Latest Videos

Sports Flashback 2023 ಮೇ ತಿಂಗಳಲ್ಲಿ ಕೊಹ್ಲಿ-ನವೀನ್ ಕಿರಿಕ್, ಸಿಎಸ್‌ಕೆಗೆ ಒಲಿದ 5ನೇ ಐಪಿಎಲ್ ಕಪ್..!

By Naveen KodaseFirst Published Dec 14, 2023, 6:11 PM IST
Highlights

2023ರ ಮೇ ತಿಂಗಳು ಹಲವು ಕ್ರೀಡಾಚಟುವಟಿಕೆಗಳಿಗೆ ಸಾಕ್ಷಿಯಾಯಿತು. ಈ ಪೈಕಿ ಐಪಿಎಲ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ಆಫ್ಘಾನ್ ವೇಗಿ ನವೀನ್ ಉಲ್ ಹಕ್ ನಡುವಿನ ಕಿರಿಕ್ ಸಾಕಷ್ಟು ಸದ್ದು ಮಾಡಿತು. ಇದೆಲ್ಲದರ ನಡುವೆ ಚೆನ್ನೈ 5ನೇ ಬಾರಿಗೆ ಐಪಿಎಲ್ ಕಪ್ ಗೆದ್ದು ಬೀಗಿತು. 2023ರ ಮೇ ತಿಂಗಳಿನ ಕ್ರೀಡಾ ಸುದ್ದಿಯ ಒಂದು ಝಲಕ್ ಇಲ್ಲಿದೆ ನೋಡಿ.

ಬೆಂಗಳೂರು: 2023ರ ಮೇ ತಿಂಗಳು ಹಲವು ಕ್ರೀಡಾಚಟುವಟಿಕೆಗಳಿಗೆ ಸಾಕ್ಷಿಯಾಯಿತು. ಈ ಪೈಕಿ ಐಪಿಎಲ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ಆಫ್ಘಾನ್ ವೇಗಿ ನವೀನ್ ಉಲ್ ಹಕ್ ನಡುವಿನ ಕಿರಿಕ್ ಸಾಕಷ್ಟು ಸದ್ದು ಮಾಡಿತು. ಇದೆಲ್ಲದರ ನಡುವೆ ಚೆನ್ನೈ 5ನೇ ಬಾರಿಗೆ ಐಪಿಎಲ್ ಕಪ್ ಗೆದ್ದು ಬೀಗಿತು. 2023ರ ಮೇ ತಿಂಗಳಿನ ಕ್ರೀಡಾ ಸುದ್ದಿಯ ಒಂದು ಝಲಕ್ ಇಲ್ಲಿದೆ ನೋಡಿ.

IPL 2023 ಸೋಲಿನ ಲೆಕ್ಕಾ ಚುಕ್ತಾ ಮಾಡಿದ RCB..!

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆರ್‌ಸಿಬಿ ಹಾಗೂ ಲಖನೌ ಸೂಪರ್ ಜೈಂಟ್ಸ್‌ ಸಾಕ್ಷಿಯಾಯಿತು. ಮೇ 01ರಂದು ಏಕಾನ ಕ್ರಿಕೆಟ್‌ ಮೈದಾನದಲ್ಲಿ ನಡೆದ ಕಡಿಮೆ ಮೊತ್ತದ ಪಂದ್ಯವೊಂದರಲ್ಲಿ ಕೆ ಎಲ್ ರಾಹುಲ್ ನೇತೃತ್ವದ ಲಖನೌ ಸೂಪರ್ ಜೈಂಟ್ಸ್ ಎದುರು ಆರ್‌ಸಿಬಿ 18 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ತವರಿನಲ್ಲಿ ಅನುಭವಿಸಿದ್ದ ಆಘಾತಕಾರಿ ಸೋಲಿನ ಲೆಕ್ಕಾಚುಕ್ತಾ ಮಾಡುವಲ್ಲಿ ಆರ್‌ಸಿಬಿ ಯಶಸ್ವಿಯಾಯಿತು.

ಯಾವುದಕ್ಕೆ ಅರ್ಹವೋ ಅದನ್ನೇ ಪಡೆಯುತ್ತೀಯ': ಮತ್ತೆ ಕಿಂಗ್ ಕೊಹ್ಲಿಯನ್ನು ಕೆಣಕಿದ ನವೀನ್ ಉಲ್ ಹಕ್‌..!

