ಆ್ಯಷಸ್‌ ಕದನ: ಇಂಗ್ಲೆಂಡ್‌ಗೆ 398 ರನ್‌ ಗುರಿ

By Web Desk  |  First Published Aug 5, 2019, 10:51 AM IST

ಆ್ಯಷಸ್ ಸರಣಿಯ ಮೊದಲ ಪಂದ್ಯದಲ್ಲೇ  ಸ್ಟೀವ್ ಸ್ಮಿತ್ ಸತತ ಎರಡು ಶತಕಗಳ ನೆರವಿನಿಂದ ಆಸ್ಟ್ರೇಲಿಯಾ 487 ರನ್ ಬಾರಿಸಿದ್ದು, ಕೊನೆಯ ದಿನ ಇಂಗ್ಲೆಂಡ್‌ಗೆ ಗೆಲ್ಲಲು ಕಠಿಣ ಗುರಿ ನೀಡಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...


ಬರ್ಮಿಂಗ್‌ಹ್ಯಾಮ್‌[ಆ.05]: ಇಂಗ್ಲೆಂಡ್‌ ವಿರುದ್ಧ ಆ್ಯಷಸ್‌ ಸರಣಿಯ ಮೊದಲ ಟೆಸ್ಟ್‌ನಲ್ಲಿ ಆಸ್ಪ್ರೇಲಿಯಾ ಗೆಲುವಿನ ನಿರೀಕ್ಷೆಯಲ್ಲಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದ ಸ್ಟೀವ್‌ ಸ್ಮಿತ್‌ 2ನೇ ಇನ್ನಿಂಗ್ಸ್‌ನಲ್ಲಿ ಶತಕದೊಂದಿಗೆ ತಂಡಕ್ಕೆ ನೆರವಾದರು. 7 ವಿಕೆಟ್‌ಗೆ 487 ರನ್‌ ಗಳಿಸಿ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡ ಆಸ್ಪ್ರೇಲಿಯಾ, ಇಂಗ್ಲೆಂಡ್‌ ಗೆಲುವಿಗೆ 398 ರನ್‌ ಗುರಿ ನಿಗದಿ ಪಡಿಸಿದೆ.

ಎರಡನೇ ಇನ್ನಿಂಗ್ಸ್‌ ಆರಂಭಿಸಿರುವ ಇಂಗ್ಲೆಂಡ್‌ 4ನೇ ದಿನದಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೆ 13 ರನ್‌ ಗಳಿಸಿದ್ದು, 5ನೇ ಹಾಗೂ ಅಂತಿಮ ದಿನವಾದ ಸೋಮವಾರ ಇಂಗ್ಲೆಂಡ್‌ 385 ರನ್‌ ಕಲೆಹಾಕಬೇಕಿದೆ. ಪಂದ್ಯ ಡ್ರಾ ಇಲ್ಲವೇ ಆಸ್ಪ್ರೇಲಿಯಾ ಪಾಲಾಗುವ ಸಾಧ್ಯತೆ ಹೆಚ್ಚಿದೆ.

Tap to resize

Latest Videos

undefined

ಸೈನಿಕರ ಜತೆ ಧೋನಿ ವಾಲಿಬಾಲ್‌!

3ನೇ ದಿನದಂತ್ಯಕ್ಕೆ 3 ವಿಕೆಟ್‌ಗೆ 124 ರನ್‌ ಗಳಿಸಿದ್ದ ಕಾಂಗರೂ ಪಡೆ 4ನೇ ದಿನವಾದ ಭಾನುವಾರ ಭರ್ಜರಿ ಪ್ರದರ್ಶನ ತೋರಿತು. ಸ್ಮಿತ್‌ 142 ರನ್‌ ಗಳಿಸಿದರೆ, ಮ್ಯಾಥ್ಯೂ ವೇಡ್‌ 110 ರನ್‌ ಗಳಿಸಿದರು.

ಸ್ಕೋರ್‌:

ಆಸ್ಪ್ರೇಲಿಯಾ 284 ಹಾಗೂ 487/7 ಡಿ. (ಸ್ಮಿತ್‌ 142, ವೇಡ್‌ 110, ಹೆಡ್‌ 51, ಸ್ಟೋಕ್ಸ್‌ 3-85),

ಇಂಗ್ಲೆಂಡ್‌ 374 ಹಾಗೂ 13/0
 

click me!