ಟೆಸ್ಟ್ ಕ್ರಿಕೆಟ್‌ಗೆ ಡೇಲ್ ಸ್ಟೇನ್ ದಿಢೀರ್ ವಿದಾಯ!

By Web Desk  |  First Published Aug 5, 2019, 9:34 PM IST

ಸೌತ್ ಆಫ್ರಿಕಾ ಹಿರಿಯ ವೇಗಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಪ್ಲೇಯರ್ ಡೇಲ್ ಸ್ಟೇನ್ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಸ್ಟೇನ್ ದಿಢೀರ್ ವಿದಾಯ ಹೇಳಿದ್ದೇಕೆ? ಇಲ್ಲಿದೆ ವಿವರ.


ಜೋಹಾನ್ಸ್‌ಬರ್ಗ್(ಆ.05): ಇಂಜುರಿ ಸಮಸ್ಯೆಯಿಂದ ಪ್ರಮುಖ  ಟೂರ್ನಿಗಳನ್ನು ಮಿಸ್ ಮಾಡಿಕೊಳ್ಳುತ್ತಿರುವ ಸೌತ್ ಆಫ್ರಿಕಾ ಸ್ಪೀಡ್ ಸ್ಟಾರ್ ಡೇಲ್ ಸ್ಟೇನ್ ಇದೀಗ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. 36 ವರ್ಷದ ಡೇಲ್ ಸ್ಟೇನ್, ಏಕದಿನ ಹಾಗೂ ಟಿ20 ಕ್ರಿಕೆಟ್‌ನಲ್ಲಿ ಮುಂದುವರಿಯಲಿದ್ದಾರೆ. ಸ್ಟೇನ್ ದಿಢೀರ್ ವಿದಾಯ ಅಭಿಮಾನಿಗಳಿಗೆ ಬೇಸರ ತಂದಿದೆ. ಆದರೆ ನಿಗದಿತ ಓವರ್‌ನಲ್ಲಿ ಸ್ಟೇನ್ ಮುಂದುವರಿಯುತ್ತಿರುವುದು ಕೊಂಚ ಸಮಾಧಾನ ತಂದಿದೆ.

ಇದನ್ನೂ ಓದಿ: ಪಂದ್ಯಕ್ಕೂ ಮುನ್ನ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ಸ್ಟೇನ್..!

Tap to resize

Latest Videos

undefined

ನಾನು ಹೆಚ್ಚು ಇಷ್ಟ ಪಡುವು ಟೆಸ್ಟ್ ಮಾದರಿ ಕ್ರಿಕೆಟ್‌ನಿಂದ ದೂರ ಸರಿಯುತ್ತಿದ್ದೇನೆ. ನನ್ನ ಪ್ರಕಾರ ಕ್ರಿಕೆಟ್‌ನಲ್ಲಿ ಟೆಸ್ಟ್ ಶ್ರೇಷ್ಠ. ಈ ಮಾದರಿ ಕ್ರಿಕೆಟಿಗನ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕವಾಗಿ ಪರೀಕ್ಷೆ ನಡೆಸುತ್ತೆ. ಏಕದಿನ ಹಾಗೂ ಟಿ20 ಕ್ರಿಕೆಟ್‌ನಲ್ಲಿ ಹೆಚ್ಚಿನ ಗಮನ ಕೇಂದ್ರಿಕರಿಸಲು ಟೆಸ್ಟ್ ಮಾದರಿಗೆ ವಿದಾಯ ಹೇಳುತ್ತಿದ್ದೇನೆ. ನನಗೆ ಸಹಕರಿಸಿದ, ನನ್ನನ್ನು ಪ್ರೋತ್ಸಾಹಿಸಿದ, ನನ್ನ ಬೆಂಬಲಕ್ಕೆ ನಿಂತ ಎಲ್ಲರಿಗೂ ಧನ್ಯವಾದ. ನಾನು ನಿಗದಿತ ಓವರ್ ಕ್ರಿಕೆಟ್‌ನಲ್ಲಿ ಸೌತ್ ಆಫ್ರಿಕಾ ತಂಡವನ್ನು ಪ್ರತಿನಿಧಿಸಲು ಎದುರನೋಡುತ್ತಿದ್ದೇನೆ ಎಂದು ಸ್ಟೇನ್ ಹೇಳಿದ್ದಾರೆ.

2015ರ ಡರ್ಬನ್ ಟೆಸ್ಟ್ ಪಂದ್ಯದಲ್ಲಿ ಭುಜದ ನೋವಿಗೆ ತುತ್ತಾದ ಸ್ಟೇನ್, ಬರೊಬ್ಬರಿ 1 ವರ್ಷಗಳ ಬಳಿಕ ಮತ್ತೆ ಕಮ್‌ಬ್ಯಾಕ್ ಮಾಡಿದರು. 2016ರಲ್ಲಿ ಮತ್ತೆ ಗಾಯದ ಸಮಸ್ಯೆಗೆ ತುತ್ತಾದ ಸ್ಟೇನ್ 2 ವರ್ಷಗಳ ಬಳಿಕ 2018ರಲ್ಲಿ ತಂಡಕ್ಕೆ ಮರಳಿದರು. ಇನ್ನು 2019ರ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದ ಸ್ಟೇನ್, ಐಪಿಎಲ್ ಟೂರ್ನಿ ವೇಳೆ ಇಂಜುರಿಗೆ ತುತ್ತಾಗಿ ಮತ್ತೆ ಹೊರಗುಳಿದರು. ಇಂಜುರಿಯಿಂದಲೇ ಸ್ಟೇನ್ ಕರಿಯರ್ ಹಲವು ಏರಿಳಿತ ಕಂಡಿತು.

2004ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ  ಸ್ಟೇನ್, 439 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಸೌತ್ಆಫ್ರಿಕಾ ಪರ ಗರಿಷ್ಠ ವಿಕೆಟ್ ಪಡೆದ ಬೌಲರ್ ಅನ್ನೋ ದಾಖಲೆ ಬರೆದಿದ್ದಾರೆ. 26 ಬಾರಿ 5 ವಿಕೆಟ್ ಕಬಳಿ ಮಿಂಚಿದ್ದಾರೆ. 22.95ರ ಎಕಾನಮಿಯಲ್ಲಿ ಬೌಲಿಂಗ್ ಮಾಡಿರುವ ಸ್ಟೇನ್, ಘಟಾನುಘಟಿ ಬ್ಯಾಟ್ಸ್‌ಮನ್‌ಗಳಿಗೆ ನಡುಕ ಹುಟ್ಟಿಸಿದ್ದರು.

click me!