ಸರಣಿ ಕ್ಲೀನ್ ಸ್ವೀಪ್ ಮಾಡಿ ಗಿಟಾರ್ ನುಡಿಸಿದ ಜೋ ರೂಟ್!

By Web DeskFirst Published Nov 27, 2018, 5:03 PM IST
Highlights

ಲಂಕಾ ವಿರುದ್ದ ಸರಣಿ ಗೆದ್ದ ಇಂಗ್ಲೆಂಡ್ ಸಂಭ್ರಮಾಚರಣೆ ಇನ್ನು ನಿಂತಿಲ್ಲ. ಇದೇ ಮೊದಲ ಬಾರಿಗೆ ಏಷ್ಯಾ ನೆಲದಲ್ಲಿ 3-0 ಅಂತರದಲ್ಲಿ ಸರಣಿ ಕ್ಲೀನ್ ಸ್ವೀಪ್ ಮಾಡಿದ ಇಂಗ್ಲೆಂಡ್  ಆಟಗಾರರ ಸೆಲೆಬ್ರೇಷನ್ ಹೇಗಿದೆ? ಇಲ್ಲಿದೆ.
 

ಕೊಲೊಂಬೊ(ನ.27): ಏಷ್ಯಾ ನೆಲದಲ್ಲಿ ಮೊದಲ ಬಾರಿಗೆ ಕ್ಲೀನ್ ಸ್ವೀಪ್ ಮಾಡಿದ ಇಂಗ್ಲೆಂಡ್ ತಂಡದ ಸಂಭ್ರಮಾಚರಣೆಯಲ್ಲಿ ಮುಳುಗಿದೆ. ಶ್ರೀಲಂಕಾ ವಿರುದ್ಧ 3-0 ಅಂತರದ ಗೆಲುವು ಸಾಧಿಸಿದ ಇಂಗ್ಲೆಂಡ್ ವಿಶಿಷ್ಠ ರೀತಿಯಲ್ಲಿ ಆಚರಿಸಿದೆ.

ಅಂತಿಮ ಟೆಸ್ಟ್ ಪಂದ್ಯದದ ಗೆಲುವಿನ ಬಳಿಕ ಡ್ರೆಸ್ಸಿಂಗ್ ರೂಂಗೆ ಆಗಮಿಸಿದ ಇಂಗ್ಲೆಂಡ್ ತಂಡ ಸಂಭ್ರಮ ಆಚರಣೆ ಶುರುಮಾಡಿತು. ಈ ವೇಳೆ ನಾಯಕ ಜೋ ರೂಟ್ ಗಿಟಾರ್ ನುಡಿಸೋ ಮೂಲಕ ಎಲ್ಲರ ಗಮನಸೆಳೆದರು.

 

This is what it means to become the first England team to complete a clean sweep in Asia... 🎵🏴󠁧󠁢󠁥󠁮󠁧󠁿🏏 pic.twitter.com/97gYWru323

— England Cricket (@englandcricket)

 

ಶ್ರೀಲಂಕಾ ವಿರುದ್ಧದ ಮೊದಲ ಪಂದ್ಯದಲ್ಲಿ 211 ರನ್, ದ್ವಿತೀಯ ಪಂದ್ಯದಲ್ಲಿ 57 ಹಾಗೂ ತೃತೀಯ ಪಂದ್ಯದಲ್ಲಿ 47 ರನ್ ಗೆಲುವು ಸಾಧಿಸಿತು. ಏಷ್ಯಾ ನೆಲದಲ್ಲಿ ಬರೋಬ್ಬರಿ 55 ವರ್ಷಗಳ ಬಳಿಕ ಇಂಗ್ಲೆಂಡ್ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ. 
 

click me!