸ್​ ಶತಕಕ್ಕೆ ಭಾರತೀಯರೇ ಕಾರಣ: ಕೊಟ್ಟರು 7 ಜೀವದಾನ

ಸಾರಾಂಶ

ಸ್ಟೋಕ್ಸ್​​​ 60 ಹಾಗೂ 61 ರನ್​​​ ಗಳಿಸಿದ್ದಾಗ  ಎರಡು ಬಾರಿ ಕೀಪರ್​​​ ವೃದ್ಧಿಮಾನ್​​ ಸಾಹ  ಕ್ಯಾಚ್​ ಕೈಚೆಲ್ಲಿದ್ರು. ನಂತರ 90 ರನ್​​​ ಗಳಿಸಿದ್ದಾಗ ಬೌಂಡರಿ ಬಾರಿಸಲು ಹೋಗಿ  ಕೊಹ್ಲಿಗೆ ಕಷ್ಟದ ಕ್ಯಾಚ್​​ ಹಿಡಿಯುವಲ್ಲಿ ವಿಫಲರಾದರು.

ರಾಜ್ ಕೋಟ್(ನ.11): ಮಧ್ಯಮ ಕ್ರಮಾಂಕದ ಬೆನ್​​​ ಸ್ಟೋಕ್ಸ್​​​ಗೆ ಜೀವದಾನಗಳ ದಿನ ಎಂದ್ರೂ ತಪ್ಪಾಗ್ಲಿಕ್ಕಿಲ್ಲ. ಏಕೆಂದ್ರೆ ಅವರಿಗೆ ಸಿಕ್ಕಿದ್ದು ಬರೋಬ್ಬರಿ 7 ಜೀವದಾನಗಳು.

ಸ್ಟೋಕ್ಸ್​​​ 60 ಹಾಗೂ 61 ರನ್​​​ ಗಳಿಸಿದ್ದಾಗ  ಎರಡು ಬಾರಿ ಕೀಪರ್​​​ ವೃದ್ಧಿಮಾನ್​​ ಸಾಹ  ಕ್ಯಾಚ್​ ಕೈಚೆಲ್ಲಿದ್ರು. ನಂತರ 90 ರನ್​​​ ಗಳಿಸಿದ್ದಾಗ ಬೌಂಡರಿ ಬಾರಿಸಲು ಹೋಗಿ  ಕೊಹ್ಲಿಗೆ ಕಷ್ಟದ ಕ್ಯಾಚ್​​ ಹಿಡಿಯುವಲ್ಲಿ ವಿಫಲರಾದರು.

96 ರನ್​​​​ ಗಳಿಸಿದ್ದಾಗ ರಿವರ್ಸ್​​​ ಸ್ವೀಪ್​​​ ಮಾಡಲು ಹೋಗಿ ಮತ್ತೊಮ್ಮೆ ಸಾಹಗೆ ಕ್ಯಾಚ್​​ ನೀಡಿದ್ರೂ ಅದನ್ನ ಹಿಡಿಯುವಲ್ಲಿ ಸಫಲವಾಗಲಿಲ್ಲ. ನಂತರ 108 ಗಳಿಸಿದ್ದಾಗೂ ಸಾಹ ಸ್ಟಂಪ್​​ ಔಟ್​​ ಮಿಸ್​ ಮಾಡಿದರು. ಇದರೊಂದಿಗೆ ಸ್ಟೋಕ್ಸ್​​ಗೆ ಒಟ್ಟು 7 ಜೀವದಾನಗಳನ್ನ  ಭಾರತೀಯರು ನೀಡಿದರು.

ಅವರು 60 ರನ್​​ ಗಳಿಸಿದ್ದಾಗಲೇ ಔಟಾಗಿದ್ದಿದ್ದರೆ ಇಂಗ್ಲೆಂಡ್​​ ಇಷ್ಟು ದೊಡ್ಡ ಮೊತ್ತ ಪೇರಿಸಲು ಸಾಧ್ಯವಾಗುತ್ತಿರಲಿಲ್ಲ. ಒಂದು ಹಂತದಲ್ಲಿ ಸ್ಟೋಕ್ಸ್​ ಶತಕಕ್ಕೆ ಭಾರತೀಯರೇ ಕಾರಣ ಎಂದರೆ ತಪ್ಪಾಗುವುದಿಲ್ಲ.

ಇದಲ್ಲದೇ ಜಾನಿ ಬೈರ್​​ಸ್ಟೊವ್ 42 ರನ್​​ಗಳಿಸಿದ್ದಾಗಲೂ ಸತತವಾಗಿ ಎರಡು  ಕ್ಯಾಚ್ ಕೈಚೆಲ್ಲಲಾಯ್ತು. ಆದರೆ ಅವರು 46ಕ್ಕೆ ಔಟಾದರು. ರಹಾನೆ ಮತ್ತು ಕೊಹ್ಲಿ ಟೀಮ್ ಇಂಡಿಯಾದ ಬೆಸ್ಟ್ ಫೀಲ್ಡರ್ಸ್​. ಆದರೆ ಅವರೇ ಈ ಟೆಸ್ಟ್​​ನಲ್ಲಿ ಸಾಕಷ್ಟು ಕ್ಯಾಚ್​ಗಳನ್ನ ಡ್ರಾಪ್ ಮಾಡಿದರು. 

ಇನ್ನು ಕೆಲ ರನೌಟ್ ಮಿಸ್ ಮಾಡಿಕೊಂಡರು. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್​​​​ನಲ್ಲಿ ಬೃಹತ್ ಮೊತ್ತ ಪೇರಿಸಲು ಭಾರತೀಯರ ಕಳಪೆ ಫೀಲ್ಡಿಂಗ್ ಕಾರಣವಾಯ್ತು. ಕಳಪೆ ಫೀಲ್ಡಿಂಗ್​ನಿಂದ ಭಾರತೀಯ ಬೌಲರ್ಸ್, ಆಂಗ್ಲ ಬ್ಯಾಟ್ಸ್​ಮನ್​ಗಳನ್ನ ಕಟ್ಟಿಹಾಕಲು ಸಾಧ್ಯವಾಗಲಿಲ್ಲ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಶುಭ್‌ಮನ್ ಗಿಲ್ ಕೈಬಿಟ್ಟಿಕ್ಕೇಕೆ?: ಫಾರ್ಮ್ ಅಲ್ಲ, ಬೇರೆಯೇ ಕಾರಣ ಎಂದ ಅಜಿತ್ ಅಗರ್ಕರ್!
ಟಿ20 ವಿಶ್ವಕಪ್‌ನಿಂದ ಶುಭ್‌ಮನ್ ಗಿಲ್ ಹೊರಬಿದ್ದ ಬೆನ್ನಲ್ಲೇ ಗೌತಮ್ ಗಂಭೀರ್ ರಿಯಾಕ್ಷನ್ ಹೀಗಿತ್ತು ನೋಡಿ! ವಿಡಿಯೋ ವೈರಲ್