ಪಾಕ್ ಪ್ರವಾಸಕ್ಕೆ ನಕಾರ; ಭಾರತದ ಜೊತೆ ಟಿ20 ಸರಣಿಗೆ ಸಹಕಾರ!

By Web Desk  |  First Published Sep 11, 2019, 3:49 PM IST

ಪಾಕಿಸ್ತಾನ ಪ್ರವಾಸ ಮಾಡಲು ನಿರಾಕರಿಸಿರುವ ಶ್ರೀಲಂಕಾ ಕ್ರಿಕೆಟಿಗರು ಇದೀಗ ಭಾರತದ ಜೊತೆ ಸರಣಿ ಆಡಲು ಉತ್ಸುಕತೆ ತೋರಿದ್ದಾರೆ. ಶೀಘ್ರದಲ್ಲೇ ಲಂಕಾ ತಂಡ ಭಾರತಕ್ಕೆ ಆಗಮಿಸಲಿದೆ. ಸರಣಿ ಕುರಿತು ಹೆಚ್ಚಿನ ವಿವರ.


ಮುಂಬೈ(ಸೆ.11): ಶ್ರೀಲಂಕಾ ಕ್ರಿಕೆಟಿಗರು ಸುರಕ್ಷತೆಯ ದೃಷ್ಟಿಯಿಂದ ಪಾಕಿಸ್ತಾನ ಪ್ರವಾಸಕ್ಕೆ ನಿರಾಕರಿಸಿದ್ದಾರೆ. ಲಸಿತ್ ಮಾಲಿಂಗ್, ಎಂಜಲೋ ಮ್ಯಾಥ್ಯೂಸ್, ದಿನೇಶ್ ಚಾಂಡಿಮಾಲ್ ಸೇರಿದಂತೆ ಲಂಕಾದ 10 ಕ್ರಿಕೆಟಿಗರು ಪಾಕಿಸ್ತಾನ ಪ್ರವಾಸಕ್ಕೆ ಬಹಿಷ್ಕಾರ ಹಾಕಿದ್ದಾರೆ. ಇದರ ಬೆನ್ನಲ್ಲೇ ಪಾಕ್ ಸಚಿವ ಭಾರತದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಕೂಡ ನಡೆದಿತ್ತು. ಇದೀಗ ಪಾಕಿಸ್ತಾನಕ್ಕೆ ಮತ್ತೊಂದು ಮುಖಭಂಗವಾಗಿದೆ. ಪಾಕ್ ಪ್ರವಾಸಕ್ಕೆ ಹಿಂದೇಟು ಹಾಕಿದ ಕ್ರಿಕೆಟಿಗರು ಇದೀಗ ಭಾರತದ ಜೊತೆ ಸರಣಿ ಆಡಲು ಓಕೆ ಎಂದಿದ್ದಾರೆ.

ಇದನ್ನೂ ಓದಿ: ಪಾಕ್ ಪ್ರವಾಸಕ್ಕೆ ಲಂಕಾ ಕ್ರಿಕೆಟಿಗರ ಬಹಿಷ್ಕಾರ; ಭಾರತದ ಕೈವಾಡ ಎಂದ ಸಚಿವ!

Latest Videos

undefined

ಬಿಸಿಸಿಐ ಮೂಲಗಳ ಪ್ರಕಾರ ಇನ್ನು 4 ತಿಂಗಳಲ್ಲಿ ಅಂದರೆ 2020ರ ಜನವರಿಯಲ್ಲಿ ಶ್ರೀಲಂಕಾ, ಟಿ20 ಸರಣಿಗಾಗಿ ಭಾರತ ಪ್ರವಾಸ ಕೈಗೊಳ್ಳಲಿದೆ. 3 ಟಿ20 ಪಂದ್ಯದ ಸರಣಿಗಾಗಿ ಶ್ರೀಲಂಕಾ ಭಾರತಕ್ಕೆ ಆಗಮಿಸಲಿದೆ. 2017ರಲ್ಲಿ ಕೊನೆಯ ಬಾರಿಗೆ ಶ್ರೀಲಂಕಾ ಭಾರತ ಪ್ರವಾಸ ಕೈಗೊಂಡಿತ್ತು. ಅಂತಿಮವಾಗಿ ಉಭಯ ತಂಡಗಳು 2019ರ ವಿಶ್ವಕಪ್ ಟೂರ್ನಿಯಲ್ಲಿ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಭಾರತ 7 ವಿಕೆಟ್ ಭರ್ಜರಿ ಗೆಲುವು ಸಾಧಿಸಿತ್ತು.

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಕ್ರಿಕೆಟ್ ಸರಣಿ ಡೌಟ್; ನರಕ ಪ್ರವಾಸಕ್ಕೆ 10 ಲಂಕಾ ಕ್ರಿಕೆಟಿಗರ ನಕಾರ!

ಸದ್ಯ ಭಾರತ, ಪ್ರವಾಸಿ ಸೌತ್ ಆಫ್ರಿಕಾ ವಿರುದ್ಧದ ಸರಣಿಗೆ ತಯಾರಿ ಆರಂಭಿಸಿದೆ. ಅತ್ತ ಶ್ರೀಲಂಕಾ, ಪಾಕಿಸ್ತಾನಕ್ಕೆ ತೆರಳುವ ಗೊಂದಲದಲ್ಲಿದೆ. ಹಿರಿಯ ಕ್ರಿಕೆಟಿಗರು ಬಹಿಷ್ಕಾರ ಹಾಕಿದ ಬೆನ್ನಲ್ಲೇ, ಪಾಕ್ ಪ್ರವಾಸಕ್ಕೆ ಸಿದ್ದವಿರುವ  ಯುವ ಹಾಗೂ ಅನುಭವಿ ಕ್ರಿಕೆಟಿಗರನ್ನು ಕಳುಹಿಸಲು ನಿರ್ಧರಿಸಿದೆ.

click me!