ಮುಂಬೈ ತಂಡಕ್ಕೆ ಶಾಕ್ ಡೆಲ್ಲಿ ತಂಡಕ್ಕೆ ಖುಷ್?

By Suvarna Web deskFirst Published Nov 20, 2017, 11:17 PM IST
Highlights

ಪ್ರತಿ ತಂಡಕ್ಕೂ ಇಬ್ಬರು ಭಾರತೀಯರು, ಒಬ್ಬ ವಿದೇಶಿ ಆಟಗಾರನನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗುವುದು ಎನ್ನಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮಾಲಿಂಗ ರ ಬದಲಿಗೆ ವೇಗಿಗಳಾದ ಜಸ್ಪ್ರೀತ್ ಬೂ ಮ್ರಾ, ಮಿಚೆಲ್ ಮೆಕ್ಲನಾಘನ್ ಉಳಿಸಿಕೊಳ್ಳಲು ಮುಂಬೈ ನಿರ್ಧರಿಸಿದೆ ಎನ್ನಲಾಗುತ್ತಿದೆ

ಮುಂಬೈ: ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ 2018ರ ಐಪಿಎಲ್‌ನಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ಪ್ರಧಾನ ಕೋಚ್ ಆಗುವ ಸಾಧ್ಯತೆ ಇದೆ.

2015ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಕೋಚ್ ಆಗಿ, ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದ ಪಾಂಟಿಂಗ್ ಇದೀಗ ಮತ್ತೊಮ್ಮೆ ಕೋಚಿಂಗ್‌ನತ್ತ ಮುಖ ಮಾಡಿದ್ದಾರೆ ಎನ್ನಲಾಗಿದೆ. ‘ಪಾಂಟಿಂಗ್ ಡೆಲ್ಲಿ ತಂಡದ ಕೋಚ್ ಆಗುವ ಸಾಧ್ಯತೆಯಿದೆ. ಡೆಲ್ಲಿ ಮಾತ್ರವಲ್ಲ, ಐಪಿಎಲ್‌ಗೆ ವಾಪಸಾಗುತ್ತಿರುವ ರಾಜಸ್ಥಾನ ರಾಯಲ್ಸ್ ಸಹ ಪಾಂಟಿಂಗ್‌ರೊಂದಿಗೆ ಮಾತುಕತೆ ನಡೆಸುತ್ತಿದೆ’ ಮುಂಬೈ ಕೋಚ್ ಸ್ಥಾನ ತೊರೆದ ಬಳಿಕ, ಆ ಸ್ಥಾನವನ್ನು ಶ್ರೀಲಂಕಾದ ಮಹೇಲಾ ಜಯವರ್ಧನೆ ತುಂಬಿದ್ದರು.

ಮುಂಬೈನಿಂದ ಮಾಲಿಂಗ ಹೊರಕ್ಕೆ?

2018ರ ಐಪಿಎಲ್ ವೇಳೆ ಶ್ರೀಲಂಕಾದ ವೇಗಿ ಲಸಿತ್ ಮಾಲಿಂಗರನ್ನು ಕೈ ಬಿಡಲು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ. ಪ್ರತಿ ತಂಡಕ್ಕೂ ಇಬ್ಬರು ಭಾರತೀಯರು, ಒಬ್ಬ ವಿದೇಶಿ ಆಟಗಾರನನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗುವುದು ಎನ್ನಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮಾಲಿಂಗ ರ ಬದಲಿಗೆ ವೇಗಿಗಳಾದ ಜಸ್ಪ್ರೀತ್ ಬೂ ಮ್ರಾ, ಮಿಚೆಲ್ ಮೆಕ್ಲನಾಘನ್ ಉಳಿಸಿಕೊಳ್ಳಲು ಮುಂಬೈ ನಿರ್ಧರಿಸಿದೆ ಎನ್ನಲಾಗುತ್ತಿದೆ. ರೋಹಿತ್ ಶರ್ಮಾ ರನ್ನು ಉಳಿಸಿಕೊಳ್ಳಲು ತಂಡದ ಮೊದಲ ಆದ್ಯತೆಯಾಗಿದೆ

click me!