ಎಂ ಎಸ್ ಧೋನಿ ಬಿಳಿ ಗಡ್ಡಕ್ಕೆ ಗೌತಮ್ ಗಂಭೀರ್ ಸಲಹೆ ಏನು?

Published : Jul 16, 2018, 03:44 PM IST
ಎಂ ಎಸ್ ಧೋನಿ ಬಿಳಿ ಗಡ್ಡಕ್ಕೆ ಗೌತಮ್ ಗಂಭೀರ್ ಸಲಹೆ ಏನು?

ಸಾರಾಂಶ

ಇತ್ತೀಚೆಗೆ ಟೀಂ ಇಂಡಿಯಾ ಕ್ರಿಕೆಟಿಗ ಎಂ ಎಸ್ ಧೋನಿ ಹುಟ್ಟುಹಬ್ಬದ ದಿನ, ಅಪ್ಪ ನಿನಗೆ ವಯಸ್ಸಾಯಿತು ಎಂದು ಪುತ್ರಿ ಝಿವಾ ಧೋನಿ ಹೇಳಿದ್ದರು. ಇದಕ್ಕೆ ತಕ್ಕಂತೆ ಧೋನಿ ಗಡ್ಡ ಕೂಡ ಬಿಳಿಯಾಗಿದೆ. ಇಂಗ್ಲೆಂಡ್ ಪ್ರವಾಸದಲ್ಲಿ ಧೋನಿ ಬಿಳಿ ಗಡ್ಡ ಸುದ್ದಿಯಾಗುತ್ತಿದೆ. ಇದಕ್ಕೆ ದೆಹಲಿ ಕ್ರಿಕೆಟಿಗ ಗೌತಮ್ ಗಂಭೀರ್ ಸಲಹೆ ನೀಡಿದ್ದಾರೆ. ಗೌತಿ ಸಲಹೆ ಏನು? ಇಲ್ಲಿದೆ ವಿವರ.

ದೆಹಲಿ(ಜು.16): ಟೀಂ ಇಂಡಿಯಾದಲ್ಲಿ ಹೊಸ ಸ್ಟೈಲ್ ಟ್ರೆಂಡ್ ಶುರುಮಾಡಿದ ಕೀರ್ತಿ ಎಂ ಎಸ್ ಧೋನಿಗೆ ಸಲ್ಲಲಿದೆ. ಆರಂಭದಲ್ಲಿ ಉದ್ದ ಕೂದಲಿನ ಮೂಲಕ ತಂಡಕ್ಕೆ ಎಂಟ್ರಿಕೊಟ್ಟಿದ್ದ ಎಂ ಎಸ್ ಧೋನಿ ಬಳಿಕ ಶಾರ್ಟ್, ಸ್ಪೈಕ್, ಮೊಹವಾಕ್, ಟ್ರಿಮ್, ಬಾಲ್ಡ್ ಸೇರಿದಂತೆ ಹಲವು  ಶೈಲಿಗಳಲ್ಲಿ ಧೋನಿ ಕಾಣಿಸಿಕೊಂಡಿದ್ದಾರೆ.

ಪ್ರತಿ ಸರಣಿಗೆ ಒಂದಲ್ಲಾ ಒಂದು ಶೈಲಿಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಎಂ ಎಸ್ ಧೋನಿ, ಇದೀಗ ಇಂಗ್ಲೆಂಡ್ ಪ್ರವಾಸದಲ್ಲಿ ನ್ಯಾಚುರಲ್ ಸ್ಟೈಲ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಧೋನಿ ಬಿಳಿ ಗಡ್ಡಕ್ಕೆ ಅಭಿಮಾನಿಗಳು ಸಾಕಷ್ಟು ಸಲಹೆಗಳನ್ನ ನೀಡಿದ್ದಾರೆ. ಇದೀಗ ಟೀಂ ಇಂಡಿಯಾ ಡ್ಯಾಶಿಂಗ್ ಓಪನರ್ ಗೌತಮ್ ಗಂಭೀರ್ ಧೋನಿ ಬಿಳಿ ಗಡ್ಡ ವಿಶೇಷ ಸಲಹೆ ನೀಡಿದ್ದಾರೆ.

ಬಿಳಿಗಡ್ಡದಿಂದ ಧೋನಿ ಹೆಚ್ಚು ವಯಸ್ಸಾದಂತೆ ಕಾಣಿಸುತ್ತಿದ್ದಾರೆ. ಧೋನಿ ಫಿಟ್ ಆಗಿದ್ದಾರೆ. ಹೀಗಾಗಿ ಮೈದಾನದಲ್ಲಿ ಧೋನಿ ಅಷ್ಟೇ ಆಕ್ಟೀವ್ ಆಗಿದ್ದಾರೆ. ತುಂಬಾ ಕ್ವಿಕ್ ಆಗಿರೋ ಧೋನಿ ಬಿಳಿ ಗಡ್ಡದಿಂದ  5 ರಿಂದ 10 ವರ್ಷ ಹೆಚ್ಚು ವಯಸ್ಸಾದಂತೆ ಕಾಣಿಸುತ್ತಿದ್ದಾರೆ. ಹೀಗಾಗಿ ಧೋನಿ ಶೀಘ್ರದಲ್ಲೇ ಬಿಳಿ ಗಡ್ಡಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದು ಗಂಭೀರ್ ಖಾಸಗಿ ಸ್ಪೋರ್ಟ್ ವೆಬ್‌ಸೈಟ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಿನಿ ಹರಾಜಿನ ಬೆನ್ನಲ್ಲೇ KKR ತಂಡಕ್ಕೆ ಬಿಗ್ ಶಾಕ್! ₹9.2 ಕೋಟಿ ನೀಡಿ ಖರೀದಿಸಿದ ಈ ಸ್ಟಾರ್ ಕ್ರಿಕೆಟಿಗ ಐಪಿಎಲ್ ಆಡೋದೇ ಡೌಟ್!
ಟಿ20 ರ್‍ಯಾಂಕಿಂಗ್‌ನಲ್ಲಿ ಬುಮ್ರಾ ದಾಖಲೆ ಧೂಳೀಪಟ; ವರುಣ್ ಚಕ್ರವರ್ತಿ ಹೊಸ ದಾಖಲೆ