ಜೂನಿಯರ್ ಕ್ರಿಕೆಟಿಗರಿಗೆ ಯೋ-ಯೋ ಟೆಸ್ಟ್; ದ್ರಾವಿಡ್ ವಿರೋಧ

By Suvarna Web DeskFirst Published Nov 7, 2017, 6:46 PM IST
Highlights

ಸೀನಿಯರ್ ತಂಡದ ಆಯ್ಕೆಯಲ್ಲಿ ಯೋ-ಯೋ ಪರೀಕ್ಷೆಗಳನ್ನು ಅನುಸರಿಸಲಾಗುತ್ತದೆ. ಇದೇ ವ್ಯವಸ್ಥೆಯನ್ನು ಜೂನಿಯರ್ ಕ್ರಿಕೆಟಿಗರಿಗೂ ಅನ್ವಯಿಸಬೇಕೆಂಬುದು ತಂಡದ ಟ್ರೈನರ್ ಅವರ ಆಸೆ. ಆದರೆ. ಕಿರಿಯರದ್ದು ಕ್ರಿಕೆಟ್ ಕಲೆಗಳನ್ನು ಬೆಳೆಸಿಕೊಳ್ಳುವ ವಯಸ್ಸಾಗಿರುತ್ತದೆ. ಅವರಿಗೆ ಫಿಟ್ನೆಸ್ ಮಾನದಂಡ ಹೇರುವುದು ಬೇಡ ಎಂಬುದು ದ್ರಾವಿಡ್ ಅಭಿಮತ.

ನವದೆಹಲಿ(ನ. 07): ಭಾರತದ ಅಂಡರ್-19 ಕ್ರಿಕೆಟ್ ತಂಡಕ್ಕೆ ಫಿಟ್ ಆಗಿರುವ ಆಟಗಾರರನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಆಟಗಾರರಿಗೆ ಯೋ-ಯೋ ಪರೀಕ್ಷೆ ನಡೆಸುವ ಚಿಂತನೆ ನಡೆದಿದೆ. ಆದರೆ, ತಂಡದ ಕೋಚ್ ರಾಹುಲ್ ದ್ರಾವಿಡ್ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ದ್ರಾವಿಡ್ ವಿರೋಧದ ಹಿನ್ನೆಲೆಯಲ್ಲಿ ಮಲೇಷ್ಯಾದಲ್ಲಿ ನಡೆಯಲಿರುವ ಕಿರಿಯರ ಏಷ್ಯಾ ಕಪ್ ಟೂರ್ನಿಯಲ್ಲಿ ಆಡಲಿರುವ ಭಾರತದ ಕಿರಿಯರಿಗೆ ಯೋ-ಯೋ ಪರೀಕ್ಷೆಯ ಒತ್ತಡ ಇರುವುದಿಲ್ಲ.

ಸೀನಿಯರ್ ತಂಡದ ಆಯ್ಕೆಯಲ್ಲಿ ಯೋ-ಯೋ ಪರೀಕ್ಷೆಗಳನ್ನು ಅನುಸರಿಸಲಾಗುತ್ತದೆ. ಇದೇ ವ್ಯವಸ್ಥೆಯನ್ನು ಜೂನಿಯರ್ ಕ್ರಿಕೆಟಿಗರಿಗೂ ಅನ್ವಯಿಸಬೇಕೆಂಬುದು ತಂಡದ ಟ್ರೈನರ್ ಅವರ ಆಸೆ. ಆದರೆ. ಕಿರಿಯರದ್ದು ಕ್ರಿಕೆಟ್ ಕಲೆಗಳನ್ನು ಬೆಳೆಸಿಕೊಳ್ಳುವ ವಯಸ್ಸಾಗಿರುತ್ತದೆ. ಅವರಿಗೆ ಫಿಟ್ನೆಸ್ ಮಾನದಂಡ ಹೇರುವುದು ಬೇಡ ಎಂಬುದು ದ್ರಾವಿಡ್ ಅಭಿಮತ.

ಏನಿದು ಯೋ-ಯೋ ಟೆಸ್ಟ್..?
ಇದು ಆಟಗಾರರ ಫಿಟ್ನೆಸ್'ನ್ನು ಪರೀಕ್ಷಿಸುವ ಒಂದು ವಿಧಾನ. ಎರಡು ಹಂತದ ಪರೀಕ್ಷೆಗಳಿರುತ್ತವೆ. ಮೊದಲ ಹಂತದಲ್ಲಿ ಬೀಪ್ ಟೆಸ್ಟ್ ಇರುತ್ತದೆ. ವ್ಯಕ್ತಿಯ ವೇಗ, ಚಲನೆಯ ನಿಯಂತ್ರಣ ಇತ್ಯಾದಿಗಳನ್ನು ಪರೀಕ್ಷಿಸಲಾಗುತ್ತದೆ. ಎರಡನೇ ಹಂತದಲ್ಲಿ ಇನ್ನೂ ಕಠಿಣ ಪರೀಕ್ಷೆ ಇರುತ್ತದೆ. ಡೆನ್ಮಾರ್ಕ್'ನ ಫುಟ್ಬಾಲ್ ಫಿಟ್ನೆಸ್ ತಜ್ಞ ಜೆನ್ಸ್ ಬಾಂಗ್ಸ್'ಬೋ ಅವರು ಈ ಪರೀಕ್ಷೆ ರೂಪಿಸಿದ್ದಾರೆ. ವಿಶ್ವಾದ್ಯಂತ ಅನೇಕ ರಾಷ್ಟ್ರಗಳಲ್ಲಿ ಫುಟ್ಬಾಲ್ ಮೊದಲಾದ ಕ್ರೀಡೆಗಳಲ್ಲಿ ಈ ಪರೀಕ್ಷೆಗಳ ಮೂಲಕ ಆಟಗಾರರ ದೈಹಿಕ ಕ್ಷಮತೆಯನ್ನು ಅಳೆಯಲಾಗುತ್ತದೆ. ಯುವರಾಜ್ ಸಿಂಗ್, ಸುರೇಶ್ ರೈನಾ ಮೊದಲಾದ ಆಟಗಾರರನ್ನು ಟೀಮ್ ಇಂಡಿಯಾದಿಂದ ಕೈಬಿಡಲು ಇವೇ ಯೋ-ಯೋ ಟೆಸ್ಟ್'ನಲ್ಲಿ ಅವರು ವಿಫಲರಾಗಿದ್ದೇ ಕಾರಣ.

click me!