ಬಿಗ್ ಬ್ಯಾಶ್ ಲೀಗ್‌ನಿಂದಲೂ ಸ್ಟೀವ್ ಸ್ಮಿತ್- ಡೇವಿಡ್ ವಾರ್ನರ್ ಔಟ್!

First Published Jul 16, 2018, 4:12 PM IST
Highlights

ಚೆಂಡು ವಿರೂಪಗೊಳಿಸಿ ಒಂದು ವರ್ಷ ನಿಷೇಧದ ಶಿಕ್ಷೆಗೆ ಗುರಿಯಾಗಿರುವ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಹಾಗೂ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್‌ಗೆ ಬಿಗ್ ಬ್ಯಾಶ್ ಆಯೋಜಕರು ಕೂಡ ಆಘಾತ ನೀಡಿದ್ದಾರೆ. ಅಷ್ಟಕ್ಕೂ ಸ್ಮಿತ್- ವಾರ್ನರ್ ವಿರುದ್ಧ ಬಿಬಿಎಲ್ ತೆಗೆದುಕೊಂಡ ನಿರ್ಧಾರ ಏನು? ಇಲ್ಲಿದೆ

ಸಿಡ್ನಿ(ಜು.16): ಬಾಲ್ ಟ್ಯಾಂಪರಿಂಗ್‌ನಿಂದ ಒಂದು ವರ್ಷಗಳ ನಿಷೇಧಕ್ಕೊಳಗಾಗಿರುವ ಆಸ್ಟ್ರೇಲಿಯಾ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್‌ಗೆ ಇದೀಗ ಮತ್ತೊಂದು ಶಾಕ್ ಎದುರಾಗಿದೆ. ಆಸ್ಟ್ರೇಲಿಯಾದ ಪ್ರತಿಷ್ಠಿತ ಬಿಗ್ ಬ್ಯಾಶ್ ಲೀಗ್ ಟೂರ್ನಿಯಿಂದಲೂ ಸ್ಮಿತ್ ಹಾಗೂ ವಾರ್ನರ್‌ಗೆ ಗೇಟ್ ಪಾಸ್ ನೀಡಲಾಗಿದೆ.

ಬಿಗ್ ಬ್ಯಾಶ್ ಲೀಗ್ ಟೂರ್ನಿಯಲ್ಲಿ ಸ್ಟೀವ್ ಸ್ಮಿತ್, ಸಿಡ್ನಿ ಸಿಕ್ಸರ್ ತಂಡವನ್ನ ಪ್ರತಿನಿಧಿಸುತ್ತಿದ್ದರೆ, ವಾರ್ನರ್, ಸಿಡ್ನಿ ಥಂಡರ್ ತಂಡದ ಭಾಗವಾಗಿದ್ದರು. ಚೆಂಡು ವಿರೂಪಗೊಳಿಸಿದ ಪ್ರಕರಣದಿಂದಾಗಿ ಇದೀಗ ಫ್ರಾಂಚೈಸಿ ಕೂಡ ಸ್ಮಿತ್ ಹಾಗೂ ವಾರ್ನರ್‌ಗೆ ಅವಕಾಶ ನೀಡಲು ಹಿಂದೇಟು ಹಾಕಿದೆ.

ಕ್ರಿಕೆಟ್ ಆಸ್ಟ್ರೇಲಿಯಾ ನಿಯಮದ ಪ್ರಕಾರ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಈ ಬಾರಿಯ ಬಿಗ್ ಬ್ಯಾಶ್ ಲೀಗ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಬಿಬಿಎಲ್ ಮುಖ್ಯಸ್ಥ ಕಿಮ್ ಮೆಕ್ಕೋನಿ ಸ್ಪಷ್ಟಪಡಿಸಿದ್ದಾರೆ.

ಬಿಗ್ ಬ್ಯಾಶ್ ಲೀಗ್ ನಿರ್ಧಾರಕ್ಕೆ ಮಾಜಿ ಕ್ರಿಕೆಟಿಗ ಶೇನ್ ವ್ಯಾಟ್ಸನ್ ಅಸಮಧಾನ ವ್ಯಕ್ತಪಡಿಸಿದ್ದಾರೆ. ನಿಷೇಧವನ್ನ ದೇಸಿ ಟೂರ್ನಿಗಳಿಗೆ ಸಡಿಲಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಇಷ್ಟೇ ಅಲ್ಲ ಸ್ಮಿತ್ ಹಾಗೂ ವಾರ್ನರ್‌ಗೆ ಟೂರ್ನಿಯ ಪ್ರಚಾರದಲ್ಲಿ ಪಾಲ್ಗೊಳ್ಳೋ ಅವಕಾಶವಿದೆ ಎಂದಿದ್ದಾರೆ.

click me!