ಲಖನೌದಲ್ಲಿ ನಡೆದ ಐಪಿಎಲ್ ಪಂದ್ಯದ ವೇಳೆ ಆರ್‌ಸಿಬಿ ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು ಲಖನೌ ಸೂಪರ್ ಜೈಂಟ್ಸ್ ವೇಗಿ ನವೀನ್ ಉಲ್ ಹಕ್ ನಡುವಿನ ಮಾತಿನ ಚಕಮಕಿಗೆ ಸಾಕ್ಷಿಯಾಯಿತು. ಪಂದ್ಯ ಮುಕ್ತಾಯದ ಬಳಿಕ "ನೀನು ಯಾವುದನ್ನು ಪಡೆಯಲು ಅರ್ಹನೋ ಅದನ್ನೇ ಪಡೆಯುತ್ತೀಯ, ಅದೇ ನಿಯಮ, ಅದು ಹಾಗೆಯೇ ನಡೆಯುತ್ತದೆ" ಎಂದು ನವೀನ್ ಉಲ್‌ ಹಕ್‌ ಇನ್‌ಸ್ಟಾಗ್ರಾಂ ಸ್ಟೋರಿ ಪೋಸ್ಟ್‌ ಮಾಡಿದ್ದು, ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಆಯಿತು.

ನೀನು ನನ್ನ ಕಾಲು ಧೂಳಿಗೆ ಸಮ: ಚರ್ಚೆಗೆ ಗ್ರಾಸವಾದ ವಿರಾಟ್ ಕೊಹ್ಲಿ ವರ್ತನೆ

ಲಖನೌ ತಂಡದ ಪರ ಬ್ಯಾಟಿಂಗ್‌ ಮಾಡಲಿಳಿದಿದ್ದ ನವೀನ್ ಉಲ್‌ ಹಕ್‌ ಹಾಗೂ ವಿರಾಟ್ ಕೊಹ್ಲಿ ನಡುವೆ 17ನೇ ಓವರ್‌ನಲ್ಲಿ ತೀವ್ರ ಮಾತಿನ ಚಕಮಕಿ ನಡೆಯಿತು. ಯಾರು ಮೊದಲು ಗಲಾಟೆ ಆರಂಭಿಸಿದರು ಎನ್ನುವುದು ಸ್ಪಷ್ಟವಾಗದಿದ್ದರೂ, ವಾಗ್ವಾದ ದೊಡ್ಡ ಹಂತಕ್ಕೆ ತಿರುಗುವ ಸಾಧ್ಯತೆಯಿತ್ತು.  ಈ ಸಂದರ್ಭದಲ್ಲಿ ಅಮಿತ್ ಮಿಶ್ರಾ ಹಾಗೂ ಅಂಪೈರ್‌ಗಳು ಮಧ್ಯ ಪ್ರವೇಶಿಸಿ ವಾತಾವರಣವನ್ನು ತಿಳಿಗೊಳಿಸಿದರು. ಇಷ್ಟಕ್ಕೆ ಸುಮ್ಮನಾಗದೇ ಆಫ್ಘಾನಿಸ್ತಾನದ ಕ್ರಿಕೆಟಿಗ ಕೊಹ್ಲಿಯ ಬಗ್ಗೆ ಗೊಣಗುವುದನ್ನು ನೋಡಿದ ವಿರಾಟ್ ಕೊಹ್ಲಿ, ತಮ್ಮ ಶೂ ತೋರಿಸಿ, ಧೋಳಿನ ಸನ್ನೆ ಮಾಡಿದರು. ಕೊಹ್ಲಿಯ ಈ ನಡೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪರ-ವಿರೋಧಗಳು ವ್ಯಕ್ತವಾಯಿತು.

ಅನು​ಮತಿ ಇಲ್ಲದೇ ಸೌದಿ​ಗೆ ತೆರ​ಳಿದ ಲಿಯೋನೆಲ್ ಮೆಸ್ಸಿ ಅಮಾ​ನ​ತು!

