ಪಾಕಿಸ್ತಾನ ಪ್ರವಾಸಕ್ಕೆ ಲಂಕಾ ಹಿರಿಯ ಕ್ರಿಕೆಟಿಗರು ಹಿಂದೇಟು; ಅಂತಕದಲ್ಲಿ ಪಿಸಿಬಿ!

By Web Desk  |  First Published Sep 8, 2019, 9:23 PM IST

2009ರ ಭಯೋತ್ಪಾದಕ ದಾಳಿಯ ಕಹಿ ನೆನಪು ಮಾಸದ ಶ್ರೀಲಂಕಾ ಹಿರಿಯ ಕ್ರಿಕೆಟಿಗರು ಮತ್ತೆ ಪಾಕಿಸ್ತಾನ ಪ್ರವಾಸಕ್ಕೆ ನಿರಾಕರಿಸಿದ್ದಾರೆ. ಮೂವರು ಕ್ರಿಕೆಟಿರ ನಿರ್ಧಾರ ಇದೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆತಂಕಕ್ಕೆ ಕಾರಣವಾಗಿದೆ. 


ಕೊಲೊಂಬೊ(ಸೆ.08): ಪಾಕಿಸ್ತಾನ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಯೋಜಿಸಲು ಸಜ್ಜಾಗಿದೆ. ಇದಕ್ಕಾಗಿ ಶ್ರೀಲಂಕಾ ತಂಡವನ್ನು ಆಹ್ವಾನಿಸಿದೆ. ಲಂಕಾ ಕ್ರಿಕೆಟ್ ಮಂಡಳಿ ಕೂಡ ಪಾಕ್ ಪ್ರವಾಸಕ್ಕೂ ಒಪ್ಪಿಕೊಂಡಿದೆ. ಆದರೆ ಎಲ್ಲವೂ ಒಕೆ ಅನ್ನುವಷ್ಟರಲ್ಲೇ ಲಂಕಾ ತಂಡದ ಹಿರಿಯ ಕ್ರಿಕೆಟಿಗರು ಪಾಕಿಸ್ತಾನ ಪ್ರವಾಸಕ್ಕೆ ಹಿಂದೇಟು ಹಾಕಿದ್ದಾರೆ.

ಇದನ್ನೂ ಓದಿ: 36ರ ಹರೆಯದಲ್ಲಿ ಮಾಲಿಂಗ ಹ್ಯಾಟ್ರಿಕ್; ಸಾಧನೆ ಕೊಂಡಾಡಿದ ಫ್ಯಾನ್ಸ್!

Latest Videos

undefined

ಶ್ರೀಲಂಕಾದ ತಂಡದ ಕರುಣಾರತ್ನೆ, ಟಿ20 ನಾಯಕ ಲಸಿತ್ ಮಲಿಂಗ ಹಾಗೂ ಎಂಜಲೋ ಮ್ಯಾಥ್ಯೂಸ್ ಪಾಕಿಸ್ತಾನ ಪ್ರವಾಸ ತೆರಳಲು ನಿರಾಕರಿಸಿದ್ದಾರೆ. ಇದಕ್ಕೆ ಕಾರಣವೂ ಇದೆ. 2009ರಲ್ಲಿ ಶ್ರೀಲಂಕಾ ತಂಡ ಪಾಕಿಸ್ತಾನದ ಪ್ರವಾಸದಲ್ಲಿ ಭಯೋತ್ಪಾದಕರ ದಾಳಿಗೆ ತುತ್ತಾಗಿತ್ತು. ಮಹೇಲಾ ಜಯವರ್ಧನೆ ಸೇರಿದಂತೆ ಲಂಕಾ ಕ್ರಿಕೆಟಿಗರು ಗಾಯಗೊಂಡಿದ್ದರು. ಇದಾದ ಬಳಿಕ ಲಂಕಾ ಮಾತ್ರವಲ್ಲ ಯಾವ ತಂಡ ಕೂಡ ಪಾಕಿಸ್ತಾನ ಪ್ರವಾಸ ಮಾಡಲು ನಿರಾಕರಿಸಿತ್ತು.

ಇದನ್ನೂ ಓದಿ: ಲಂಕಾ ಅಭಿಮಾನಿಗಳ ಹೃದಯ ಗೆದ್ದ ಕೇನ್ ವಿಲಿಯಮ್ಸನ್!

2015ರಲ್ಲಿ ಜಿಂಬಾಬ್ವೆ ಹಾಗೂ 2017ರಲ್ಲಿ ಶ್ರೀಲಂಕಾ ಟಿ20 ಸರಣಿಗಾಗಿ ಪಾಕಿಸ್ತಾನ ಪ್ರವಾಸ ಕೈಗೊಂಡಿತ್ತು. ಇದೀಗ ಮತ್ತೆ ಲಂಕಾ ತಂಡ ಪಾಕ್ ಪ್ರವಾಸಕ್ಕೆ ಸಜ್ಜಾಗಿದೆ. ಇದೀಗ  ಸೆ.27ರಿಂದ-ಅ.2ರ ವರೆಗೂ ಕರಾ​ಚಿ​ಯಲ್ಲಿ ಏಕ​ದಿನ ಸರ​ಣಿ  ಹಾಗೂ ಅ.5ರಿಂದ ಅ.9ರ ವರೆಗೂ ಲಾಹೋರ್‌ನಲ್ಲಿ ಟಿ20 ಸರಣಿ ಆಯೋಜಿಸಲಾಗಿದೆ.
 

click me!