
ಮುಂಬೈ(ಆ.07): ಟೀಂ ಇಂಡಿಯಾ ಮಾಜಿ ನಾಯಕ, ಭಾರತ ಅಂಡರ್ 19 ತಂಡದ ಕೋಚ್ ರಾಹುಲ್ ದ್ರಾವಿಡ್‌ಗೆ ಬಿಸಿಸಿಐ ನೋಟಿಸ್ ನೀಡಿದೆ. ಸ್ವಹಿತಾಸಕ್ತಿ ಸಂಘರ್ಷದ ಕಾರಣಕ್ಕೆ ದ್ರಾವಿಡ್‌ಗೆ ಬಿಗ್‌ಬಾಸ್‌ಗಳು ನೋಟಿಸ್ ಜಾರಿ ಮಾಡಿದ್ದಾರೆ. 2 ವಾರದಲ್ಲಿ ಉತ್ತರ ನೀಡುವಂತೆಯೂ ಸೂಚಿಸಲಾಗಿದೆ. ಆದರೆ ಬಿಸಿಸಿಐ ನಡೆಯನ್ನು ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗರು ವಿರೋಧಿಸಿದ್ದಾರೆ.
ಇದನ್ನೂ ಓದಿ: ದ್ರಾವಿಡ್‌ಗೆ BCCI ನೋಟಿಸ್; 2 ವಾರದಲ್ಲಿ ನೀಡಬೇಕಿದೆ ಉತ್ತರ!
ಮಾಜಿ ನಾಯಕ ಸೌರವ್ ಗಂಗೂಲಿ ಹಾಗೂ ಹರ್ಭಜನ್ ಸಿಂಗ್ ಬಿಸಿಸಿಐ ವಿರುದ್ಧ ಆಕ್ರೋಷ ವ್ಯಕ್ತಪಡಿಸಿದ್ದಾರೆ. ಸ್ವಹಿತಾಸಕ್ತಿ ಸಂಘರ್ಷ ಕಾರಣವೊಡ್ಡಿ ನೋಟಿಸ್ ನೀಡುವುದು ಇದೀಗ ಬಿಸಿಸಿಐ ಫ್ಯಾಶನ್ ಆಗಿದೆ. ಈ ಮೂಲಕ ಸದ ಕಾಲ ಸುದ್ದಿಯಲ್ಲಿರಲು ಬಯಸುತ್ತಿದೆ. ರಾಹುಲ್ ದ್ರಾವಿಡ್‌ಗೆ ಬಿಸಿಸಿಐ ನೋಟಿಸ್ ನೀಡಿದೆ. ಭಾರತೀಯ ಕ್ರಿಕೆಟ್‌ನ್ನು ದೇವರೇ ಕಾಪಾಡಬೇಕು ಎಂದು ಗಂಗೂಲಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಮೋದಿ ಸರ್ಕಾರದ ಬಳಿಕ ಲಡಾಖ್‌ಗೆ BCCI ಅಭಯ!
ಗಂಗೂಲಿ ಬೆನ್ನಲ್ಲೇ ಹರ್ಭಜನ್ ಸಿಂಗ್ ಕೂಡ ಟ್ವೀಟ್ ಮಾಡಿದ್ದಾರೆ. ಎತ್ತ ಸಾಗುತ್ತಿದೆ? ಇದು ಆತಂಕಕಾರಿ ಬೆಳವಣಿಗೆ. ರಾಹುಲ್ ದ್ರಾವಿಡ್‌ಗಿಂತ ಉತ್ಯುತ್ತಮ ಆಟಗಾರ ಹಾಗೂ ವ್ಯಕ್ತಿ ಭಾರತೀಯ ಕ್ರಿಕೆಟ್‌ನಲ್ಲಿ ಇಲ್ಲ. ಈ ದಿಗ್ಗಜನಿಗೆ ನೋಟಿಸ್ ನೀಡೋ ಮೂಲಕ ಬಿಸಿಸಿಐ ಅವಮಾನ ಮಾಡಿದೆ. ಭಾರತದ ಕ್ರಿಕೆಟ್ ಅಭಿವೃದ್ದಿಗೆ ದ್ರಾವಿಡ್ ಸೇವೆ ಅಗತ್ಯ. ನಿಜ. ದೇವರೇ ಕಾಪಾಡಬೇಕು ಎಂದು ಹರ್ಭಜನ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.