
ಕೇಪ್ ಟೌನ್(ನ.21): ದೇಶಿಯ ಟೂರ್ನಿಗಳಲ್ಲಿ ಅದ್ಬುತ ಪ್ರತಿಭೆಗಳು ಹೊರ ಬರುತ್ತದೆ ಎನ್ನುವುದಕ್ಕೆ ಸಾಕ್ಷಿಯೊಂದು ಇಲ್ಲಿದೆ, ದಕ್ಷಿಣ ಆಫ್ರಿಕಾದ ದೇಶಿಯ ಟಿ-20 ಟೂರ್ನಿಯಲ್ಲಿ ವಿಶ್ವದ ವೇಗದ ಬೌಲರ್ ಉಗಮಿಸಿದ್ದು, ಪಂದ್ಯವೊಂದರಲ್ಲಿ ಡೇವಿಡ್ ವೀಸ್ ವಿಶ್ವದ ವೇಗದ ಬಾಲ್ ಅನ್ನು ಎಸೆದ ಕೀರ್ತಿಗೆ ಪಾತ್ರರಾಗಿದ್ದಾರೆ.
ಪಾಕಿಸ್ತಾನದ ವೇಗಿ ಶೋಯಬ್ ಆಕ್ತರ್ ದಾಖಲೆಯನ್ನು ಅಳಿಸಿ ಹಾಕಿದ ಡೇವಿಡ್ ವೀಸ್, ಗಂಟೆಗೆ 173.8 ಕಿಮಿ ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಹೊಸದೊಂದು ದಾಖಲೆಯನ್ನು ನಿರ್ಮಿಸಿದ್ದಾರೆ.
ಈವರೆಗೂ 2003ರ ವಿಶ್ವಕಪ್ ನಲ್ಲಿ ಪಂದ್ಯವೊಂದರಲ್ಲಿ ಶೋಯಬ್ ಆಕ್ತರ್ 161.3 ಕಿ ಮೀ ದಲ್ಲಿ ಎಸೆದಿದ್ದ ಚೆಂಡು ದಾಖಲೆಗೆ ಸಾಕ್ಷಿಯಾಗಿತ್ತು. ಈ ದಾಖಲೆಯನ್ನು ವೀಸ್ ಸದ್ಯ ಮುರಿದ್ದು, ಟೈಟನ್ಸ್ ಹಾಗೂ ನೈಟ್ ನಡುವಿನ ಟಿ-20 ಪಂದ್ಯದಲ್ಲಿ ಈ ವೇಗದ ಎಸೆತದ ಸಾಧನೆ ಮಾಡಿದ್ದಾರೆ.
ಡೇವಿಡ್ ವೀಸ್ ಐಪಿಎಲ್'ನಲ್ಲಿಯೂ ತಮ್ಮ ಬೌಲಿಂಗ್ ಕೈ ಚಳಕ ತೋರಿಸಿದ್ದು, ಆರ್ ಸಿಬಿ ತಂಡದ ಪರ ಕಾಣಿಸಿಕೊಂಡಿದ್ದರು..
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.