ಆಯ್ಕೆ ಸಮಿತಿ ವಿರುದ್ಧ ಮನೋಜ್‌ ತಿವಾರಿ ಕಿಡಿ!

Published : Aug 07, 2019, 02:10 PM IST
ಆಯ್ಕೆ ಸಮಿತಿ ವಿರುದ್ಧ ಮನೋಜ್‌ ತಿವಾರಿ ಕಿಡಿ!

ಸಾರಾಂಶ

ಆಗಸ್ಟ್ 17ರಿಂದ ಆರಂಭವಾಗಲಿರುವ ದುಲೀಪ್ ಟ್ರೋಫಿ ಟೂರ್ನಿಗೆ ಮೂರು ತಂಡಗಳಿಗೂ ಆಟಗಾರರ ಹೆಸರನ್ನು ಅಂತಿಮಗೊಳಿಸಿದೆ. ಈ ವೇಳೆ ಟೂರ್ನಿಗೆ ಆಯ್ಕೆ ಆಗದ ಮನೋಜ್ ತಿವಾರಿ ಸರಣಿ ಟ್ವೀಟ್ ಮೂಲಕ ಆಯ್ಕೆ ಸಮಿತಿಯ ಮೇಲೆ ಕಿಡಿಕಾರಿದ್ದಾರೆ. ಏನಿದು ಸ್ಟೋರಿ, ನೀವೇ ನೋಡಿ...

ನವದೆಹಲಿ[ಆ.07]: ಬಂಗಾಳ ಕ್ರಿಕೆಟ್‌ ತಂಡದ ನಾಯಕ ಮನೋಜ್‌ ತಿವಾರಿ, ದುಲೀಪ್‌ ಟ್ರೋಫಿಗೆ ತಮ್ಮನ್ನು ಆಯ್ಕೆ ಮಾಡದ್ದಕ್ಕೆ ಬಿಸಿಸಿಐ ಆಯ್ಕೆ ಸಮಿತಿ ವಿರುದ್ಧ ಕಿಡಿಕಾಡಿದ್ದಾರೆ. ಸರಣಿ ಟ್ವೀಟ್‌ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಮನೋಜ್‌, ಆಯ್ಕೆಗೆ ಮಾನದಂಡಗಳೇನು ಎಂದು ಬಿಸಿಸಿಐ ಆಯ್ಕೆ ಸಮಿತಿಯನ್ನು  ಪ್ರಶ್ನಿಸಿದ್ದಾರೆ. 

ಐಪಿಎಲ್ ಹರಾಜಿನಲ್ಲಿ ಅನ್‌ಸೋಲ್ಡ್-ಗರಂ ಆದ ಟೀಂ ಇಂಡಿಯಾ ಕ್ರಿಕೆಟಿಗ!

‘ಕಳೆದ ಋುತುವಿನಲ್ಲಿ ನಾನು ಉತ್ತಮ ಪ್ರದರ್ಶನ ನೀಡಿದ್ದೇನೆ. ಹೊಸದಾಗಿ ಸೇರ್ಪಡೆಗೊಂಡ ತಂಡಗಳ ಪರ ಆಡಿದ ಕೆಲ ಆಟಗಾರರಿಗೆ ಸ್ಥಾನ ನೀಡಲಾಗಿದೆ. ಗುಣಮಟ್ಟದ ಬೌಲಿಂಗ್‌ ಪಡೆ ಹೊಂದಿರುವ ತಂಡಗಳ ವಿರುದ್ಧ ನಾನು ದ್ವಿಶತಕ, ಶತಕ ಬಾರಿಸಿದ್ದೇನೆ. ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತಿದೆ ಎನ್ನುವ ಬಗ್ಗೆ ಸ್ಪಷ್ಟತೆಗೆ ಆಗ್ರಹಿಸುತ್ತೇನೆ’ ಎಂದು ತಿವಾರಿ ಟ್ವೀಟ್‌ ಮಾಡಿದ್ದಾರೆ.

ದುಲೀಪ್‌ ಟ್ರೋಫಿ 2019: ಮೂವರು ಕನ್ನಡಿಗರಿಗೆ ಸ್ಥಾನ

2015ರಲ್ಲಿ ಜಿಂಬಾಬ್ವೆ ವಿರುದ್ದ ಮನೋಜ್ ತಿವಾರಿ ಕಡೆಯ ಬಾರಿಗೆ ಏಕದಿನ ಪಂದ್ಯದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. 2019ರ ಐಪಿಎಲ್ ಹರಾಜಿನಲ್ಲೂ ಯಾವೊಬ್ಬ ಪ್ರಾಂಚೈಸಿಯೂ ಮನೋಜ್ ಖರೀದಿಸುವ ಮನಸು ಮಾಡಿರಲಿಲ್ಲ. ಅಂದಹಾಗೆ ದುಲೀಪ್ ಟ್ರೋಫಿ ಟೂರ್ನಿಯು ಆಗಸ್ಟ್ 17ರಿಂದ ಆರಂಭವಾಗಲಿದ್ದು, ಇಂಡಿಯಾ ರೆಡ್, ಇಂಡಿಯಾ ಬ್ಲೂ ಹಾಗೂ ಇಂಡಿಯಾ ಗ್ರೀನ್ ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಸ್ಮೃತಿ ಮಂಧನಾ ಮದುವೆ ಮುರಿದ ಬಳಿಕ ಟೀಮ್‌ ಇಂಡಿಯಾ ಆಟಗಾರ್ತಿಯರ ಮಹಾ ನಿರ್ಧಾರ!