
ಮುಂಬೈ(ಅ.16): ರಿಂಗ್ ಫೈಟಿಂಗ್'ನಲ್ಲಿ ಪ್ರಪಂಚದಾದ್ಯಂತ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ಡಬ್ಲ್ಯೂಡಬ್ಲ್ಯೂಇನಲ್ಲಿ ಭಾರತೀಯ ಫೈಟರ್ ಗಳು ಬೆಳೆಣಿಕೆಯಲ್ಲಿ ಕಾಣಿಸಿಕೊಂಡಿದ್ದರು ಭಾರತದಲ್ಲಿ ಹೆಚ್ಚು ಮಂದಿ ಅಭಿಮಾನಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಈ ಹಿನ್ನಲೆಯಲ್ಲಿ ಡಬ್ಲ್ಯೂಡಬ್ಲ್ಯೂಇ ಭಾರತದ ಫೈಟರ್ ಗಳನ್ನು ರಿಂಗ್ ನಲ್ಲಿ ಕಾಣಿಸಿಕೊಳ್ಳುವಂತೆ ಮಾಡುವ ಸಲುವಾಗಿ ಗ್ರೇಟ್ ಖಲಿ ನಂತರ ಮತ್ತೊಬ್ಬ ಭಾರತೀಯನನ್ನು ರಿಂಗ್'ನಲ್ಲಿ ಇಳಿಸಲು ಸಿದ್ಧತೆ ನಡೆಸಿದೆ. ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ಭಾರತದ ಕುಸ್ತಿಪಟು ಸುಶೀಲ್ ಕುಮಾರ್ ಡಬ್ಲ್ಯೂಡಬ್ಲ್ಯೂಇಗೆ ಸೇರುವ ಸಾಧ್ಯತೆಯಿದೆ.
ಡಬ್ಲ್ಯೂಡಬ್ಲ್ಯೂಇನ ಅಭಿವೃದ್ಧಿ ನಿರ್ದೇಶಕ ಕನ್ಯೋನ್ ಸೆಮನ್, 33 ವರ್ಷ ವಯಸ್ಸಿನ ಸುಶೀಲ್ ಅವರೊಂದಿಗೆ ಡಬ್ಲ್ಯೂಡಬ್ಲ್ಯೂಇಗೆ ಸೇರ್ಪಡೆಯ ಬಗ್ಗೆ ಚರ್ಚಿಸಿದ್ದು, ಉನ್ನತ ಕುಸ್ತಿಯ ಪ್ರಾಂಚೈಸಿ ಹುಡುಕಾಟದಲ್ಲಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.