
ಮುಂಬೈ[ಆ.28]: ಬಹುನಿರೀಕ್ಷಿತ ಪ್ರೊ ಕಬಡ್ಡಿ ಜತೆಯಲ್ಲಿ ಆರಂಭವಾಗುವ ಜೂನಿಯರ್ ಕಬಡ್ಡಿ 2ನೇ ಆವೃತ್ತಿಗೆ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರೊ ಕಬಡ್ಡಿ ಪಂದ್ಯಗಳು ನಡೆಯಲಿರುವ 12 ನಗರಗಳಲ್ಲಿ ಜೂನಿಯರ್ ಕಬಡ್ಡಿ ಪಂದ್ಯಗಳು ನಡೆಯಲಿವೆ.
2ನೇ ಸೀಸನ್‌ನಲ್ಲಿ ಜೂನಿಯರ್ ಕಬಡ್ಡಿಗೆ 12 ನಗರಗಳ 288 ಶಾಲೆಯ 3500 ಯುವ ಆಟಗಾರರು ಪಾಲ್ಗೊಳ್ಳುವ ನಿರೀಕ್ಷೆ ಇದೆ. 11 ರಿಂದ 12 ವರ್ಷದೊಳಗಿನ ಆಟಗಾರರು ಭಾಗವಹಿಸಬಹುದಾಗಿದೆ. ಮೊದಲ ಆವೃತ್ತಿಯಲ್ಲಿ 96 ಶಾಲೆಗಳು ಪಾಲ್ಗೊಂಡಿದ್ದವು. ಮೊದಲ ಆವೃತ್ತಿಯಲ್ಲಿನ ಜೂನಿಯರ್ ಕಬಡ್ಡಿ ಪ್ರಶಸ್ತಿಯನ್ನು ಸೋನಿಪತ್‌ನ ಸೌತ್ ಪಾಯಿಂಟ್ ವಿಶ್ವ ಶಾಲೆ ಜಯಿಸಿತ್ತು. ಜೂನಿಯರ್ ಕಬಡ್ಡಿ ಪಂದ್ಯಗಳನ್ನು ವೀಕ್ಷಿಸುವವರ ಸಂಖ್ಯೆ ಕೂಡ ಗಣನೀಯ ಏರಿಕೆ ಕಂಡಿತ್ತು. ಟೂರ್ನಿ ಅಂತ್ಯದ ವೇಳೆಗೆ 15.64 ಕೋಟಿ ವೀಕ್ಷಕರು ಜೂನಿಯರ್ ಕಬಡ್ಡಿಯನ್ನು ವೀಕ್ಷಿಸಿದ್ದರು.
ಜೂನಿಯರ್ ಕಬಡ್ಡಿಯ 2ನೇ ಆವೃತ್ತಿಯ ಪಂದ್ಯಗಳ ವೇಳಾಪಟ್ಟಿ ಆಗಸ್ಟ್ ಅಂತ್ಯ ಮತ್ತು ಸೆಪ್ಟೆಂಬರ್ ಆರಂಭದಲ್ಲಿ ಪ್ರಕಟಿಸಲಾಗುವುದು ಎಂದು ಆಯೋಜಕರು ಹೇಳಿದ್ದಾರೆ. ಆಯ್ಕೆಯಾಗಲಿರುವ 24 ಶಾಲೆಗಳನ್ನು 8 ಗುಂಪುಗಳಾಗಿ ವಿಂಗಡಿಸಲಾಗುವುದು. ಪ್ರತಿ ಗುಂಪಿನಲ್ಲಿ 3 ತಂಡಗಳು ಇರಲಿದ್ದು, ಪ್ರತಿ ತಂಡಗಳ ವಿರುದ್ಧ ಪಂದ್ಯವನ್ನಾಡಲಿವೆ. ಗುಂಪಿನಲ್ಲಿ ಅಗ್ರ ಸ್ಥಾನ ಪಡೆಯುವ ತಂಡಗಳು ಸಿಟಿ ಫೈನಲ್ಸ್ ಸುತ್ತಿನಲ್ಲಿ ಆಡಲಿವೆ. ಯುವ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಜೂನಿಯರ್ ಕಬಡ್ಡಿಯನ್ನು ಆರಂಭಿಸಲಾಗಿದೆ. ಶಾಲೆಯಲ್ಲಿನ ಯುವ ಆಟಗಾರರನ್ನು ಗುರುತಿಸುವ ಸಲುವಾಗಿ ಆಯಾ ಶಾಲೆಗಳ ದೈಹಿಕ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.