151 ಎಸೆತಗಳಲ್ಲಿ 490 ರನ್ ಸ್ಫೋಟಿಸಿದ ದಕ್ಷಿಣ ಆಫ್ರಿಕಾದ ದಾಂಡಿಗ!

Published : Nov 18, 2017, 11:24 PM ISTUpdated : Apr 11, 2018, 12:59 PM IST
151 ಎಸೆತಗಳಲ್ಲಿ 490 ರನ್ ಸ್ಫೋಟಿಸಿದ ದಕ್ಷಿಣ ಆಫ್ರಿಕಾದ ದಾಂಡಿಗ!

ಸಾರಾಂಶ

ಸ್ಫೋಟಕ ಬ್ಯಾಟಿಂಗ್ ನಡೆಸಿದ ಶೇನ್ ಅವರ ಅದ್ಭುತ ಇನ್ನಿಂಗ್ಸ್'ನಲ್ಲಿ ಅಮೋಘ 57 ಸಿಕ್ಸರ್‌ಗಳು ಹಾಗೂ 27 ಬೌಂಡರಿಗಳು ಮೂಡಿಬಂದಿವೆ.

ಕೆಪ್‌ಟೌನ್(ನ.18): ದಕ್ಷಿಣ ಆಫ್ರಿಕಾದ 20 ವರ್ಷದ ಕ್ರಿಕೆಟಿಗನೊಬ್ಬ ಶನಿವಾರ ನಡೆದ ಏಕದಿನ ಪಂದ್ಯದಲ್ಲಿ 490 ರನ್ ಸ್ಫೋಟಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಇಲ್ಲಿ ನಡೆದ ಕ್ಲಬ್ ಪಂದ್ಯವೊಂದರಲ್ಲಿ ಎನ್‌ಡಬ್ಲ್ಯೂಯು ಪುಕ್ಕೆ ಕ್ಲಬ್ ಪರವಾಗಿ ಕಣಕ್ಕಿಳಿದಿದ್ದ ಶೇನ್ ಡ್ಯಾಡ್‌ವೆಲ್ ಈ ಸಾಧನೆಗೈದ ಯುವ ಕ್ರಿಕೆಟಿಗ.

ಪೋಚ್ ಡ್ರಾಪ್ ತಂಡದ ವಿರುದ್ಧ ನಡೆದ 50 ಓವರ್‌ಗಳ ಪಂದ್ಯದಲ್ಲಿ 151 ಎಸೆತಗಳನ್ನು ಎದುರಿಸಿದ ಶೇನ್, ಎದುರಾಳಿ ತಂಡದ ಬೌಲರ್‌ಗಳನ್ನು ಅಕ್ಷರಶಃ ಬೆಚ್ಚಿ ಬೀಳಿಸಿದ್ದಾರೆ. ಸ್ಫೋಟಕ ಬ್ಯಾಟಿಂಗ್ ನಡೆಸಿದ ಶೇನ್ ಅವರ ಅದ್ಭುತ ಇನ್ನಿಂಗ್ಸ್'ನಲ್ಲಿ ಅಮೋಘ 57 ಸಿಕ್ಸರ್‌ಗಳು ಹಾಗೂ 27 ಬೌಂಡರಿಗಳು ಮೂಡಿಬಂದಿವೆ. ಶೇನ್ ಅವರ ಈ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಎನ್‌ಡಬ್ಲ್ಯೂಯು ಪುಕ್ಕೆ ಕ್ಲಬ್ ನಿಗದಿತ 50 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 677 ರನ್ ಪೇರಿಸಿದೆ. ಶನಿವಾರ ಶೇನ್ ಅವರ 20 ವರ್ಷದ ಹುಟ್ಟುಹಬ್ಬ ಎಂಬುದು ಮತ್ತೊಂದು ವಿಶೇಷ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

3 ಗಂಟೆ ಕಾದರೂ ಕರಗದ ಮಂಜು, ಭಾರತ ಸೌತ್ ಆಫ್ರಿಕಾ 4ನೇ ಟಿ20 ಪಂದ್ಯ ರದ್ದು
Ind vs SA: ನಾಲ್ಕನೇ ಟಿ20 ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಬಿಗ್ ಶಾಕ್! ಗಿಲ್ ಔಟ್, ಯಾರಿಗೆ ಸಿಗತ್ತೆ ಚಾನ್ಸ್?