ಮಾಹಿತಿ ನೀಡದೆ ಸೌದಿ ಅರೇಬಿಯಾಕ್ಕೆ ತೆರಳಿದ ಕಾರಣ ಲಿಯೋನೆಲ್‌ ಮೆಸ್ಸಿಯನ್ನು ಫ್ರಾನ್ಸ್‌ನ ಫುಟ್ಬಾಲ್‌ ಕ್ಲಬ್‌ ಪ್ಯಾರಿಸ್‌ ಸೇಂಟ್‌ ಜರ್ಮೈನ್‌(ಪಿ​ಎ​ಸ್‌​ಜಿ​) ತಂಡ 2 ವಾರಗಳ ಕಾಲ ಅಮಾನತುಗೊಳಿಸಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಯಿತು.

Doha Diamond League: ಘಟಾನುಘಟಿಗಳನ್ನು ಹಿಂದಿಕ್ಕಿ ಚಿನ್ನ ಗೆದ್ದ ನೀರಜ್ ಚೋಪ್ರಾ

ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ, ಹೊಸ ಆವೃತ್ತಿಯನ್ನು ಭರ್ಜರಿಯಾಗಿಯೇ ಆರಂಭಿಸಿದ್ದಾರೆ. ದೋಹಾದಲ್ಲಿ ನಡೆದ ಮೊದಲ ಸುತ್ತಿನ ಡೈಮಂಡ್ ಲೀಗ್ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಹಲವು ದಿಗ್ಗಜರನ್ನು ಹಿಂದಿಕ್ಕಿ ವರ್ಲ್ಡ್‌ ಲೀಡಿಂಗ್‌ ತಮ್ಮದಾಗಿಸಿಕೊಂಡರು. ಕತಾರ್‌ನಲ್ಲಿ ನಡೆದ ದೋಹಾ ಡೈಮಂಡ್ ಲೀಗ್ ಟೂರ್ನಿಯಲ್ಲಿ ನೀರಜ್ ಚೋಪ್ರಾ, ಬರೋಬ್ಬರಿ 88.67 ಮೀಟರ್ ದೂರ ಜಾವೆಲಿನ್ ಥ್ರೋ ಮಾಡುವ ಮೂಲಕ ಹಾಲಿ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಿಟ್ಟರು.

2023ರ ಏಕದಿನ ವಿಶ್ವಕಪ್ ಟೂರ್ನಿಯ ವೇಳಾಪಟ್ಟಿ ಪ್ರಕಟ..!

2023ರ ಏಕದಿನ ವಿಶ್ವಕಪ್ ಟೂರ್ನಿಯ ವೇಳಾಪಟ್ಟಿ ಪ್ರಕಟವಾಗಿದ್ದು, ನವೆಂಬರ್ 05ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡಗಳು ಕಾದಾಡುವ ಮೂಲಕ ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದೆ ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.  ಇನ್ನು ಫೈನಲ್‌ ಪಂದ್ಯವು ಇದೇ ಮೈದಾನದಲ್ಲಿ ನವೆಂಬರ್ 19ರಂದು ಜರುಗಲಿದೆ ಎಂದು ತಿಳಿಸಿದೆ.

ಧೋನಿ ನೇತೃತ್ವದ ಚೆನ್ನೈ 5ನೇ ಬಾರಿಗೆ ಐಪಿಎಲ್ ಚಾಂಪಿಯನ್

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್‌ ದಾಖಲೆಯ 5ನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತು. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಡೆಕ್ವರ್ಥ್ ಲೂಯಿಸ್ ನಿಯಮದನ್ವಯ ಗುಜರಾತ್ ಟೈಟಾನ್ಸ್ ಎದುರು ಚೆನ್ನೈ ಸೂಪರ್‌ ಕಿಂಗ್ಸ್ ತಂಡವು 5 ವಿಕೆಟ್ ರೋಚಕ ಜಯ ಸಾಧಿಸುವ ಮೂಲಕ 5ನೇ ಬಾರಿಗೆ ಐಪಿಎಲ್‌ ಟ್ರೋಫಿಗೆ ಮುತ್ತಿಕ್ಕುವಲ್ಲಿ ಯಶಸ್ವಿಯಾಯಿತು.

click me!