ಸೆಮಿಫೈನಲ್ ಪ್ರವೇಶಿಸಿದ ಕೊರಿಯಾ

Published : Oct 15, 2016, 04:26 PM ISTUpdated : Apr 11, 2018, 12:59 PM IST
ಸೆಮಿಫೈನಲ್ ಪ್ರವೇಶಿಸಿದ ಕೊರಿಯಾ

ಸಾರಾಂಶ

ಟ್ರಾನ್ಸ್‌ಸ್ಟಾಡಿಯಾ ಅರೇನಾದಲ್ಲಿ ನಡೆಯುತ್ತಿರುವ ಪಂದ್ಯಾವಳಿಯ 8ನೇ ದಿನವಾದ ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಕೊರಿಯಾ ಆಟಗಾರರು ಅದ್ಭುತ ಪ್ರದರ್ಶನದೊಂದಿಗೆ ಗಮನ ಸೆಳೆದರು. ಆಸ್ಟ್ರೇಲಿಯಾ ಎದುರು ಕೊರಿಯಾ 38 ಅಂಕಗಳ ಅಂತರದಲ್ಲಿ ಜಯ ದಾಖಲಿಸಿ, 20 ಅಂಕಗಳೊಂದಿಗೆ ‘ಎ’ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿತು. ಇತ್ತ ಸೋತ ಆಸ್ಟ್ರೇಲಿಯಾ 5ನೇ ಸ್ಥಾನದೊಂದಿಗೆ ಮುಂದಿನ ಹಂತದಿಂದ ವಂಚಿತವಾಯಿತು.

ಅಹಮದಾಬಾದ್(ಅ.15): ಏಕಪಕ್ಷೀಯ ಹೋರಾಟ ಕಂಡುಬಂದ ಪಂದ್ಯದಲ್ಲಿ ಬಲಿಷ್ಠ ದಕ್ಷಿಣ ಕೊರಿಯಾ ತಂಡ, 7ನೇ ವಿಶ್ವಕಪ್ ಕಬಡ್ಡಿ ಪಂದ್ಯಾವಳಿಯ ಲೀಗ್ ಹಂತದಲ್ಲಿ 63-25 ಅಂಕಗಳಿಂದ ಆಸ್ಟ್ರೇಲಿಯಾ ತಂಡದ ವಿರುದ್ಧ ಭರ್ಜರಿ ಗೆಲುವು ದಾಖಲಿಸಿ ಸೆಮಿಫೈನಲ್'ಗೆ ಲಗ್ಗೆ ಇಟ್ಟಿತು.

ಇಲ್ಲಿನ ಟ್ರಾನ್ಸ್‌ಸ್ಟಾಡಿಯಾ ಅರೇನಾದಲ್ಲಿ ನಡೆಯುತ್ತಿರುವ ಪಂದ್ಯಾವಳಿಯ 8ನೇ ದಿನವಾದ ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಕೊರಿಯಾ ಆಟಗಾರರು ಅದ್ಭುತ ಪ್ರದರ್ಶನದೊಂದಿಗೆ ಗಮನ ಸೆಳೆದರು. ಆಸ್ಟ್ರೇಲಿಯಾ ಎದುರು ಕೊರಿಯಾ 38 ಅಂಕಗಳ ಅಂತರದಲ್ಲಿ ಜಯ ದಾಖಲಿಸಿ, 20 ಅಂಕಗಳೊಂದಿಗೆ ‘ಎ’ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿತು. ಇತ್ತ ಸೋತ ಆಸ್ಟ್ರೇಲಿಯಾ 5ನೇ ಸ್ಥಾನದೊಂದಿಗೆ ಮುಂದಿನ ಹಂತದಿಂದ ವಂಚಿತವಾಯಿತು.

ಅಂದಹಾಗೆ ಟೂರ್ನಿಯಲ್ಲಿ ತಾನಾಡಿದ ನಾಲ್ಕೂ ಪಂದ್ಯಗಳನ್ನು ಜಯಿಸಿದ ಅಜೇಯ ಕೊರಿಯಾ ಉಪಾಂತ್ಯಕ್ಕೆ ಧಾವಿಸಿತು. ಆಸ್ಟ್ರೇಲಿಯಾ ವಿರುದ್ಧ ಕೊರಿಯಾ ರೈಡಿಂಗ್ ಮತ್ತು ಟ್ಯಾಕಲ್‌ನಲ್ಲಿ ಪ್ರಭಾವಿ ಪ್ರದರ್ಶನ ತೋರಿತು. ಪಂದ್ಯದ ಆರಂಭದಿಂದಲೂ, ಆಸ್ಟ್ರೇಲಿಯ ಆಟಗಾರರ ವಿರುದ್ಧ ಸವಾರಿ ಮಾಡಿದ ಕೊರಿಯಾದ ಜಂಗ್ ಕುನ್ ಲೀ, ಚೆಲ್‌ಗ್ಯೂ ಶಿನ್ ಮತ್ತು ಡಾಂಗ್ ಗ್ಯು ಕಿಮ್ ಉತ್ತಮ ಆಟವಾಡಿದರು. ಮೊದಲಾರ್ಧದ ನಾಲ್ಕನೇ ನಿಮಿಷದಲ್ಲಿ ಆಸ್ಟ್ರೇಲಿಯಾವನ್ನು ಆಲೌಟ್‌ಗೆ ಗುರಿಪಡಿಸಿದ ಕೊರಿಯಾ ತಂಡ 10-2ರಿಂದ ಮುನ್ನಡೆಯಿತು.

ಆನಂತರದಲ್ಲೂ ಪ್ರಭಾವಿ ಆಟವಾಡಿದ ಕೊರಿಯಾ, ಮೊದಲ ಅವಯ ಅಂತ್ಯಕ್ಕೆ 30-14ರಿಂದ ಆಸ್ಟ್ರೇಲಿಯಾವನ್ನು ಹಿಂದಿಕ್ಕಿತು. ದ್ವಿತೀಯಾರ್ಧದ 34ನೇ ನಿಮಿಷದಲ್ಲಿ ಆಸ್ಟ್ರೇಲಿಯಾ ಆಟಗಾರರನ್ನು ಮತ್ತೊಮ್ಮೆ ಆಲೌಟ್ ಮಾಡಿದ ಕೊರಿಯಾ, ಲೋನಾ ಅಂಕದೊಂದಿಗೆ 47-23ರಿಂದ ಮುನ್ನಡೆ ಸಾಸಿತು. ಕೊನೆಯ ಕ್ಷಣದವರೆಗೂ ಅಂಕಗಳಿಕೆಯಲ್ಲಿ ಏರಿಕೆ ಕಾಯ್ದುಕೊಂಡ ಕೊರಿಯಾ ತಂಡ ಪಂದ್ಯದಾದ್ಯಂತ ವಿಜೃಂಭಿಸಿತು. ಜಂಗ್ ಕುನ್ ಲೀ, ಚೆಲ್‌ಗ್ಯೂ ಶಿನ್ ತಲಾ 11 ಅಂಕಗಳೊಂದಿಗೆ ಕೊರಿಯಾ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?