ಪಾಕಿಸ್ತಾನ ಸರಣಿಗೆ ಗುಪ್ಟಿಲ್ ಅಲಭ್ಯ

By Suvarna Web DeskFirst Published Nov 10, 2016, 2:22 PM IST
Highlights

ಗುಪ್ಟಿಲ್ ಜೊತೆಗೆ ಅನುಭವಿ ಆಟಗಾರರಾದ ಲೂಕ್ ರೊಂಚಿ, ಡಗ್ ಬ್ರಾಸ್‌ವೆಲ್ ಅವರನ್ನೂ ತಂಡದಿಂದ ಕೈಬಿಡಲಾಗಿದ್ದು, ಯುವ ಆಟಗಾರರಿಗೆ ಅವಕಾಶ ಕಲ್ಪಿಸಲಾಗಿದೆ.

ಲಂಡನ್(ನ.10): ಇತ್ತೀಚೆಗೆ ನಡೆದಿದ್ದ ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದ ನ್ಯೂಜಿಲೆಂಡ್ ತಂಡದ ಆರಂಭಿಕ ಮಾರ್ಟಿನ್ ಗುಪ್ಟಿಲ್ ಅವರನ್ನು ಇದೇ 17ರಿಂದ ಆರಂಭವಾಗುವ ಪಾಕಿಸ್ತಾನ ವಿರುದ್ಧದ 2 ಟೆಸ್ಟ್ ಪಂದ್ಯಗಳಿಂದ ಕೈಬಿಡಲಾಗಿದೆ. ಪಾಕಿಸ್ತಾನ ವಿರುದ್ಧದ ಸರಣಿಗಾಗಿ ನೂತನ ತಂಡವನ್ನು ಪ್ರಕಟಿಸಲಾಗಿದ್ದು, ಅದರಲ್ಲಿ ಗುಪ್ಟಿಲ್ ಅವರಿಗೆ ಕೊಕ್ ನೀಡಲಾಗಿದೆ.

ಗುಪ್ಟಿಲ್ ಜೊತೆಗೆ ಅನುಭವಿ ಆಟಗಾರರಾದ ಲೂಕ್ ರೊಂಚಿ, ಡಗ್ ಬ್ರಾಸ್‌ವೆಲ್ ಅವರನ್ನೂ ತಂಡದಿಂದ ಕೈಬಿಡಲಾಗಿದ್ದು, ಯುವ ಆಟಗಾರರಿಗೆ ಅವಕಾಶ ಕಲ್ಪಿಸಲಾಗಿದೆ. ಯುವ ಆಟಗಾರರಾದ ಬ್ಯಾಟ್ಸ್‌ಮನ್ ಜೀಟ್ ರಾವಲ್, ಆಲ್ರೌಂಡರ್ ಕೊಲಿನ್ ಡಿ ಗ್ರಾಂಡ್‌ಹೊಮ್ಮೆ ಮತ್ತು ಸ್ಪಿನ್ನರ್ ಟೊಡ್ ಆ್ಯಸ್ಟಲ್ ಅವರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಇವರಲ್ಲಿ ಕೊಲಿನ್ ಡಿ ಮತ್ತು ಟೊಡ್ ಆ್ಯಸ್ಟ್ಲೆ 2012ರ ನವೆಂಬರ್‌ನಲ್ಲಿ ನಡೆದ ಟೆಸ್ಟ್ ಪಂದ್ಯವೊಂದರಲ್ಲಿ ನ್ಯೂಜಿಲೆಂಡ್ ತಂಡದಲ್ಲಿ ಆಡಿದ್ದರು. ಆ್ಯಕ್ಲೆಂಡ್‌ನ ಬ್ಯಾಟ್ಸ್‌ಮನ್ ಆದ ಜೀಟ್ ರಾವಲ್ ಅವರಿಗೆ ಇದು ಚೊಚ್ಚಲ ಅಂತಾರಾಷ್ಟ್ರೀಯ ಅವಕಾಶ. ಇದೇ ತಿಂಗಳ 17ರಂದು ಕ್ರೈಸ್ಟ್‌ಚರ್ಚ್‌ನಲ್ಲಿ ಪಾಕಿಸ್ತಾನ ವಿರುದ್ಧ ಮೊದಲ ಟೆಸ್ಟ್ ನಡೆಯಲಿದೆ. ಆನಂತರ, ನ. 25ರಂದು ಹ್ಯಾಮಿಲ್ಟನ್‌ನಲ್ಲಿ ದ್ವಿತೀಯ ಪಂದ್ಯ ನಡೆಯಲಿದೆ.

ನ್ಯೂಜಿಲೆಂಡ್ ತಂಡ

ಕೇನ್ ವಿಲಿಯಮ್ಸನ್ (ನಾಯಕ), ಟೊಡ್ ಆ್ಯಸ್ಟ್ಲೆ, ಟ್ರೆಂಟ್ ಬೋಲ್ಟ್, ಕೊಲಿನ್ ಡಿ ಗ್ರಾಂಡ್‌ಹೊಮ್ಮೆ, ಮ್ಯಾಟ್ ಹೆನ್ರಿ, ಟಾಮ್ ಲಾಥಮ್, ಹೆನ್ರಿ ನಿಕೋಲಸ್, ಜಿಮ್ಮಿ ನಿಶಾಮ್, ಜೀಟ್ ರಾವಲ್, ಟಿಮ್ ಸೌಥಿ, ರಾಸ್ ಟೇಲರ್, ನೀಲ್ ವ್ಯಾಗ್ನರ್, ಬಿ.ಜೆ. ವ್ಯಾಟ್ಲಿಂಗ್

click me!