ಸೌರಭ್ ವರ್ಮಾ ಚಾಂಪಿಯನ್

Published : Oct 16, 2016, 12:09 PM ISTUpdated : Apr 11, 2018, 12:36 PM IST
ಸೌರಭ್ ವರ್ಮಾ ಚಾಂಪಿಯನ್

ಸಾರಾಂಶ

ಈ ಹಿಂದೆ ನಡೆದಿದ್ದ ಬೆಲ್ಜಿಯಂ ಮತ್ತು ಪೋಲೆಂಡ್ ಅಂತಾರಾಷ್ಟ್ರೀಯ ಚಾಲೆಂಜರ್ಸ್‌ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ರನ್ನರ್ ಅಪ್‌ಗೆ ತೃಪ್ತಿಪಟ್ಟಿದ್ದ ಸೌರಭ್, ಚೈನೀಸ್ ತೈಪೆ ಟೂರ್ನಿಯಲ್ಲಿ ಟ್ರೋಫಿ ಗೆಲ್ಲುವಲ್ಲಿ ಸಫಲರಾಗಿದ್ದಾರೆ.

ತೈಪೆ ಸಿಟಿ(ಅ.16): ಭಾರತದ ಉದಯೋನ್ಮುಖ ಆಟಗಾರ ಸೌರಭ್ ವರ್ಮಾ, ಚೈನೀಸ್ ತೈಪೆ ಗ್ರ್ಯಾನ್ ಪ್ರೀ ಬ್ಯಾಡ್ಮಿಂಟನ್ ಪಂದ್ಯಾವಳಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಪ್ರಶಸ್ತಿ ಪಡೆದಿದ್ದಾರೆ.

ಇಲ್ಲಿನ ಬ್ಯಾಡ್ಮಿಂಟನ್ ಕೋರ್ಟ್‌ನಲ್ಲಿ ಇಂದು ನಡೆದ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಭಾರತದ ಸೌರಭ್ 12-10, 12-10, 3-3 ಗೇಮ್‌ಗಳಿಂದ ಮಲೇಷ್ಯಾದ ಡರೇನ್ ಲೀವ್ ಎದುರು ಗೆಲುವು ಸಾಸಿದರು. 2011ರ ರಾಷ್ಟ್ರೀಯ ಚಾಂಪಿಯನ್ ಸೌರಭ್, ಮಲೇಷ್ಯಾದ ಆಟಗಾರನ ಎದುರು ಮೊದಲ ಎರಡು ಗೇಮ್‌ಗಳಲ್ಲಿ 2 ಅಂಕಗಳಿಂದ ಮುನ್ನಡೆ ಸಾಧಿಸಿದ್ದರು. ನಂತರದ ಗೇಮ್‌ನಲ್ಲಿ 3-3ರಿಂದ ಸಮಬಲ ಸಾಧಿಸಿದ್ದ ವೇಳೆಯಲ್ಲಿ ಡರೇನ್ ಭುಜದ ನೋವಿಗೆ ತುತ್ತಾಗಿದ್ದರಿಂದ ಪಂದ್ಯದಿಂದ ಹೊರ ನಡೆದರು. ಮೊದಲ ಎರಡು ಗೇಮ್‌ಗಳನ್ನು ಜಯಿಸಿದ ಆಧಾರದಲ್ಲಿ ಸೌರಭ್ ಅವರನ್ನು ವಿಜಯಿ ಎಂದು ಘೋಷಿಸಲಾಯಿತು.

ಈ ಹಿಂದೆ ನಡೆದಿದ್ದ ಬೆಲ್ಜಿಯಂ ಮತ್ತು ಪೋಲೆಂಡ್ ಅಂತಾರಾಷ್ಟ್ರೀಯ ಚಾಲೆಂಜರ್ಸ್‌ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ರನ್ನರ್ ಅಪ್‌ಗೆ ತೃಪ್ತಿಪಟ್ಟಿದ್ದ ಸೌರಭ್, ಚೈನೀಸ್ ತೈಪೆ ಟೂರ್ನಿಯಲ್ಲಿ ಟ್ರೋಫಿ ಗೆಲ್ಲುವಲ್ಲಿ ಸಫಲರಾಗಿದ್ದಾರೆ. ಪಂದ್ಯದ ಮೊದಲ ಗೇಮ್‌ನ ಆರಂಭದಲ್ಲಿ 5-3ರಿಂದ ಮುನ್ನಡೆ ಪಡೆದಿದ್ದ ಸೌರಭ್‌ಗೆ ನಂತರದ ಆಟದಲ್ಲಿ ಮಲೇಷ್ಯಾದ ಡರೇನ್ ಸತತ 5 ಅಂಕ ಪಡೆದು 8-5ರಿಂದ ಹಿಂದಿಕ್ಕಿದರು. ನಂತರದ ಆಟದಲ್ಲಿ ಸುಧಾರಿಸಿದ ಸೌರಭ್ 7-10ರಿಂದ ಹಿನ್ನಡೆ ಅನುಭವಿಸಿದರೂ, ಅಂತಿಮ ಕ್ಷಣದಲ್ಲಿ ಸತತ 5 ಅಂಕ ಪಡೆದು 12-10ರಿಂದ ಮೇಲುಗೈ ಸಾಧಿಸಿದರು.

ಎರಡನೇ ಗೇಮ್‌ನಲ್ಲಿ ಪ್ರಬಲ ಸರ್ವ್‌ಗಳ ಮೂಲಕ ಗಮನಸೆಳೆದ ಸೌರಭ್, ಮಲೇಷ್ಯಾ ಆಟಗಾರನಿಗೆ ಮುನ್ನಡೆಯಲು ಅವಕಾಶ ನೀಡದೆ, ಉತ್ತಮ ಮುನ್ನಡೆ ಕಾಯ್ದುಕೊಂಡರು. 3ನೇ ಗೇಮ್‌ನಲ್ಲಿ 3-3 ಅಂಕಗಳಿಸಿದ್ದಾಗ ಡರೇನ್ ನಿವೃತ್ತಿ ಪಡೆದು, ಸೌರಭ್‌ಗೆ ಜಯ ನೀಡಿದರು. ಸೌರಭ್ ಕಳೆದ ವರ್ಷದ ಬಹುತೇಕ ಸಮಯ ಮೊಣಕೈ ಮತ್ತು ಮಂಡಿರಜ್ಜು ಗಾಯದ ಸಮಸ್ಯೆಗೆ ತುತ್ತಾಗಿ ವಿಶ್ರಾಂತಿಯಲ್ಲಿಯೇ ಕಾಲ ಕಳೆದಿದ್ದರು. ಇದೀಗ ಪ್ರಸಕ್ತ ವರ್ಷ ಗಣನೀಯ ಯಶಸ್ಸಿನೊಂದಿಗೆ ಟ್ರೋಫಿಗಳನ್ನು ಜಯಿಸಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?