
ತೈಪೆ ಸಿಟಿ(ಅ.15): ಯುವ ಆಟಗಾರ ಸೌರಭ್ ವರ್ಮಾ ಚೈನೀಸ್ ತೈಪೆ ಗ್ರ್ಯಾನ್ ಪ್ರೀ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಪ್ರಶಸ್ತಿ ಸುತ್ತಿಗೆ ಧಾವಿಸಿದ್ದಾರೆ.
2011ರ ರಾಷ್ಟ್ರೀಯ ಚಾಂಪಿಯನ್ ಸೌರಭ್, ಇಂದು ನಡೆದ ಪುರುಷರ ಸಿಂಗಲ್ಸ್ ವಿಭಾಗದ ಸೆಮಿೈನಲ್ ಕಾದಾಟದಲ್ಲಿ ಸ್ಥಳೀಯ ಆಟಗಾರ ಹಾಗೂ ಪ್ರಶಸ್ತಿ ಫೇವರಿಟ್ ಎನಿಸಿದ್ದ ಹ್ಸು ಜೆನ್ ಹಾವೊ ವಿರುದ್ಧ 11-4, 11-7, 11-9ರಿಂದ ಜಯ ಸಾಸಿ ಫೈನಲ್‌ಗೆ ತಲುಪಿದರು. ಈ ಋತುವಿನ ಬೆಲ್ಜಿಯಂ ಮತ್ತು ಪೋಲೆಂಡ್ ಪಂದ್ಯಾವಳಿಗಳಲ್ಲಿ ಫೈನಲ್ ತಲುಪಿದ್ದ ಸೌರಭ್‌ಗೆ ಈ ಋತುವಿನಲ್ಲಿ ಮೂರನೇ ಫೈನಲ್ ಇದಾಗಿದೆ.
ಹಲವಾರು ಗಾಯದ ಸಮಸ್ಯೆಯಿಂದಾಗಿ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಪಂದ್ಯಾವಳಿಯಿಂದ ವಂಚಿತವಾಗಿದ್ದ ಸೌರಭ್, ಇದೀಗ ಮುಂದಿನ ಸುತ್ತಿನಲ್ಲಿ ಮಲೇಷಿಯಾದ ಡರೆನ್ ಲಿಯೆವ್ ಮತ್ತು ಚೈನೀಸ್ ತೈಪೆಯ ಲಿನ್ ಯು ಸೀನ್ ನಡುವಣದ ಪಂದ್ಯದಲ್ಲಿ ಗೆದ್ದವರೊಂದಿಗೆ ಕಾದಾಡಲಿದ್ದಾರೆ.
ಮಧ್ಯಪ್ರದೇಶದ 23ರ ಹರೆಯದ ಸೌರಭ್ 33 ನಿಮಿಷಗಳ ಕಾದಾಟದಲ್ಲಿ ಚೈನೀಸ್ ತೈಪೆಯ ಆಟಗಾರನ ಎದುರು ಪ್ರಾಬಲ್ಯ ಮೆರೆದರು. ಮೊದಲ ಗೇಮ್ ಅನ್ನು 2-0 ಅಂತರದಿಂದ ಮುನ್ನಡೆ ಸಾಸಿದ ಸೌರಭ್ ಇದೇ ಹಾದಿಯಲ್ಲಿ ಸಾಗಿ ತ್ವರಿತಗತಿಯಲ್ಲೇ ಗೇಮ್ ವಶಕ್ಕೆ ಪಡೆದರು. ಆದಾಗ್ಯೂ ಎರಡು ಮತ್ತು ಮೂರನೇ ಗೇಮ್‌ನಲ್ಲಿ ಹ್ಸು ಜೆನ್ ಕೊಂಚ ತಿರುಗೇಟು ನೀಡಲು ಮುಂದಾದರು. ಅದರಲ್ಲೂ ಮೂರನೇ ಗೇಮ್‌ನಲ್ಲಿ ಜಿದ್ದಾಜಿದ್ದಿನ ಹೋರಾಟ ನಡೆಯಿತು. ಒಂದು ಹಂತದಲ್ಲಿ 5-5 ಮತ್ತು 8-6ರ ಮುನ್ನಡೆ ಸಾಸಿದ ಜೆನ್, ಮೇಲುಗೈ ಸಾಸಿದರು. ಆದರೆ, ಕೂಡಲೇ ಎಚ್ಚೆತ್ತ ಜೆನ್, ಬ್ಯಾಕ್ ಟು ಬ್ಯಾಕ್ 3 ಪಾಯಿಂಟ್ಸ್ ಕಲೆಹಾಕಿದ್ದಲ್ಲದೆ, ಅಲ್ಲಿಂದಾಚೆಗೆ ಸ್ಥಳೀಯ ಆಟಗಾರ ತಿರುಗಿಬೀಳದಂತೆ ನೋಡಿಕೊಂಡರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.