ಕಿವೀಸ್'ಗೆ ಶರಣಾದ ಪಾಕಿಸ್ತಾನ

By Suvarna Web DeskFirst Published Nov 20, 2016, 2:55 PM IST
Highlights

ಪಾಕಿಸ್ತಾನ ಆತಿಥೇಯರಿಗೆ ಗೆಲ್ಲಲು 105 ರನ್ ಗುರಿ ನೀಡಿತು. ನಂತರ ಬ್ಯಾಟಿಂಗ್‌'ಗೆ ಇಳಿದ ನ್ಯೂಜಿಲೆಂಡ್ 2 ವಿಕೆಟ್ ನಷ್ಟಕ್ಕೆ 108 ರನ್ ಗಳಿಸಿ ಜಯ ಸಾಧಿಸಿತು.

ಕ್ರೈಸ್ಟ್‌ಚರ್ಚ್(ನ.20): ಪಂದ್ಯದುದ್ದಕ್ಕೂ ವೇಗದ ಬೌಲರ್‌'ಗಳ ದಾಳಿಗೆ ಕಂಗಲಾದ ಪಾಕಿಸ್ತಾನ, ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ 8 ವಿಕೆಟ್ ಸೋಲುಂಡಿದೆ. ಇದರೊಂದಿಗೆ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್ 1-0 ಮುನ್ನಡೆ ಸಾಧಿಸಿದೆ.

ಇಲ್ಲಿನ ಹ್ಯಾಗ್ಲಿ ಓವಲ್ ಕ್ರೀಡಾಂಗಣದಲ್ಲಿ 4ನೇ ದಿನವಾದ ಇಂದು 7 ವಿಕೆಟ್‌'ಗೆ 129 ರನ್‌ಗಳಿಂದ ಎರಡನೇ ಇನಿಂಗ್ಸ್ ಮುಂದುವರಿಸಿದ ಪ್ರವಾಸಿ ಪಾಕಿಸ್ತಾನ, 171 ರನ್‌'ಗಳಿಗೆ ಆಲೌಟ್ ಆಯಿತು. ಉಳಿದ 3 ವಿಕೆಟ್‌ಗಳಿಂದ ಕೇವಲ 52 ರನ್ ಗಳಿಸಿದ ಪಾಕಿಸ್ತಾನ, ಆತಿಥೇಯರಿಗೆ 105 ರನ್ ಗುರಿ ನೀಡಿತು. ನಂತರ ಬ್ಯಾಟಿಂಗ್‌'ಗೆ ಇಳಿದ ನ್ಯೂಜಿಲೆಂಡ್ 2 ವಿಕೆಟ್ ನಷ್ಟಕ್ಕೆ 108 ರನ್ ಗಳಿಸಿ ಜಯ ಸಾಧಿಸಿತು.

Latest Videos

ಅಲ್ಪ ಗುರಿ ಬೆನ್ನಟ್ಟಿದ ಆತಿಥೇಯ ನ್ಯೂಜಿಲೆಂಡ್ ತಂಡ ಆರಂಭದಲ್ಲಿ ಟಾಮ್ ಲಥಾಮ್ (9) ಅವರ ವಿಕೆಟ್ ಕಳೆದುಕೊಂಡರೂ, ನಾಯಕ ಕೇನ್ ವಿಲಿಯಮ್ಸನ್ (61: 77ಎಸೆತ, 4 ಬೌಂಡರಿ, 1 ಸಿಕ್ಸರ್) ಅರ್ಧಶತಕ ಬಾರಿಸಿ ಕಿವೀಸ್ ಗೆಲುವನ್ನು ಸುಗಮಗೊಳಿಸಿದರು. ವಿಲಿಯಮ್ಸನ್ ನಿರ್ಗಮನದ ನಂತರ ರಾವಲ್, ಪಾಕ್‌'ನ ಯಾಸಿರ್ ಶಾ ಬೌಲಿಂಗ್‌ನಲ್ಲಿ ಬೌಂಡರಿ ಗಳಿಸುವ ಮೂಲಕ ನ್ಯೂಜಿಲೆಂಡ್ ತಂಡಕ್ಕೆ ಜಯ ತಂದಿತ್ತರು. ಚೊಚ್ಚಲ ಪಂದ್ಯದಲ್ಲೇ 64 ರನ್‌'ಗೆ 7 ವಿಕೆಟ್ ಪಡೆದ ಕೊಲಿನ್ ಡಿ ಗ್ರಾಂಡಮ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಸಂಕ್ಷಿಪ್ತ ಸ್ಕೋರ್

ಪಾಕಿಸ್ತಾನ ಮೊದಲ ಇನಿಂಗ್ಸ್: 133

ನ್ಯೂಜಿಲೆಂಡ್ ಮೊದಲ ಇನಿಂಗ್ಸ್: 200

ಪಾಕಿಸ್ತಾನ ದ್ವಿತೀಯ ಇನಿಂಗ್ಸ್ 78.4 ಓವರ್‌ಗಳಲ್ಲಿ 171

(ಸೋಹೈಲ್ 40, ಅಜರ್ 31, ಬೋಲ್ಟ್ 37ಕ್ಕೆ 3)

ನ್ಯೂಜಿಲೆಂಡ್ ದ್ವಿತೀಯ ಇನಿಂಗ್ಸ್: 31.3 ಓವರ್‌ಗಳಲ್ಲಿ 2 ವಿಕೆಟ್‌ಗೆ 108

(ವಿಲಿಯಮ್ಸನ್ 61, ರಾವಲ್ ಅಜೇಯ 36, ಅಜರ್ 6ಕ್ಕೆ 1)

ಪಂದ್ಯಶ್ರೇಷ್ಠ: ಕೊಲಿನ್ ಡಿ ಗ್ರಾಂಡಮ್

click me!