
ಕೊನೆ ಪಂದ್ಯದ ಗೆಲುವಿನ ರೂವಾರಿ ಅಮಿತ್ ಮಿಶ್ರಾ. ಕೇವಲ 5ನೇ ಪಂದ್ಯ ಮಾತ್ರವಲ್ಲ, ಸರಣಿಯ ಹೀರೋ ಸಹ ಮಿಶ್ರಾನೇ. ನಿನ್ನೆ 5 ವಿಕೆಟ್ ಪಡೆದ ಲೆಗ್ಸ್ಪಿನ್ನರ್, ಸರಣಿಯಲ್ಲಿ 15 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
ವೈಜಾಕ್ನಂತಹ ಬ್ಯಾಟಿಂಗ್ ಪಿಚ್ನಲ್ಲಿ ನ್ಯೂಜಿಲೆಂಡ್ 270 ರನ್ ಟಾರ್ಗೆಟ್ ಬೆನ್ನಟ್ಟಿ ಗೆಲ್ಲುವ ವಿಶ್ವಾಸದಲ್ಲಿತ್ತು. ಆದ್ರೆ ಕಿವೀಸ್ ಆಟಗಾರರ ಪ್ಲಾನ್'ಅನ್ನ ಬುಡಮೇಲು ಮಾಡಿದ್ದು ಮಾತ್ರ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ. ಹೌದು, ತಮ್ಮ ಲೆಗ್ ಸ್ಪಿನ್ನಿಂದ ಪ್ರವಾಸಿ ಬ್ಯಾಟ್ಸ್ಮನ್ಗಳನ್ನು ಪೆವಿಲಿಯನ್ಗೆ ಪರೇಡ್ ನಡೆಸುವಂತೆ ಮಾಡಿದ್ರು.
ಮಿಶ್ರಾ ಲೆಗ್ ಸ್ಪಿನ್ಗೆ ಕಿವೀಸ್ ಆಟಗಾರರ ಬಳಿ ಉತ್ತರವೇ ಇರಲಿಲ್ಲ. ಮೂವರನ್ನು ಖಾತೆ ತೆರೆಯಲು ಮಿಶ್ರಾ ಬಿಡಲೇ ಇಲ್ಲ. ಕಿವೀಸ್ ಕೇವಲ 79 ರನ್ಗೆ ಆಲೌಟ್ ಆಗಲು ಮಿಶ್ರಾ ಕಾರಣರಾದ್ರು. 5 ವಿಕೆಟ್ ಪಡೆದು ಸಂಭ್ರಮಿಸಿದರು. ಅಮಿತ್ ಮಿಶ್ರಾ 6 ಓವರ್ ಬೌಲಿಂಗ್ನಲ್ಲಿ 2 ಮೇಡನ್ ಮಾಡಿದ್ರು. 18 ರನ್ ನೀಡಿ 5 ವಿಕೆಟ್ ಪಡೆದ್ರು. 3ರ ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ರು.
ಎಲ್ಲಾ ಪಿಚ್ಗಳಲ್ಲೂ ಭರ್ಜರಿ ಬೌಲಿಂಗ್ : 5 ಪಂದ್ಯಗಳಿಂದ 15 ವಿಕೆಟ್
ಅಮಿತ್ ಮಿಶ್ರಾ ಎಲ್ಲಾ ಪಿಚ್‌ಗಳಲ್ಲೂ ಉತ್ತಮ ಬೌಲರ್ ಅನ್ನೋದನ್ನ ನಿರೂಪಿಸಿದ್ದಾರೆ. 5 ವಿವಿಧ ಪಿಚ್ಗಳಲ್ಲೂ ಮಿಶ್ರಾ ತಮ್ಮ ಸ್ಪಿನ್ ಕಮಾಲ್ ಮಾಡಿದ್ದಾರೆ. ಹೀಗಾಗಿಯೇ ಅಮಿತ್ ಕೇವಲ ಕೊನೆ ಪಂದ್ಯದ ಹೀರೋ ಅಲ್ಲ. ಸರಣಿಯ ಹೀರೋ. ಹೀಗಾಗಿಯೇ ಅವರಿಗೆ ಪಂದ್ಯ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿ ಸಿಕ್ಕಿದ್ದು. ಅಮಿತ್ ಮಿಶ್ರಾ ಈ ಸರಣಿಯ 5 ಪಂದ್ಯಗಳಿಂದ 15 ವಿಕೆಟ್ ಪಡೆದಿದ್ದಾರೆ. 18 ರನ್ ನೀಡಿ 5 ವಿಕೆಟ್ ಪಡೆದಿರುವುದು ಅವರ ಬೆಸ್ಟ್ ಬೌಲಿಂಗ್. 4.79 ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ.
ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟು ದಶಕಗಳೇ ಕಳೆದ್ರೂ ಅಮಿತ್ ಮಿಶ್ರಾಗೆ ಇನ್ನೂ ಖಾಯಂ ಸ್ಥಾನವಿಲ್ಲ. ಯಾರಿಗಾದ್ರೂ ವಿಶ್ರಾಂತಿ ನೀಡಿದ್ರೆ ಅವರ ಸ್ಥಾನದಲ್ಲಿ ಆಡ್ತಾರೆ. ಈಗ ಮಿಶ್ರಾ ಫರ್ಫಮೆನ್ಸ್ ಆಯ್ಕೆಗಾರರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.